ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 12, 2017
ಟೀಂ ಇಂಡಿಯಾ ಕ್ರಿಕೆಟಿಗರಿಗೆ ಡಿಎನ್ಎ/ಜೆನೆಟಿಕ್ ಫಿಟ್ನೆಸ್ ಪರೀಕ್ಷೆ
ನವದೆಹಲಿ: ಟೀಂ ಇಂಡಿಯಾ ಆಟಗಾರರು ಇದೀಗ ಡಿಎನ್ಎ ಪರೀಕ್ಷೆಗೆ ಒಳಗಾಗಲಿದ್ದು ಈ ಪರೀಕ್ಷೆಯಿಂದ ಆಟಗಾರನ ಆನುವಂಶಿಕ ಫಿಟ್ನೆಸ್ ಬಹಿರಂಗಗೊಳ್ಳಲಿದೆ.
ಈ ಡಿಎನ್ಎ ಪರೀಕ್ಷೆಯು ಆಟಗಾರರು ತಮ್ಮ ವೇಗವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಕೊಬ್ಬು ಕರಗಿಸಲು, ಸಹಿಷ್ಣುತೆ, ಚೇತರಿಸಿಕೊಳ್ಳುವ ಸಮಯ ಮತ್ತು ಸ್ನಾಯು ಸದೃಢಗೊಳಿಸಲು ಸಹಾಯಕವಾಗಲಿದೆ. ಟೀಂ ಇಂಡಿಯಾದ ತರಬೇತುದಾರ ಶಂಕರ್ ಬಸು ಅವರ ಶಿಫಾರಸ್ಸಿನ ಮೇರೆಗೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ತಂಡದ ಆಟಗಾರರನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಲು ಮುಂದಾಗಿದೆ.
ಡಿಎನ್ಎ ಪರೀಕ್ಷೆ ಅಥವಾ ಆನುವಂಶಿಕ ಫಿಟ್ನೆಸ್ ಪರೀಕ್ಷೆಯಿಂದ ವ್ಯಕ್ತಿಯ ಫಿಟ್ನೆಸ್, ಆರೋಗ್ಯ ಮತ್ತು ಪೌಷ್ಟಿಕತೆಯೊಂದಿಗೆ 40ರ ಹರೆಯದಲ್ಲಿ ಜೀನ್ಗಳು ಹೇಗೆ ಸಂಬಂಧಿಸಿವೆ ಎಂಬ ಕಲ್ಪನೆಯನ್ನು ನೀಡುತ್ತದೆ. ಪ್ರತಿಯೊಬ್ಬ ಕ್ರಿಕೆಟಿಗನ ಡಿಎನ್ಎ ಡಾಟಾವನ್ನು ನಂತರ ಪರಿಸರದ ದತ್ತಾಂಶದೊಂದಿಗೆ ಸಂಯೋಜಿಸಲಾಗುತ್ತದೆ. ಅದು ವ್ಯಕ್ತಿಯ ದೇಹದ ತೂಕ ಮತ್ತು ಆಹಾರ, ಎಲ್ಲಾ ಸುತ್ತಿನ ವಿಶ್ಲೇಷಣೆಗೆ ಒಳಗೊಳ್ಳುತ್ತದೆ.
ತರಬೇತುದಾರ ಶಂಕರ್ ಬಸು ಅವರ ಈ ಕಲ್ಪನೆಯನ್ನು ರೂಪಿಸಿದ್ದು ಇದು ಅತ್ಯಂತ ಪ್ರಯೋಜನಕಾರಿ ಎಂದು ಸಾಬೀತಾಗಿದೆ. ಹೀಗಾಗಿ ತಂಡದ ಪ್ರತಿಯೊಬ್ಬ ಆಟಗಾರನ ಪರೀಕ್ಷೆಯನ್ನು ನಡೆಸುವುದಕ್ಕಾಗಿ ಬಿಸಿಸಿಐ 25 ಸಾವಿರದಿಂದ 30 ಸಾವಿರ ರುಪಾಯಿವರೆಗೆ ಖಚರ್ು ಮಾಡಿದೆ ಎಂದು ಬಿಸಿಸಿಐನ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ


