ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 12, 2017
ಪ್ರತಿಭೆ ಮೆರೆದ ವಿದ್ಯಾಥರ್ಿಗಳು
ಬದಿಯಡ್ಕ: ಏಷ್ಯಾ ಖಂಡದಲ್ಲಿಯೇ ಅತೀ ದೊಡ್ಡ ಉತ್ಸವ ಎಂಬ ಮನ್ನಣೆಯನ್ನು ಗಳಿಸಿರುವ ಕೇರಳ ಶಾಲಾ ಕಲೋತ್ಸವದ ಸಂಭ್ರಮ ಕೇರಳದಾದ್ಯಂತ ವಿವಿಧ ಹಂತಗಳಲ್ಲಿ ಇದೀಗ ನಡೆಯುತ್ತಿದೆ. ಉಪಜಿಲ್ಲಾ ಮಟ್ಟದ ಸ್ಪಧರ್ೆಗಳು ವಿವಿಧ ವಲಯಗಳಲ್ಲಾಗಿ ನಡೆಯುತ್ತಿದ್ದು ನೂರಾರು ಶಾಲೆಗಳ ಸಾವಿರಾರು ವಿದ್ಯಾಥರ್ಿಗಳು ತಮ್ಮ ಪ್ರತಿಭೆಯನ್ನು ಮೆರೆಯುತ್ತಿದ್ದಾರೆ. ಒಂದೊಂದು ಹಂತದಲ್ಲಿಯೂ ಸ್ಪಧರ್ೆಗಳು ನಡೆಯುತ್ತಿದ್ದು ಪ್ರತಿ ಸ್ಪಧರ್ೆಗೂ ನೂರಾರು ವಿದ್ಯಾಥರ್ಿಗಳು ಪೂರ್ವ ತಯಾರಿಯೊಂದಿಗೆ ವೇದಿಕೆಯೇರಿ ತಮಗೆ ಲಭಿಸಿದ ಅವಕಾಶವನ್ನು ಉಪಯೋಗಿಸಿಕೊಂಡು ಬಹುಮಾನಗಳನ್ನು ಗೆಲ್ಲುವುದರೊಂದಿಗೆ ಜಿಲ್ಲಾ ಮಟ್ಟದ ಸ್ಪಧರ್ೆಗಳಿಗೆ ಆಯ್ಕೆಯಾದ ಸಂಭ್ರಮ ಸ್ಪಧರ್ಾ ವಿಜೇತರ ಮುಖದಲ್ಲಿ ಕಂಡುಬರುತ್ತದೆ.
ಕುಂಬಳೆ ಉಪಜಿಲ್ಲಾ ಶಾಲಾ ಕಲೋತ್ಸವದಲ್ಲಿ ನೀಚರ್ಾಲಿನ ಮಹಾಜನ ಸಂಸ್ಕೃತ ಕಾಲೇಜು ಪ್ರೌಢಶಾಲೆಯಲ್ಲಿ ಜರಗಿದ ವಿವಿಧ ಹಂತಗಳ ಶಾಸ್ತ್ರೀಯ ನೃತ್ಯ ಸ್ಪಧರ್ೆಗಳಲ್ಲಿ ನೃತ್ಯ ಗುರು ಬಾಲಕೃಷ್ಣ ಮಾಸ್ಟರ್ ಮಂಜೇಶ್ವರ ಅವರ ಶಿಷ್ಯರು ತಮ್ಮ ಪ್ರತಿಭೆಯನ್ನು ಮೆರೆದಿದ್ದಾರೆ.
ದಿವ್ಯಶ್ರೀ ಕಿರಿಯ ಪ್ರಾಥಮಿಕ ವಿಭಾಗದ ಭರತನಾಟ್ಯ ಸ್ಪಧರ್ೆಯಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದ್ದು, ಹಿರಿಯ ಪ್ರಾಥಮಿಕ ವಿಭಾಗದ ಭರತನಾಟ್ಯ ಹಾಗೂ ಮೋಹಿನಿಯಾಟಂ ಸ್ಪಧರ್ೆಗಳಲ್ಲಿ ದೀಪಾಶ್ರೀ ಅನುಕ್ರಮವಾಗಿ ಪ್ರಥಮ ಹಾಗೂ ದ್ವಿತೀಯ ಸ್ಥಾನವನ್ನು ಮತ್ತು ಇದೇ ವಿಭಾಗದ ಭತನಾಟ್ಯದಲ್ಲಿ ಶರತ್ ಕೃಷ್ಣ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ. ಪ್ರೌಢ ಶಾಲಾ ವಿಭಾಗದ ಭರತನಾಟ್ಯ ಸ್ಪಧರ್ೆಯಲ್ಲಿ ವೈಷ್ಣವಿ ಮಾಳಿಗೆಮನೆ ಪ್ರಥಮ ಹಾಗೂ ಅನಘಾ ರಾಮನ್ ದ್ವಿತೀಯ ಬಹುಮಾನಗಳನ್ನು ಪಡೆದುಕೊಂಡರು. ಎಚ್.ಎಸ್. ವಿಭಾಗದ ಕೂಚುಪ್ಪುಡಿಯಲ್ಲಿ ಅನಘಾ ದ್ವಿತೀಯ ಸ್ಥಾನ ಗಳಿಸಿದ್ದು ಈ ಮಕ್ಕಳ ಸಾಧನೆ ಶ್ಲಾಘನೀಯವಾಗಿದೆ.


