ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 10, 2017
ದೆಹಲಿಯಲ್ಲಿ ಮಿತಿ ಮೀರಿದ ಮಾಲಿನ್ಯ: ಪರಿಸರ ಸಚಿವಾಲಯದಿಂದ ಉನ್ನತ ಮಟ್ಟದ ಸಮಿತಿ ರಚನೆ
ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ವಾಯು ಮಾಲಿನ್ಯ ಮಿತಿ ಮೀರಿದ್ದು, ಇದಕ್ಕೆ ಪರಿಹಾರ ಕಂಡುಕೊಳ್ಳುವುದಕ್ಕಾಗಿ ಪರಿಸರ ಸಚಿವಾಲಯ ಗುರುವಾರ ಉನ್ನತ ಮಟ್ಟದ ಸಮಿತಿಯೊಂದನ್ನು ರಚನೆ ಮಾಡಿದೆ.
ಪರಿಸರ ಸಚಿವಾಲಯದ ಕಾರ್ಯದಶರ್ಿಯ ನೇತೃತ್ವದಲ್ಲಿ ಏಳು ಸದಸ್ಯರನ್ನೊಳಗೊಂಡ ಸಮಿತಿ ರಚಿಸಲಾಗಿದ್ದು, ಈ ಸಮಿತಿ ತಾತ್ಕಾಲಿಕ ಮತ್ತು ದೀರ್ಘಕಾಲಿಕ ಕ್ರಮಗಳ ಕುರಿತು ನಿಧರ್ಾರ ತೆಗೆದುಕೊಳ್ಳಲಿದೆ.
ಪರಿಸರ ಸಚಿವಾಲಯದ ಕಾರ್ಯದಶರ್ಿ ಸಿ.ಕೆ.ಮಿಶ್ರಾ ಅವರು ಕೇಂದ್ರ ಮಾಲಿನ್ಯ ನಿಯಂತ್ರ ಮಂಡಳಿ ಹಾಗೂ ಸುಪ್ರೀಂ ಕೋಟರ್್ ನೇಮಿತ ಪರಿಸರ ಮಾಲಿನ್ಯ ತಡೆ ಮತ್ತು ನಿಯಂತ್ರಣ ಪ್ರಾಧಿಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಉನ್ನತ ಮಟ್ಟದ ಸಮಿತಿ ರಚಿಸಲಾಗಿದೆ.
ವಾಯು ಮಾಲಿನ್ಯ ಅಪಾಯದ ಮಟ್ಟಕ್ಕೇರಿದ್ದು, ಇದರ ವಿರುದ್ಧ ಕ್ಷೀಪ್ರ ಕ್ರಮ ತೆಗೆದುಕೊಳ್ಳುವಂತೆಯೂ ಪರಿಸರ ಸಚಿವಾಲಯ ದೆಹಲಿಯ ನೆರೆಯ ರಾಜ್ಯಗಳಿಗೂ ಸೂಚಿಸಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


