ಮುಳ್ಳೇರಿಯ: ಯಕ್ಷತೂಣೀರ ಸಂಪ್ರತಿಷ್ಠಾನ ಕೋಟೂರು ನೇತೃತ್ವದಲ್ಲಿ ಸ್ಕಂದ ಕೈಗಾರಿಕಾ ಸಂಸ್ಥೆಯ ವಠಾರದಲ್ಲಿ ಯಕ್ಷಗಾನ ನಾಟ್ಯ ತರಗತಿಯು ಪ್ರಾರಂಭವಾಯಿತು. ಪ್ರತಿಷ್ಠಾನದ ಗೌರವಾಧ್ಯಕ್ಷ ಗೋವಿಂದ ಬಳ್ಳಮೂಲೆ ಮತ್ತು ಅಧ್ಯಕ್ಷ ಸುಬ್ರಹ್ಮಣ್ಯ ಭಟ್ ಅಡ್ಕ ಇವರು ದೀಪಜ್ವಲನ ಮಾಡಿ ಕಾರ್ಯಕ್ರಮ ಉದ್ಘಾಟಿಸಿದರು.
ಕೃಷ್ಣ ಭಟ್ ಅಡ್ಕ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿದರು. ನಾಟ್ಯ ತರಗತಿಯು ಬಾಲಕೃಷ್ಣ ಏಳ್ಕಾನ ಇವರ ನೇತೃತ್ವದಲ್ಲಿ ಮುನ್ನಡೆಯಲಿದೆ. ಕಾರ್ಯದರ್ಶಿ ಮುರಳಿಕೃಷ್ಣ ಸ್ಕಂದ ಕಾರ್ಯಕ್ರಮ ಸಂಯೋಜನೆ ಮಾಡಿದರು.
ವೆಂಕಟ ಭಟ್ ಎಡನೀರು, ಹರಿಕೃಷ್ಣ, ಪಲ್ಲವಿ, ವಿಜಯಮುರಳಿ, ರಾಜೇಶ್ವರಿ, ಸರಸ್ವತಿ ಉಪಸ್ಥಿತರಿದ್ದರು.

.jpg)
.jpg)
