ಯಾವುದೇ ಶೀರ್ಷಿಕೆಯಿಲ್ಲ
0
ನವೆಂಬರ್ 14, 2017
ಕೇರಳ ಗ್ರಾಮೀಣ ಬ್ಯಾಂಕ್ನಲ್ಲಿ ಸೆಲಿ ಖಾತೆಗೆ ಅವಕಾಶ
ಬ್ಯಾಂಕಿಗೆ ತೆರಳದೆ ಬ್ಯಾಂಕಿಂಗ್ ವ್ಯವಹಾರ
ಕಾಸರಗೋಡು: ಕೇರಳ ಗ್ರಾಮೀಣ ಬ್ಯಾಂಕ್ನಲ್ಲಿ ಬ್ಯಾಂಕ್ಗೆ ತೆರಳದೆ ಖಾತೆ ತೆರೆಯುವ ಸೌಲಭ್ಯ ಜಾರಿಗೊಳಿಸಲಾಗಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ. ಇದಕ್ಕಾಗಿ ವ್ಯಕ್ತಿಯೊಬ್ಬ ಮಾಡಬೇಕಾದುದೇನೆಂದರೆ ತನ್ನ ಅಂಡ್ರಾಯ್ಡ್ ಮೊಬೈಲ್ ಫೋನಿನ ಮೂಲಕ ಡಿ.ಜಿ ಕೆ.ಜಿ.ಬಿ. ಎಂಬ ಅಪ್ಲಿಕೇಶನನ್ನು ಮೊದಲು ಡೌನ್ಲೋಡ್ ಮಾಡಿ ಇನ್ಸ್ಟಾಲ್ ಮಾಡಿಟ್ಟು ಕೊಳ್ಳಬೇಕು. ಇದು ಗೂಗಲ್ ಪ್ಲೇಸ್ಟೋರ್ನಲ್ಲಿ ಉಚಿತವಾಗಿ ಲಭ್ಯ. ಇದನ್ನು ತೆರೆದಾಕ್ಷಣ ಅದು ನಮ್ಮ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಕೇಳುತ್ತದೆ. ಅದನ್ನು ಅಲ್ಲಿ ಒದಗಿಸಿದಾಗ ಮುಂದಿನ ಪರದೆ ಖಾತೆ ತೆರೆದು ಅಥರ್ಾತ್ ಓಪನ್ ಏನ್ ಎಕೌಂಟ್ ಆಗಿರುತ್ತದೆ. ಅದರ ಮೂಲಕ ಹೋದಾಗ ಓ.ಟಿ.ಪಿ. ಅಂದರೆ ವನ್ ಟೈಮ್ ಪಾಸ್ವಡರ್್ ನಮ್ಮ ಮೊಬೈಲ್ಗೆ ಬಂದು ಸೇರುತ್ತದೆ. ಅದನ್ನು ನಮೂದಿಸಿದಾಗ ನಮ್ಮ ಐಡೆಂಟಿಟಿಗಳನ್ನು ತಿಳಿಸುವ ಪರದೆ ತೆರೆದುಕೊಳ್ಳುತ್ತದೆ. ಅಲ್ಲಿ ಆಧಾರ್ ಕಾಡರ್್ ಸಂಖ್ಯೆ, ಪ್ಯಾನ್ ಸಂಖ್ಯೆ(ಇದು ಖಡ್ಡಾಯವಲ್ಲ), ಇ-ಮೈಲ್ ವಿಳಾಸ(ಇದ್ದರೆ ಮಾತ್ರ), ನಮ್ಮ ಹೆಸರು, ಪ್ರಾಯ, ಉದ್ಯೋಗ ಇತ್ಯಾದಿಗಳನ್ನು ಒದಗಿಸಬೇಕು.
ಅಷ್ಟರಲ್ಲಿ ನಮಗೆ ಬ್ಯಾಂಕಿನ ಯಾವ ಶಾಖೆಯಲ್ಲಿ ಖಾತೆ ಬೇಕು ಎಂದು ಅದು ಕೇಳುತ್ತದೆ. ಅದನ್ನು ತಿಳಿಸಿದಾಕ್ಷಣ ನಾವು ತಿಳಿಸಿದ ಶಾಖೆಯಲ್ಲಿ ಖಾತೆ ತೆರೆದು ಖಾತೆ ಸಂಖ್ಯೆಯನ್ನು ನಮ್ಮ ಮೊಬೈಲ್ಗೆ ರವಾನಿಸುತ್ತದೆ. ಜತೆಗೆ ಶಾಖೆಯ ಐಎಫ್ಎಸ್ ಕೋಡು, ಪ್ರಬಂಧಕರ ದೂರವಾಣಿ ಸಂಖ್ಯೆ ಇತ್ಯಾದಿ ಮಾಹಿತಿಗಳು ಲಭಿಸುತ್ತದೆ. ಈ ಖಾತೆಯ ಮುಖೇನ ಎಲ್ಲಾ ಬ್ಯಾಂಕಿಂಗ್ ಸೌಲಭ್ಯಗಳನ್ನೂ ಪಡೆಯಬಹುದು. ವ್ಯವಹಾರಗಳನ್ನೂ ಮಾಡಬಹುದು. ಅಂದರೆ ರೈಲು, ಬಸ್ಗಳ ಟಿಕೆಟ್ ಕಾದಿರಿಸುವಿಕೆ, ಆನ್ಲೈನ್ ಖರೀದಿ, ವಿದ್ಯುತ್, ದೂರವಾಣಿ ಮೊದಲಾದವುಗಳ ಹಣ ಪಾವತಿ ಇತ್ಯಾದಿ. ಅದೇ ಮೊಬೈಲ್ ಮೂಲಕ ಗ್ರಾಹಕ ತನ್ನ ಸೆಲ್ಪಿ ಭಾವಚಿತ್ರವನ್ನು ತೆಗೆದು ಖಾತೆಗೆ ಜೋಡಿಸಿಕೊಳ್ಳಬಹುದು. ಆದರೆ ಖಾತೆ ತೆರೆದ ಒಂದು ತಿಂಗಳ ಒಳಗಾಗಿ ನಾವು ಖಾತೆ ತೆರೆಯುವ ಸಂದರ್ಭದಲ್ಲಿ ಯಾವ್ಯಾವ ದಾಖಲೆಗಳ ಮಾಹಿತಿಯನ್ನು ಒದಗಿಸಿರುತ್ತೇವೆಯೋ ಅವುಗಳ ಮೂಲ ಪ್ರತಿಯನ್ನು ಶಾಖೆಗೆ ತೆರಳಿ ಅಲ್ಲಿ ತೋರಿಸಿ ದೃಢೀಕರಿಸಿಕೊಳ್ಳಬೇಕು. ಯುವ ತಲೆಮಾರಿನ ಜನಾಂಗವನ್ನು ದೃಷ್ಟಿಯಲ್ಲಿರಿಸಿಕೊಂಡು ಆರಂಭಿಸಿರುವ ಈ ಸೆಲ್ಪಿ ಬ್ಯಾಂಕಿಂಗ್ ಸೌಲಭ್ಯವನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ಬ್ಯಾಂಕಿನ ವಿಭಾಗೀಯ ಪ್ರಬಂಧಕಿ ಉಷಾ ಕುಮಾರಿ ತಿಳಿಸಿದ್ದಾರೆ.


