HEALTH TIPS

ಸಂವಿಧಾನದ ಇತಿಹಾಸಕ್ಕೆ ಶ್ರೀ ಎಡನೀರು ಮಠದ ಕೊಡುಗೆ ಮಹತ್ವದ್ದು: ಯಕ್ಷಗಾನ ಬಯಲಾಟದ ಸಮಾರೋಪ ಸಮಾರಂಭ ಉದ್ಘಾಟಿಸಿ ರಾಘವೇಂದ್ರ ಭಟ್ ಅಭಿಪ್ರಾಯ

ಕಾಸರಗೋಡು: ಧಾರ್ಮಿಕ, ಸಾಮಾಜಿಕ ಬದುಕಿನ ಜತೆಗೆ ದೇಶದ ಸಂವಿಧಾನದ ಇತಿಹಾಸಕ್ಕೆ ತನ್ನದೇ ಆದ ಕೊಡುಗೆ ನೀಡುವಲ್ಲಿ ಶ್ರೀಎಡನೀರು ಮಠದ ಪಾತ್ರ ಮಹತ್ತರವಾದುದು ಎಂದು ಕರ್ನಾಟಕ ಬ್ಯಾಂಕ್ ಆಡಳಿತ ನಿರ್ದೇಶಕ ರಾಘವೇಂದ್ರ ಭಟ್ ತಿಳಿಸಿದ್ದಾರೆ.


ಅವರು ಎಡನೀರು ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಅವರ ಆರನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆ ಅಂಗವಾಗಿ ಶ್ರೀಕ್ಷೇತ್ರದ ಸಭಾಂಗಣದಲ್ಲಿ ಹನುಮಗಿರಿ ಶ್ರೀ ಕೋದಂಡರಾಮ ಕೃಪಾಪೆÇೀಷಿತ ಯಕ್ಷಗಾನ ಮಂಡಳಿ ವತಿಯಿಂದ ನಡೆಯುತ್ತಿರುವ ಯಕ್ಷಗಾನ ಬಯಲಾಟದ ಸಮಾರೋಪ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು. ಭಾರತದ ಸಂವಿಧಾನದ ಮೂಲರಚನೆಯನ್ನು ಸಂರಕ್ಷಿಸುವ ರೀತಿಯ ತೀರ್ಪು ಹೊರಬರಲು ಶ್ರೀಎಡನೀರು ಮಠದ ಕೃಷ್ಣೈಕ್ಯ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿ ಕಾರಣಕರ್ತರಾಗಿರುವುದಲ್ಲದೆ, ಈ ತೀರ್ಪು ಸಂವಿಧಾನದ ರಕ್ಷಣೆಯ ಮಹತ್ವದ ಮೈಲಿಗಲ್ಲಾಗಿದೆ.  ಶ್ರೀಮಠ ಆಸ್ತಿಕತೆ, ಧಾರ್ಮಿಕ ಪ್ರಜ್ಞೆಯ ಜತೆಗೆ ಕಲೆ, ಸಂಸ್ಕøತಿ ಪೋಷಿಸಿಕೊಂಡು ಬರುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು. ಎಡನೀರು ಶ್ರೀ ಸಚ್ಚದಿಆನಂದ ಭಾರತೀ ಸ್ವಾಮೀಜಿ ಆಶೀರ್ವಚನ ನೀಡಿ, ಕಲೆಗಳು ಸೊರಗುವ ಇಂದಿನ ಕಾಲಘಟ್ಟದಲ್ಲಿ, ಯಕ್ಷಗಾನ ಸತ್ವಯುತವಾಗಿ ಉಳಿದುಕೊಳ್ಳಲು ಆ ಕಲೆಯ ಸಂಸ್ಕಾರ ಕಾರಣವಾಗಿದೆ.  ಪೌರಾಣಿಕದ ಜತೆಗೆ ದೈವರಾಧನೆಗೂ ಮಹತ್ವ ನೀಡಿದ ಕಲೆ ಯಕ್ಷಗಾನವಾಗಿದೆ ಎಂದು ತಿಳಿಸಿದರು.

ಈ ಸಂದರ್ಭ ಕೇಂದ್ರ ಸಂಗೀತ-ನೃತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕøತ ಕೆರೆಮನೆ ಶಿವಾನಂದ ಹೆಗಡೆ ಅವರನ್ನು ಅಭಿನಂದಿಸಲಾಯಿತು. ಅಭಿನಂದನೆ ಸ್ವೀಕರಿಸಿ ಮಾತನಾಡಿ, ಬದುಕನ್ನು ಪ್ರೇರೇಪಿಸಿದ ಯಕ್ಷಗಾನ ಕಲೆಯನ್ನು ಬೆಳೆಸಿ, ಪೋಷಿಸಿಕೊಂಡು ಬರುವಲ್ಲಿ ಶ್ರೀ ಎಡನೀರುಮಠದ ಕಾರ್ಯ ಶ್ಲಾಘನೀಯ ಎಂದು ತಿಳಿಸಿದರು.

ಶಾಸಕ ಎ.ಕೆ.ಎಂ ಅಶ್ರಫ್ ಅಧ್ಯಕ್ಷತೆ ವಹಿಸಿ ಮಾತನಾಡಿ,  ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬ ಅವರ ಪುಣ್ಯ ನೆಲದಲ್ಲಿ ಗಂಡುಮೆಟ್ಟಿನ ಕಲೆ ಯಕ್ಷಗಾನಕ್ಕೆ ಶ್ರೀಎಡನೀರು ಮಠ ನೀಡುತ್ತಿರುವ ಸಹಕಾರ ಮಹತ್ತರವಾದುದು. ಕೇರಳ ಯಕ್ಷಗಾನ ಅಕಾಡಮಿಯನ್ನು ಉತ್ತಮರೀತಿಯಲ್ಲಿ ಮುನ್ನಡೆಸಿಕೊಂಡುಹೋಗುವಲ್ಲಿ ರಾಜ್ಯ ಸಂಸ್ಕøತಿ ಖಾತೆ ಸಚಿವರನ್ನು ಆಗ್ರಹಿಸುವುದರ ಜತೆಗೆ ಯಕ್ಷಗಾನಕ್ಕೆ ಸಹಕಾರ ನೀಡಲು ಶ್ರಮಿಸುವುದಾಗಿ ತಿಳಿಸಿದರು.

ಕರ್ನಾಟಕ ಮಾನವಹಕ್ಕುಗಳ ಆಯೋಗ ಅಧ್ಯಕ್ಷ ಡಾ. ಟಿ. ಶ್ಯಾಮ ಭಟ್ ಗೌರವ ಉಪಸ್ಥಿತರಿದದರು. ಹರೀಶ್ ಬಳಂತಿಮೊಗರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries