HEALTH TIPS

ಯಾವುದೇ ಶೀರ್ಷಿಕೆಯಿಲ್ಲ

ಬದಲಾಗುವುದು ಬದುಕಿನ ಮಹಾನ್ ಸಾಧನೆ-ಕೊಮಡೆವೂರು ಶ್ರೀಗಳು ಬದಿಯಡ್ಕ: ಮನಸ್ಸು ಸಮುದ್ರದಂತೆ ಎಲ್ಲವನ್ನೂ ಸ್ವೀಕರಿಸುತ್ತದೆ. ಅದರಲ್ಲಿ ವಿಷ ಹಾಗು ಅಮೃತ ಎರಡೂ ಇರುತ್ತದೆ. ಆದರೆ ಅಲ್ಲಿ ಯಾವುದನ್ನು ಉಳಿಸಬೇಕೆಂಬುದನ್ನು ನಾವೇ ನಿರ್ಧರಿಸಬೇಕು. ಅದು ಬದುಕನ್ನು ಬದಲಾಯಿಸುತ್ತದೆ ಎಂದು ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದ ಶ್ರೀಯೋಗಾನಂದ ಸರಸ್ವತೀ ಶ್ರೀಗಳು ಆಶೀರ್ವಚನ ನೀಡಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ಸಮಿತಿ, ಜಿಲ್ಲಾ ಜನಜಾಗೃತಿ ವೇದಿಕೆ ಹಾಗು ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಪೆರಡಾಲ ಶ್ರೀಉದನೇಶ್ವರ ಕ್ಷೇತ್ರ ಸಭಾಂಗಣದಲ್ಲಿ ಸೋಮವಾರ ಆರಂಭಗೊಂಡ 1155ನೇ ಮದ್ಯವರ್ಜನ ಶಿಬಿರಕ್ಕೆ ಮಂಗಳವಾರ ಸಂಜೆ ಭೇಟಿ ನೀಡಿ ಶಿಬಿರಾಥರ್ಿಗಳೊಂದಿಗೆ ವಿಶೇಷ ಸಂವಾದ ನಡೆಸಿ ಅವರು ಮಾತನಾಡಿದರು. ಸೀಮಿತ ಮಾನವ ಬದುಕನ್ನು ಭಗವತ್ ಸಂಪ್ರೀತಿಯೊಂದಿಗೆ ಪೂರೈಸುವ ಹೊಣೆ ಪ್ರತಿಯೊಬ್ಬರಿಗೂ ಇದೆ. ವೇದ ಪುರಾಣಗಳು ಮಾನವ ಬದುಕಿನ ಏಳು ಬೀಳುಗಳ ಬಗ್ಗೆ, ಗಮಿಸಬೇಕಾದ ಹಾದಿಯ ಬಗ್ಗೆ ಬೆಳಕು ಚೆಲ್ಲಿದ್ದು, ಪಾಪಕೃತ್ಯಗಳಿಂದ ಮತ್ತಷ್ಟು ಕುಗ್ಗಿ ಬದುಕು ನಿರರ್ಥಕವಾಗುತ್ತದೆ ಎಂದು ತಿಳಿಸಿದ ಅವರು, ಪಿಡುಗುಗಳಿಗೆ ಬಲಿಯಾಗಿ ಬದುಕು ಅತಂತ್ರಗೊಳ್ಳುವ ಮೊದಲು ಸಕಾಲದಲ್ಲಿ ಎಚ್ಚರಗೊಂಡು ಬದಲಾಗಲು ಹೊರಟಿರುವುದು ಜೀವನದ ದೊಡ್ಡ ಸಾಧನೆಯೆಂದು ಪ್ರಶಂಸಿಸಿದರು. ಜಿಲ್ಲಾ ಜನಜಾಗೃತಿ ವೇದಿಕೆಯ ಅಧ್ಯಕ್ಷ ಗೋಪಾಲ ಶೆಟ್ಟಿ ಅರಿಬೈಲು, ಮದ್ಯವರ್ಜನ ಸಮಿತಿಯ ಟಿ.ಕೆ.ನಾರಾಯಣ ಭಟ್, ವೆಂಕಟಕೃಷ್ಣ ಭಟ್, ಶ್ಯಾಮ್, ಎಂ.ಎಚ್.ಜನಾರ್ಧನ್ ಉಪಸ್ಥಿತರಿದ್ದರು. ಕೊಂಡೆವೂರು ಶ್ರೀಗಳನ್ನು ಶಿಬಿರ ಸ್ಥಳಕ್ಕೆ ಸ್ವಸಹಾಯ ಸಂಘಗಳ ಒಕ್ಕೂಟಗಳ ಬದಿಯಡ್ಕ, ಮಾರ್ಪನಡ್ಕ ಸಮಿತಿಗಳ ಸದಸ್ಯರು ಪೂರ್ಣಕುಂಭದೊಮದಿಗೆ ಸ್ವಾಗತಿಸಿದರು. ಜಿಲ್ಲಾ ಯೋಜನಾಧಿಕಾರಿ ಚೇತನಾ ಎಂ. ಸ್ವಾಗತಿಸಿ, ಶಿಬಿರಾಧಿಕಾರಿ ದೇವೀಪ್ರಸಾದ್ ವಂದಿಸಿದರು. ಮೇಲ್ವಿಚಾರಕ ಧನಂಜಯ ಕಾರ್ಯಕ್ರಮ ನಿರೂಪಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries