ಅನಂತಪುರ ವಾರ್ಡಿನಿಂದ ಬಿಜೆಪಿ ಬಂಡುಕೋರ, ಪಕ್ಷೇತರನಾಗಿ ಸ್ಪರ್ಧಿಸಿ ಚುನಾಯಿತರಾದ ಸತೀಶ ಅವರು ಯುಡಿಎಫ್ ಬೆಂಬಲಿಸಿದ ಕಾರಣ ಪಂ. ಆಡಳಿತ ಯುಡಿಎಫ್ ಗೆ ಒಲಿದೆ. ಎಡರಂಗಕ್ಕೆ ಏಳು ಸದಸ್ಯ ಬಲವಿದೆ. ಜೊತೆಗೆ ಬಿಜೆಪಿಯ ಎರಡು ಮತ್ತು ಯುಡಿಎಫ್ ನ ಒಂದು ಮತ ನೋಟಕ್ಕೆ ಬಿದ್ದಿದೆ. ಈ ಮೂಲಕ ಪುತ್ತಿಗೆಯಲ್ಲಿ ಮತ್ತೊಮ್ಮೆ ಕೋ-ಲೀ-ಬಿ. ಮ್ಯೆತ್ರಿ ಅನಾವರಣಗೊಂಡಿದೆ ಎಂದು ಸಿಪಿಎಂ ಆರೋಪಿಸಿದೆ.
ಎರಡೂವರೆ ದಶಕದ ಹಿಂದೊಮ್ಮೆ ಪುತ್ತಿಗೆಯಲ್ಲಿ ಬಿಜೆಪಿ-ಯುಡಿಎಫ್ ಮೖತ್ರಿಕೂಟದ ಆಡಳಿತ ನಡೆದಿತ್ತು. ಅಂದು ಕಾಂಗೖ, ಲೀಗ್, ಬಿಜೆಪಿ ಮೖತ್ರಿ ಕೇರಳ ರಾಜಕೀಯದಲ್ಲೇ ವ್ಯಾಪಕ ಚರ್ಚೆಯಾಗಿತ್ತು.
ಬಿಜೆಪಿ ಬಂಡುಕೋರನ ಬೆಂಬದಿಂದ ಅತಂತ್ರ ಪುತ್ತಿಗೆಯಲ್ಲಿ ಯುಡಿಎಫ್ ಆಡಳಿತಕ್ಕೆ
0
ಡಿಸೆಂಬರ್ 28, 2025
ಕುಂಬಳೆ: ಯಾರಿಗೂ ಬಹುಮತವಿಲ್ಲದೇ ಅತಂತ್ರ ಸ್ಥಿತಿಯಲ್ಲಿದ್ದ ಪುತ್ತಿಗೆ ಗ್ರಾ. ಪಂ. ನಲ್ಲಿ ಬಿಜೆಪಿ ಬಂಡುಕೋರ ಸದಸ್ಯ ನೀಡಿದ ಬೆಂಬಲದ ಪರಿಣಾಮ ಯುಡಿಎಫ್ ಪಂಚಾಯತ್ ಆಡಳಿತಕ್ಕೇರಿದೆ. ಯುಡಿಎಫ್ ನ ಯುವ ನಾಯಕಿ, 23ರ ಹರೆಯದ ಫಿದಾ ಊಜಂಪದವು ಎಂಟು ಸದಸ್ಯ ಬಲದ ಬೆಂಬಲದೊಂದಿಗೆ ಅಧ್ಯಕ್ಷರಾಗಿ ಆಯ್ಕೆಯಾದರು.
Tags

