HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಕಿದೂರಿನಲ್ಲಿ ಅಚ್ಚರಿ ಮೂಡಿಸಿದ ಬಡರ್್ ಫೆಸ್ಟ್ ಕುಂಬಳೆ: ರಾಷ್ಟ್ರದ ಪ್ರಸಿದ್ದ ಪಕ್ಷಿ ವೀಕ್ಷಕ ಡಾ.ಸಲೀಂ ಅಲಿಯವರ ಜನ್ಮದಿನಾಚರಣೆಯ ಅಂಗವಾಗಿ ಕುಂಬಳೆ ಸಮೀಪದ ಕಿದೂರಿನಲ್ಲಿ ಶನಿವಾರ ಹಾಗು ಭಾನುವಾರ ಎರಡು ದಿನಗಳ ಕಾಯರ್ಾಗಾರ-ಬಡ್ಸರ್್ ಫೆಸ್ಟ್ ಹಮ್ಮಿಕೊಳ್ಳಲಾಗಿತ್ತು. ಕಲ್ಲಿಕೋಟೆಯ ಫ್ರೆಂಡ್ಸ್ ಆಫ್ ನೇಚರ್ ತಂಡದ ಎಂಟು ಯುವಕರು,ಪೆರ್ಲ ಶಾಲೆಯ ನೇಚರ್ ಕ್ಲಬ್ಬಿನ ಹತ್ತು ಮಕ್ಕಳು, ಬೇಳ ಸಂತ ಬಾರ್ತಲೋಮಿಯ ಶಾಲೆಯ ಎಕೋ ಕ್ಲಬ್ಬಿನ ಹದಿನಾರು ಸದಸ್ಯರು ಹಾಗೂ ಕುಂಬಳೆ ಹೋಲಿ ಫ್ಯಾಮಿಲಿ ಶಾಲೆಯ ಪಕ್ಷಿ ಪ್ರೇಮಿ ತಂಡದ ಹದಿಮೂರು ಮಂದಿ ಪಾಲ್ಗೊಂಡ ಬಡರ್್ ಫೆಸ್ಟ್ ಪಕ್ಷಿ ನಿರೀಕ್ಷಕರಿಗೆ ಒಟ್ಟು 57 ಪಕ್ಷಿಗಳನ್ನು ಪರಿಚಯಿಸಿತು. ಕೇರಳದ ಹಿರಿಯ ಪಕ್ಷಿ ನಿರೀಕ್ಷಕರಾದ ಕಣ್ಣೂರಿನ ಶಶಿಧರ್ ಮನ್ನೆಕ್ಕರ ಜಲಪಕ್ಷಿಗಳ ಬಗ್ಗೆ ಮಾಹಿತಿ ನೀಡಿದರು. ಪೊಸಡಿಗುಂಪೆಯ ಪ್ರಶಾಂತ್ ಕುಮಾರ್ ಜೀವವೈವಿಧ್ಯತೆಯ ಕುರಿತು ಮಾತನಾಡಿದರು. ಶಿಬಿರದ ಸಂಧರ್ಭದಲ್ಲಿ ಹಮ್ಮಿಕೊಂಡ ಪಕ್ಷಿ ನಿರೀಕ್ಷಣೆಯಲ್ಲಿ ಬೂಟೆಡ್ ಈಗಲ್ ಹಾಗೂ ಬ್ರೌನ್ ಶೈಕ್ ಎಂಬ ಪಕ್ಷಿಗಳನ್ನು ಹೊಸದಾಗಿ ಪತ್ತೆ ಹಚ್ಚಿದುದರಿಂದ ಕಿದೂರು ಪಕ್ಷಿ ಪ್ರಪಂಚದ ಪಟ್ಟಿಯು 149ಕ್ಕೆ ತಲುಪಿತು. ಸಾಮಾಜಿಕ ಅರಣ್ಯ ಇಲಾಖೆ ಕಾಸರಗೋಡು ವಿಭಾಗದ ಜೊತೆಗೂಡಿ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಸುನಿಲ್, ಸತ್ಯನ್ ಹಾಗೂ ಬಿಜುಮೋನ್ ಮಾರ್ಗದರ್ಶನ ನೀಡಿದರು.ವನ್ಯ ಜೀವಿಗಳ ಫೋಟೋ ಪ್ರದರ್ಶನವನ್ನು ಸಹ ಏರ್ಪಡಿಸಲಾಗಿತ್ತು. ಶನಿವಾರ ಪಕ್ಷಿ ವೀಕ್ಷಣಾ ಕಾಯರ್ಾಗಾರವನ್ನು ಕುಂಬಳೆ ಗ್ರಾಮ ಪಂಚಾಯತು ಅಧ್ಯಕ್ಷ ಪುಂಡರಿಕಾಕ್ಷ ಕೆ.ಎಲ್. ಉದ್ಘಾಟಿಸಿದ್ದಲ್ಲದೆ ಪರಿಸರ ನಡಿಗೆ ಹಾಗೂ ಪಕ್ಷಿ ನಿರೀಕ್ಷಣೆಯಲ್ಲೂ ಪಾಲ್ಗೊಂಡು ಎಲ್ಲರ ಮನಗೆದ್ದರು. ಕಳತ್ತೂರು ಅಂಗನವಾಡಿ ಸಹಾಯಕಿ ಫ್ಲೋರ ಡಿ'ಸೋಜ ಅವರ ನೇತೃತ್ವದಲ್ಲಿ ಶಿಬಿರಾಥರ್ಿಗಳಿಗೆ ಊಟೋಪಚಾರದ ವ್ಯವಸ್ಥೆಯನ್ನು ಮಾಡಲಾಗಿತ್ತು. ಸುರತ್ಕಲ್ ಕಾಲೇಜಿನ ಪ್ರಾಧ್ಯಾಪಕಿ ಕು.ಲವೀನ ಭಾಗವಹಿಸಿ ಪ್ರೋತ್ಸಾಹದಾಯಕ ಮಾತುಗಳನ್ನಾಡಿದರು. ಅಂಗಡಿಮೊಗೇರು ಶಾಲೆಯ ರವಿಶಂಕರ್ ಹಾಗೂ ಬೇಳ ಶಾಲೆಯ ಅರಣ್ ಶಿಬಿರ ಸಂದರ್ಭದಲ್ಲಿ ಹಾಜರಿದ್ದು ಸಂಪೂರ್ಣ ಬೆಂಬಲ ನೀಡಿದರು. ಗುರುಮೂತರ್ಿ ನಾಯ್ಕಾಪು, ಪ್ರದೀಪ್ ಕಿದೂರು ಹಾಗೂ ಗ್ಲೆನ್ ಕಿದೂರು ನೇತೃತ್ವ ನೀಡಿದ ಶಿಬಿರಕ್ಕೆ ಪರಿಸರ, ಪಕ್ಷಿ ಪ್ರೇಮಿ ಶಿಕ್ಷಕ ರಾಜು ಸ್ಟೀಪನ್ ಕಿದೂರು ನಿದರ್ೇಶಕರಾಗಿ ಸಹಕರಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries