ಬದಿಯಡ್ಕ: ಹೆರಿಗೆ ನಂತರ ಉಂಟದ ಅತಿಯಾದ ರಕ್ತಸ್ರಾವದಿಂದ ಗೃಹಿಣಿ ಮೃತಪಟ್ಟಿದ್ದಾರೆ. ಕುಂಬ್ಡಾಜೆ ತೆಕ್ಕೆಮೂಲೆ ನಿವಾಸಿ, ಕುಞÂಕಣ್ಣ ಮಣಿಯಾಣಿ ಎಂಬವರ ಪುತ್ರಿ ಟಿ. ನಳಿನಾಕ್ಷಿ (38 ) ಮೃತಪಟ್ಟವರು. ಇವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿ ಹೆಣ್ಣು ಮಗುವಿಗೆ ಜನ್ಮ ನೀಡಿದ್ದು, ನಂತರ ಅತಿಯಾದ ರಕ್ತಸ್ರಾವಕ್ಕೆ ಒಳಗಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ. ರಕ್ತಸ್ರಾವದ ಜತೆಗೆ ಹೃದಯಾಘಾತ ಸಾವಿಗೆ ಕಾರಣವೆನ್ನಲಾಗಿದೆ. ನಳಿನಾಕ್ಷಿ ಅವರು ಕೇರಳ ಸರ್ಕಾರದ ಸಹಕಾರಿ ಇಲಾಖೆಯ ಹಿರಿಯ ಆಡಿಟರ್ ಹುದ್ದೆಯಲ್ಲಿದ್ದರು. ಇವರು ಅರವತ್ ಕುದಿರಕ್ಕೋಡ್ ನಿವಾಸಿ ರಾಘನ್ ಅವರ ಪತ್ನಿ.


