ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 12, 2017
ಪದ್ಮಾವತಿ' ಬಿಡುಗಡೆ ತಡೆ ಕೋರಿ ಪ್ರಧಾನಿ ಮೋದಿಗೆ ಉದಯ್ ಪುರ ರಾಜವಂಶಸ್ಥರಿಂದ ಪತ್ರ
ನವದೆಹಲಿ: ಭಾರಿ ಚಚರ್ೆಗೆ ಕಾರಣವಾಗಿರುವ ದೀಪಿಕಾ ಪಡುಕೋಣೆ ಅಭಿನಯದ ಪದ್ಮಾವತಿ ಚಿತ್ರದ ಬಿಡುಗಡೆ ತಡೆ ನೀಡುವಂತೆ ಆಗ್ರಹಿಸಿ ಉದಯ್ ಪುರ ರಾಜವಂಶಸ್ಥರು ಪ್ರಧಾನಿ ಮೋದಿ ಅವರಿಗೆ ಮನವಿ ಮಾಡಿ ಪತ್ರ ಬರೆದಿದ್ದಾರೆ.
ಪದ್ಮಾವತಿ ಚಿತ್ರದಲ್ಲಿ ರಾಣಿ ಪದ್ಮಾವತಿ ಅವರ ಚಾರಿತ್ರ್ಯಕ್ಕೆ ಧಕ್ಕೆ ತರುವ ಪ್ರಯತ್ನ ಮಾಡಲಾಗಿದ್ದು, ದೇಶದ ಹೆಮ್ಮೆಯ ಇತಿಹಾಸವನ್ನು ರಕ್ಷಿಸುವ ಮತ್ತು ದೇಶದ ನಾಗರಿಕರ ಘನತೆ ಕಾಪಾಡುವ ಹೊಣೆಗಾರಿಕೆ ಕೇಂದ್ರ ಸಕರ್ಾರಕ್ಕಿದೆ. ಹೀಗಾಗಿ ಚಿತ್ರ ಬಿಡುಗಡೆಗೆ ತಡೆ ನೀಡಬೇಕು ಎಂದು ಉದಯ್ ಪುರ ರಾಜವಂಶಸ್ಥರು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಸಚಿವರು, ಸಿಬಿಎಫ್ ಸಿ ಮುಖ್ಯಸ್ಥ ಪ್ರಸೂನ್ ಜೋಷಿ ಅವರಿಗೆ ಪತ್ರ ಬರೆದಿದ್ದಾರೆ.
ಕೇಂದ್ರ ಸಚಿವೆ ಸ್ಮೃತಿ ಇರಾನಿ, ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್, ರಾಜಸ್ಥಾನ ಮುಖ್ಯಮಂತ್ರಿ ವಸುಂಧರಾ ರಾಜೆ, ರಾಜಸ್ಥಾನ ಡಿಜಿಪಿ ಅವರಿಗೂ ಪತ್ರ ರವಾನೆ ಮಾಡಿದ್ದಾರೆ. ಅಂತೆಯೇ ಪತ್ರದಲ್ಲಿ .ಯಾವುದೇ ಕಾರಣಕ್ಕೂ ಚಿತ್ರಕ್ಕೆ ಪ್ರಮಾಣ ಪತ್ರ ನೀಡದಂತೆ ಮನವಿ ಮಾಡಲಾಗಿದ್ದು, ದೇಶದ ಹೆಮ್ಮೆಯ ಇತಿಹಾಸವನ್ನು ರಕ್ಷಿಸುವ ಮತ್ತು ದೇಶದ ನಾಗರಿಕರ ಘನತೆ ಕಾಪಾಡುವ ಹೊಣೆಗಾರಿಕೆ ಕೇಂದ್ರ ಸಕರ್ಾರಕ್ಕಿದೆ. ಪದ್ಮಾವತಿ ಚಿತ್ರದಲ್ಲಿ ಇತಿಹಾಸವನ್ನು ತಿರುಚಲಾಗಿದ್ದು, ಚಿತ್ರ ನಿಮರ್ಾಣ ಸಂದರ್ಭದಲ್ಲಿ ರಾಣಿ ಪದ್ಮಾವತಿ ಅವರ ಇತಿಹಾಸಕ್ಕೆ ಸಂಬಂಧಿಸಿದವರನ್ನು ಸಂಪಕರ್ಿಸಿಲ್ಲ. ಇದೀಗ ಏಕಾಏಕಿ ಚಿತ್ರವನ್ನು ತೆರೆಗೆ ತರಲಾಗುತ್ತಿದೆ ಎಂದು ಪತ್ರದಲ್ಲಿ ಮನವಿ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಎಂಕೆ ವಿಶ್ವರಾಜ್ ಸಿಂಗ್ ಅವರು, ಪ್ರಸ್ತುತ ಚಿತ್ರದ ಹಾಡುಗಳು ಬಿಡುಗಡೆಯಾಗಿದೆ. ಇದರಲ್ಲೇ ರಾಣಿ ಪದ್ಮಾವತಿ ಅವರಿಗೆ ಸಂಬಂಧಿಸಿದ ಕೆಲ ಸನ್ನಿವೇಶಗಳನ್ನು ತೋರಿಸಲಾಗಿದೆ. ಐತಿಹಾಸಿಕ ಕಥೆಗಳನ್ನು ಚಿತ್ರ ಮಾಡುವಾಗ ಇತಿಹಾಸವನ್ನು ತಿರುಚಬಾರದು ಎಂದು ವಿಶ್ವರಾಜ್ ಸಿಂಗ್ ಹೇಳಿದ್ದಾರೆ.


