ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 16, 2017
ಕನ್ನಡ ಸಾಹಿತಿ-ಲೇಖಕರ ಸಮಾವೇಶ
ಕುಂಬಳೆ: ಕನರ್ಾಟಕ ಸರಕಾರದ ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಮತ್ತು ಕನರ್ಾಟಕ ಜಾನಪದ ಪರಿಷತ್ತು ಕೇರಳ ಗಡಿನಾಡ ಘಟಕದ ಸಹಯೋಗದಲ್ಲಿ ಕಾಸರಗೋಡಿನ ಕನ್ನಡ ಸಾಹಿತಿ ಲೇಖಕರ ಸಮಾವೇಶ ನ.20 ರಂದು ಸೋಮವಾರ ಅಪರಾಹ್ನ 3 ಗಂಟೆಗೆ ಕಾಸರಗೋಡು ಹೊಸ ಬಸ್ ನಿಲ್ದಾಣ ಸನಿಹದ ಸಿಟಿ ಟವರ್ ಸಭಾಂಗಣದಲ್ಲಿ ನಡೆಯಲಿದೆ.
ಕನರ್ಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿಯವರ ಅಧ್ಯಕ್ಷತೆಯಲ್ಲಿ ನಡೆಯುವ ಸಮಾರಂಭವನ್ನು ಕಾಸರಗೋಡು ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಖ್ಯಾತ ಚಲನಚಿತ್ರ ನಟ ಸೌರಭ್ ಭಂಡಾರಿ ಮುಂಬಯಿ ಉಪಸ್ಥಿತರಿರುವರು. ಈ ಸಂದರ್ಭ ಹಿರಿಯ ಕನ್ನಡ ಹೋರಾಟಗಾರ ನ್ಯಾಯವಾದಿ ಅಡೂರು ಉಮೇಶ್ ನಾಯಕ್, ಹಿರಿಯ ಸಮಾಜ ಸೇವಕ ಬಿ.ಸುಂದರ ರಾವ್ ಕಾಸರಗೋಡು, ಸಾಹಿತಿ ಅನುವಾದಕ ಎ.ನರಸಿಂಹ ಭಟ್ ಕಾಸರಗೊಡು, ಕನ್ನಡ ಹೋರಾಟಗಾರ ಬಿ.ಪುರುಷೋತ್ತಮ ಮಾಸ್ತರ್ ಕಾಸರಗೋಡು, ನಿವೃತ್ತ ಉಪಜಿಲ್ಲಾಧಿಕಾರಿ ಬಿ.ಬಾಲಕೃಷ್ಣ ಅಗ್ಗಿತ್ತಾಯ ಮಧೂರು, ಹಿರಿಯ ಪತ್ರಕರ್ತ ಎಂ.ವಿ.ಬಳ್ಳುಳ್ಳಾಯ, ವಿದ್ವಾಂಸ ಸುಂದರ ಶೆಟ್ಟಿಯವರನ್ನು ಗೌರವಿಸಲಾಗುವುದು.
ಜಿಲ್ಲಾ ಪಂಚಾಯತು ಅಧ್ಯಕ್ಷ ಎಜಿಸಿ ಬಶೀರ್, ನಗರಸಭಾಧ್ಯಕ್ಷೆ ಭೀಪಾತಿಮ್ಮಾ ಇಬ್ರಾಹಿಂ, ಜಿಲ್ಲಾ ಪಂಚಾಯತು ಸದಸ್ಯ ನ್ಯಾಯವಾದಿ ಕೆ.ಶ್ರೀಕಾಂತ್, ಕಸಾಪ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್, ಕನರ್ಾಟಕ ಸಮಿತಿ ಕಾಯರ್ಾಧ್ಯಕ್ಷ ನ್ಯಾಯವಾದಿ ಮುರಳೀಧರ ಬಳ್ಳುಕುರಾಯ, ಜಿಲ್ಲಾ ಲೇಖಕರ ಸಂಘದ ಅಧ್ಯಕ್ಷ ಡಾ.ರಮಾನಂದ ಬನಾರಿ, ಕನರ್ಾಟಕ ಜಾನಪದ ಪರಿಷತ್ತು ಮಹಾರಾಷ್ಟ್ರ ಘಟಕಾಧ್ಯಕ್ಷ ಸುರೇಶ್ ಕುಮಾರ್ ಶೆಟ್ಟಿ ಯೆಯ್ಯಾಡಿ, ಕಾಸರಗೋಡು ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಎಸ್.ಜೆ.ಪ್ರಸಾದ್, ಸೀಕೋ ಮುಂಬಯಿಯ ಪ್ರಧಾನ ಕಾರ್ಯದಶರ್ಿ ರತ್ನಾಕರ ಮಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು.
ನಿವೃತ್ತ ಪ್ರಾಂಶುಪಾಲ ಪ್ರೊ.ಪಿ.ಎನ್.ಮೂಡಿತ್ತಾಯ, ಆಯಿಷಾ ಪೆರ್ಲ, ಡಾ.ಕೆ.ಕಮಲಾಕ್ಷ, ಲಕ್ಷ್ಮಣ ಪ್ರಭು ಕುಂಬಳೆ, ಸೈಫುಲ್ಲಾ ತಂಙಳ್, ವಿ.ಬಿ.ಕುಳಮರ್ವ, ಎಂ.ಉಮೇಶ್ ಸಾಲ್ಯಾನ್, ಮಲಾರು ಜಯರಾಮ ರೈ, ಶಿವರಾಮ ಕಾಸರಗೋಡು, ಟಿ.ಶಂಕರನಾರಾಯಣ ಭಟ್, ಮಹಮ್ಮದ್ ಅಝೀಂ ಮಣಿಮುಂಡ, ರವೀಂದ್ರನಾಥ್ ಕೆ.ಆರ್, ಎ.ಆರ್.ಸುಬ್ಬಯ್ಯಕಟ್ಟೆ, ಸತೀಶ ಅಡಪ ಸಂಕಬೈಲು, ಹರಿದಾಸ ಜಯಾನಂದ ಕುಮಾರ್ ಹೊಸದುರ್ಗ, ರಾಜು ಸ್ಟೀಪನ್, ಸ್ಟೀನಿ ಕ್ರಾಸ್ತಾ, ರಾಧಾಕೃಷ್ಣ ಕೆ.ಉಳಿಯತ್ತಡ್ಕ, ಬೆಳ್ಳಿಗೆ ನಾರಾಯಣ ಮಣಿಯಾಣಿ, ಪುಂಡೂರು ಪ್ರಭಾವತಿ ಕೆದಿಲಾಯ, ಬಾಲಕೃಷ್ಣ ಬೆಳಿಂಜೆ,ಗೋಪಾಲಕೃಷ್ಣ ಭಟ್ ಮುಳ್ಳೇರಿಯಾ, ಡಾ.ಯು.ಮಹೇಶ್ವರಿ, ಡಾ.ರಾಧಾಕೃಷ್ಣ ಬೆಳ್ಳೂರು, ಶ್ರೀಧರ ಏತಡ್ಕ, ಬಾಲಕೃಷ್ಣ ಹೊಸಂಗಡಿ, ಕೆ.ವಿ.ರಮೇಶ್ ಮೊದಲಾದವರು ಉಪಸ್ಥಿತರಿರುವರು.


