ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 14, 2017
ಸ್ವರ್ಗ ಅಂಗನವಾಡಿಯಲ್ಲಿ ಮಕ್ಕಳ ದಿನಾಚರಣೆ
ಪೆರ್ಲ: ಮಕ್ಕಳ ಭವಿಷ್ಯ ವನ್ನು ಬೆಳಗುವ ಅಂಗನವಾಡಿಯಲ್ಲಿ ಮಗುವನ್ನು ಸಸಿಯಂತೆ ಪೋಶಿಸಿ ಸಮಾಜಕ್ಕೆ ,ದೇಶಕ್ಕೆ ಉತ್ತಮ ಪ್ರಜೆಯಾಗಿ ನೀಡುತ್ತಿರುವ ಸೇವೆಯು ಅಪಾರವೆಂದು ಪಡ್ರೆ ವಾಣೀನಗರ ಶಾಲಾ ರಕ್ಷಕ-ಶಿಕ್ಷಕ ಸಂಘದ ಅಧ್ಯಕ್ಷ ಯಸ್.ಬಿ ನರಸಿಂಹ ಪೂಜಾರಿ ನುಡಿದರು.
ಅವರು ಸ್ವರ್ಗ ಅಂಗನವಾಡಿಯಲ್ಲಿ ಮಂಗಳವಾರ ನಡೆದ ಮಕ್ಕಳ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.
ಸಭೆಯ ಅಧ್ಯಕ್ಷತೆಯನ್ನು ಎಣ್ಮಕಜೆ ಗ್ರಾಮ ಪಂಚಾಯತು ಸದಸ್ಯೆ,ಅಂಗನವಾಡಿ ಶಿಕ್ಷಕಿ ಚಂದ್ರಾವತಿ ಯಂ ವಹಿಸಿದರು.ಮುಖ್ಯ ಅಥಿತಿಯಾಗಿ ಬದಿಯಡ್ಕ ಠಾಣಾಧಿಕಾರಿ ಪ್ರಶಾಂತ್ ,ಬರಹಗಾರರಾದ ಸುಂದರ ಬಾರಡ್ಕ, ಕುಟುಂಬಶ್ರೀ ಎ.ಡಿ.ಯಸ್ ಅಧ್ಯಕ್ಷೆ ವಲ್ಸಮ್ಮ ಉಪಸ್ಥಿತರಿದ್ದರು.ದಿನಾಚರಣೆಯ ಅಂಗವಾಗಿ ಮಕ್ಕಳಿಗೆ,ಕೌಮಾರ ಪ್ರಾಯ ಮಕ್ಕಳಿಗೆ,ಹೆತ್ತವರಿಗೆ ನಡೆದ ಸ್ವದರ್ೆಯ ವಿಜೇತರಿಗೆ ಬಹುಮಾನವನ್ನು ವಿತರಿಸಲಾಯಿತು.ರವಿ ವಾಣೀನಗರ ಸ್ವಾಗತಿಸಿ, ಪ್ರತಿಭ ವಂದಿಸಿದರು .ರಜತಾ ಭಟ್ ಕಾರ್ಯಕ್ರಮ ನಿರೂಪಿಸಿದರು.ಈ ಸಂದರ್ಭದಲ್ಲಿ ಅಂಗನವಾಡಿಗೆ ವಲ್ಸಮ್ಮ ಇವರು ನೀಡಿದ ಕೊಡುಗೆಯನ್ನು ಅಂಗನವಾಡಿ ಶಿಕ್ಷಕಿ ಚಂದ್ರಾವತಿ ಸ್ವೀಕರಿಸಿದರು.ಮಕ್ಕಳ ದಿನಾಚರಣೆಯ ಅಂಗವಾಗಿ ಮಕ್ಕಳ,ಹೆತ್ತವರ ಆಕರ್ಷಕ ಮೆರವಣಿಗೆ ವಿಶೇಷ ಮೆರಗು ನೀಡಿತು.



