ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 14, 2017
ಸಲಿಂಗಕಾಮ ಒಂದು ಪ್ರವೃತ್ತಿ, ಅದು ಶಾಶ್ವತವಲ್ಲ: ರವಿಶಂಕರ್ ಗುರೂಜಿ
ನವದೆಹಲಿ: "ಸಲಿಂಗಕಾಮ ಎಂಬುದು ಒಂದು ಪ್ರವೃತ್ತಿ. ಈ ಪ್ರವೃತ್ತಿ ಶಾಶ್ವತವಲ್ಲ. ಕ್ರಮೇಣ ಅದು ಬದಲಾಗಬಹುದು" ಎಂದು ಆಟರ್್ ಆಫ್ ಲಿವಿಂಗ್ ಸಂಸ್ಥಾಪಕ ಶ್ರೀ ರವಿಶಂಕರ್ ಗುರೂಜಿ ಹೇಳಿದರು. ನ.14 ರಂದು ನವದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯ(ಜೆಎನ್ ಯು)ದಲ್ಲಿ ವಾಷರ್ಿಕವಾಗಿ ನಡೆಯುವ ನೆಹರು ಸಂಸ್ಮರಣ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಸಲಿಂಗಕಾಮದ ಬಗ್ಗೆ ರವಿಶಂಕರ ಗುರೂಜಿ ಹೀಗಂತಾರೆ 'ಸಲಿಂಗಕಾಮ ಒಂದು ಪ್ರವೃತ್ತಿ. ಅದನ್ನು ಒಪ್ಪಿಕೊಳ್ಳಿ, ಆದರೆ ಒಂದು ವಿಷಯವನ್ನು ಮರೆಯಬೇಡಿ, ಈ ಪ್ರವೃತ್ತಿ ಶಾಶ್ವತವಲ್ಲ. ಕ್ರಮೇಣ ಈ ಮನಸ್ಥಿತಿ ಬದಲಾಗಬಹುದು. ನಾನು ಎಷ್ಟೋ ಪುರುಷ ಸಲಿಂಗಕಾಮಿಗಳನ್ನು ನೋಡಿದ್ದೇನೆ. ಆದರೆ ಅವ ಅವರೆಲ್ಲ ಕ್ರಮೇಣ ಬದಲಾಗಿದ್ದಾರೆ. ಸಾಮಾನ್ಯ ಜನರಂತೇ ಮನಃಪರಿವರ್ತನೆಗೊಂಡಿದ್ದಾರೆ" ಎಂದರು.


