ಕಾಸರಗೋಡು: ಕಬಡ್ಡಿ ಪಂದ್ಯಾಟಕ್ಕಾಗಿ ತೋರಣ ಕಟ್ಟುವ ಸಂದರ್ಭ ಹೃದಯಾಘಾತಕ್ಕೊಳಗಾಗಿ ಯುವಕ ಮೃತಪಟ್ಟ ಘಟನೆ ಪಡನ್ನಕ್ಕಾಡಿನಲ್ಲಿ ನಡೆದಿದೆ. ಇಲ್ಲಿನ ಅನಂತಪಳ್ಳ ನಿವಾಸಿ, ರಾಜ್ಯ ಕಬಡ್ಡಿ ಪಟು ಹಾಗೂ ವಿದ್ಯಾರ್ಥಿ ನಿತಿನ್‍ಕೃಷ್ಣ(16)ಮೃತಪಟ್ಟವರು. ಅನಂತಪಳ್ಳದ ಶಬರಿ ಕ್ಲಬ್ ವತಿಯಿಂದ ಮಂಗಳವಾರ ಆಯೋಜಿಸಲಾಗಿದ್ದ ಲೆಜೆಂಡ್ ಒಕ್ಕೂಟ ಕಬಡ್ಡಿ ಪಂದ್ಯಾಟಕ್ಕಾಗಿ ತೋರಣ ಕಟ್ಟುವ ಸಂದರ್ಭ ಕುಸಿದುಬಿದ್ದ ನಿತಿನ್‍ಕೃಷ್ಣ ಅವರನ್ನು ತಕ್ಷಣ ನೀಲೇಶ್ವರದ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಕೋಯಿಕ್ಕೋಡ್ ಮುಕ್ಕಂ ವೊಕೇಶನಲ್ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‍ವನ್ ವಿದ್ಯಾರ್ಥಿಯಾಗಿದ್ದ ನಿತಿನ್ ಕೃಷ್ಣ ರಜೆಯಲ್ಲಿ ಊರಿಗೆ ಆಗಮಿಸಿದ್ದನು.

