HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಅವ್ಯವಸ್ಥಿತತೆಯಿಂದ ಹೊರಬರಲು ಹರಿಕಥಾ ಸಮಕೀರ್ತನೆ ಪರಿಣಾಮಕಾರಿ-ಡಾ.ಬಿ.ಎಸ್ ರಾವ್. ಕುಂಬಳೆ: ಕರಾವಳಿಯಾದ್ಯಂತ ಹಿಂದಿನ ತಲೆಮಾರು ಶೇಣಿ, ಸಾಮಗರಂತಹ ಪ್ರಾಜ್ಞರ ಹರಿಕಥಾ ಸಂಕೀರ್ತನೆಯ ಆಲಾಪನೆಯೊಂದಿಗೆ ಬೆಳೆದು ಬಂದಿತ್ತು. ಆದರೆ ಅವರ ಬಳಿಕ ಅಂತಹ ಯತ್ನಗಳು ಮರೆಯಾಗುತ್ತಿರುವಾಗ ಕೀರ್ತನಾ ಕುಟೀರ ಈ ಕ್ಷೆತ್ರದಲ್ಲಿ ನಡೆಸುತ್ತಿರುವ ಶ್ರಮ ಸ್ತುತ್ಯರ್ಹವಾದುದು ಎಂದು ಖ್ಯಾತ ವೈದ್ಯ, ಬಾಯಾರು ಶ್ರೀಪಂಚಲಿಂಗೇಶ್ವರ ಕ್ಷೇತ್ರದ ಮೊಕ್ತೇಸರ ಡಾ.ಬಿ.ಎಸ್.ರಾವ್ ಅಭಿಪ್ರಾಯ ವ್ಯಕ್ತಪಡಿಸಿದರು. ಕೀರ್ತನಕಾರ, ಕಲಾರತ್ನ ಶಂ.ನಾ.ಅಡಿಗರ ನೇತೃತ್ವದಲ್ಲಿ ಕಾರ್ಯನಿರ್ವಹಿಸುತ್ತಿರುವ ಅನಂತಪುರ ಕೀರ್ತನಾ ಕುಟೀರದ ಆಶ್ರಯದಲ್ಲಿ ಕುಂಬಳೆ ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರ ಪರಿಸರದಲ್ಲಿ ನಡೆದ 9ನೇ ವರ್ಷದ ಹರಿಕಥಾ ಸಪ್ತಾಹ ಹರಿಕೀರ್ತನ ಹಬ್ಬ-17 ರ ಭಾನುವಾರ ಸಂಜೆ ನಡೆದ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಇಂದಿನ ಯುವ ಸಮೂಹ ಪರಂಪರೆ, ನಂಬಿಕೆಗಳಿಂದ ದೂರವಾಗುತ್ತಿರುವ ಸಂದರ್ಭ ಎಳೆಯರನ್ನು ಸಾಂಸ್ಕೃತಿಕವಾಗಿ ಪರಂಪರೆಯ ಕೊಂಡಿಯೊಂದಿಗೆ ಜೋಡಿಸಿ ಕೊಂಡೊಯ್ಯುತ್ತಿರುವ ಕೀರ್ತನಾ ಕುಟೀರದ ಕಾರ್ಯಚಟುವಟಿಕೆಗಳು ಭವಿಷ್ಯದ ಸಮೃದ್ದ ಸಮಾಜದ ಸಂಕೇತವಾಗಿದೆ ಎಂದು ತಿಳಿಸಿದ ಅವರು, ನವೀನ ತಂತ್ರಜ್ಞಾನ ಆಧಾರಿತ ಇಂದಿನ ಕಾಲಧರ್ಮಕ್ಕೆ ಉಂಟಾಗಿರುವ ಗೊಂದಲಗಳು, ಅವ್ಯವಸ್ಥಿತತೆಯಿಂದ ಹೊರಬರಲು ಕಥಾ ಸಂಕೀರ್ತನೆಗಳು ಪರಿಣಾಮಕಾರಿ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಸಮಾರಂಭದಲ್ಲಿ ಮಂಗಳೂರು ಕೃಷ್ಣ ಕುಟೀರದ ಭಕ್ತಿ ಶಾಸ್ತ್ರಿ ಗೋವಿಂದರಾಮ್ ದಾಸ್ಜೀಯವರಿಗೆ ಪ್ರಸ್ತುತ ಸಾಲಿನ ಕೀರ್ತನ ಕಸ್ತೂರಿ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಬಳಿಕ ಮಾತನಾಡಿದ ಗೋವಿಂದರಾಮ್ ದಾಸ್ಜೀಯವರು, ಜಗತ್ತಿನ ಏಕಮೇವ ನಿಯಾಮಕನಾದ ಶ್ರೀಕೃಷ್ಣನಿಗೆ ಮಾತ್ರ ದುರಿತಗಳಿಂದ ನಿವಾರಿಸಲು ಸಾಧ್ಯವೆಂಬ ವಿಶ್ವಾಸ ಗಟ್ಟಿಗೊಳ್ಳಬೇಕು. ಆಡಂಬರ ರಹಿತ ಶುದ್ದ ಅಂತಕಃರಣದ ಪ್ರೀತಿಯೊಂದಿಗಿನ ಭಕ್ತಿ ಮಾತ್ರ ದೇವರಿಗೆ ಪ್ರೀಯವಾದುದು ಎಂದು ತಿಳಿಸಿದರು. ಎಲ್ಲಾ ವರ್ಗದವರಿಗೂ ಸಮಸ್ಯೆಗಳಿಂದ ಪಾರಾಗುವಲ್ಲಿ ಸತ್ ಚಿಂತನೆಯ ಭಾವ ಹುಟ್ಟಬೇಕು ಎಂದ ಅವರು, ಅಂತಹ ಭಾವ ನಿಮರ್ಾಣಕ್ಕೆ ಹರಿಕಥಾ ಸತ್ಸಂಗದಂತಹ ಕಲೋಪಾಸನೆ ಉತ್ತಮ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಕಲಾವಿದ, ಸಂಘಟಕ ವಿವೇಕಾನಂದ ಭಕ್ತ ಕುಂಬಳೆ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಮಾತನಾಡಿ, ಕುಂಬಳೆ ಪಾರಂಪರಿಕವಾಗಿ ಕನ್ನಡ ಸಾರಸ್ವತ ಲೋಕದ ಮಹಾನ್ ಕೊಡುಗೆ ನೀಡಿದ ಶ್ರೇಷ್ಠ ಸಾಧಕರ ಕೇಂದ್ರವಾಗಿದ್ದು, ಆ ಪರಂಪರೆಯನ್ನು ಮುಂದುವರಿಸುತ್ತಿರುವ ಕೀರ್ತನಾ ಕುಟೀರದ ಅಹನರ್ಿಶಿ ಯತ್ನಗಳು ಅಪೂರ್ವವಾದುದು ಎಂದು ಶ್ಲಾಘಿಸಿದರು. ಹರಿಕಥಾ ಕ್ಷೇತ್ರದ ವಿಶಾಲ ಹರವುಗಳನ್ನು ಅಥರ್ೈಸಿರುವ ಕೀರ್ತನಾ ಕುಟೀರ ತನ್ನ ಸಾಧನಾ ಪಥದಲ್ಲಿ ಇನ್ನಷ್ಟು ಬೆಳೆಯುವಲ್ಲಿ ಪ್ರತಿಯೊಬ್ಬ ಸಜ್ಜನನ ಕೊಡುಗೆ ಅಗತ್ಯವಿದೆ ಎಂದರು. ಕಣಿಪುರ ಶ್ರೀಗೋಪಾಲಕೃಷ್ಣ ಕ್ಷೇತ್ರದ ಅರ್ಚಕ ವಾಸುದೇವ ಅಡಿಗ, ಖ್ಯಾತ ದಾಸಸಂಕೀರ್ತನೆಕಾರ ರಾಮಕೃಷ್ಣ ಕಾಟುಕುಕ್ಕೆ, ಕನರ್ಾಟಕ ಹರಿಕಥಾ ಪರಿಷತ್ತಿನ ಅಧ್ಯಕ್ಷ ನ್ಯಾಯವಾದಿ ಮಹಾಬಲ ಶೆಟ್ಟಿ ಕೂಡ್ಲು, 9ನೇ ವರ್ಷದ ಹರಿಕಥಾ ಸಪ್ತಾಹ ಸಮಿತಿ ಅಧ್ಯಕ್ಷೆ ಸರೋಜಿನಿ ಶಿವರಾಮ ಭಟ್ ಉಪಸ್ಥಿತರಿದ್ದು ಮಾತನಾಡಿದರು. ಕೀರ್ತನಾ ಕುಟೀರದ ಸಂಚಾಲಕ ಕಲಾರತ್ನ ಶಂ.ನಾ ಅಡಿಗ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಕಾರ್ಯಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು. ಶಿವರಾಮ ಭಟ್ ಸ್ವಾಗತಿಸಿ, ಶಿವರಾಮ ಎನ್ ವಂದಿಸಿದರು. ವಿಜಯಲಕ್ಷ್ಮೀ ಎಸ್ ಅಡಿಗ ಕಾರ್ಯಕ್ರಮ ನಿರೂಪಿಸಿದರು. ಹರಿಕಥಾ ಸಪ್ತಾಹದ ಅಂಗವಾಗಿ ಭಾನುವಾರ ಬೆಳಿಗ್ಗೆ ಕೀರ್ತನಾ ಕುಟೀರದ ವಿದ್ಯಾಥರ್ಿಗಳಿಂದ ದಾಸಸಂಕೀರ್ತನೆ, ವಿದ್ಯಾಥರ್ಿಗಳಾದ ಕೃತ್ತಿಕಾ, ಸುಪ್ರೀತಾ, ಗಾಯತ್ರೀ ಕೊಂಡೆವೂರು ರವರಿಂದ ಹರಿಕಥಾ ಸಂಕೀರ್ತನೆ, ಶ್ರದ್ದಾ ನಾಯರ್ಪಳ್ಳರಿಂದ ಕರ್ಣಬೇಧನ ಕಥಾ ನಕದ ಹರಿಕಥಾ ಸಂಕೀರ್ತನೆ, ಅಪರಾಹ್ನ ರಾಜೇಶ್ವರಿ, ಧನ್ಯಶ್ರೀ, ವೈಭವಿಯವರಿಂದ ಹರಿಕಥಾ ಸಮಕೀರ್ತನೆ ನಡೆಯಿತು. ಸಮಾರೋಪ ಸಮಾರಂಭದ ಬಳಿಕ ಕಲಾರತ್ನ ಶಂ.ನಾ.ಅಡಿಗರಿಂದ ಶ್ರೀಕೃಷ್ಣ ಸಂಧಾನ ಹರಿಕಥಾ ಸಂಕೀರ್ತನೆ, ಮಂಗಳಾಚರಣೆಯೊಂದಿಗೆ ಸಪ್ತಾಹ ಸಂಪನ್ನಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries