ಸಮರ್ಪಣಾ ಭಾವದಿಂದ ದುಡಿಯುವವರು ನಮ್ಮ ಸಂಪತ್ತು-ರವೀಶ ತಂತ್ರಿ
0
ಡಿಸೆಂಬರ್ 13, 2018
ಮುಳ್ಳೇರಿಯ: ಸಮರ್ಪಣಾ ಭಾವದಿಂದ ದುಡಿಯುವವರು ನಮ್ಮ ಸಂಪತ್ತು; ಜನ್ಮದ ಮೌಲ್ಯವನ್ನು, ಸಂಸ್ಕಾರವನ್ನು ಉಳಿಸಿಕೊಂಡು ನಾವು ಜೀವಿಸಬೇಕು ಎಂದು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಹೇಳಿದರು.
ಅವರು ಗಾಳಿಮುಖ ಶಕ್ತಿನಗರ ಶ್ರೀ ಅಯ್ಯಪ್ಪ ಸ್ವಾಮಿ ಭಜನಾ ಮಂದಿರದ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಬುಧವಾರ ನಡೆದ ಧಾರ್ಮಿಕ ಸಭೆಯಲ್ಲಿ ಧಾರ್ಮಿಕ ಉಪನ್ಯಾಸಗೈದು ಮಾತನಾಡಿದರು.
ಬ್ರಹ್ಮಶ್ರೀ ವಾಸುದೇವ ತಂತ್ರಿ ಆಶೀರ್ವಚನ ನೀಡಿ ಸಾನಿಧ್ಯ ಶಕ್ತಿಗಳಿಂದ ನಮ್ಮ ಸುತ್ತಲಿನ ಕತ್ತಲಿನ ವಾತಾವರಣ ತಿಳಿಯಾಗುತ್ತದೆ. ಶಬರಿಮಲೆ ದರ್ಶನ ಪಡೆಯುವವರು ವ್ರತಾಚರಣೆಗೆ ಬದ್ಧರಾಗಬೇಕು ಎಂದು ಹೇಳಿದರು.
ಪ್ರತಿಷ್ಠಾ ಮಹೋತ್ಸವ ಸಮಿತಿ ಅಧ್ಯಕ್ಷ ಬಾಲಕೃಷ್ಣ ಭಟ್ ಅಧ್ಯಕ್ಷತೆ ವಹಿಸಿದ್ದರು. ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಆಶೀರ್ವಚನ ನೀಡಿದರು. ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ಕ್ಷೇತ್ರ ಸೇವಾ ಸಮಿತಿ ಅಧ್ಯಕ್ಷ ಪದ್ಮನಾಭ ಭಟ್, ಅಡೂರು ಶ್ರೀಕ್ಷೇತ್ರ ಸಮಿತಿ ಕಾರ್ಯದರ್ಶಿ ಗಂಗಾಧರ ಕಾಂತಡ್ಕ, ಅಪ್ಪಕುಂಞÂ ಗುರುಸ್ವಾಮಿ ಅಡೂರು, ಕುಂಞÂಕಣ್ಣ ಗುರುಸ್ವಾಮಿ ಪಾಂಡಿ, ಎಂ.ಸಿ.ನಾಯರ್ ಗುರುಸ್ವಾಮಿ, ಯಾದವ ರಾವ್ ಗುರುಸ್ವಾಮಿ ಕುಂಟಾರು, ಶಶಿಧರ ಗುರುಸ್ವಾಮಿ ಗಾಳಿಮುಖ, ನಾರಾಯಣ ರೈ ಗುರುಸ್ವಾಮಿ, ಬಾಲಕೃಷ್ಣ ಗುರುಸ್ವಾಮಿ, ಡಾ.ಕಾರ್ತಿಕ್ ಗಾಳಿಮುಖ, ಗಾಳಿಮುಖ ಗೇರು ಕಾರ್ಖಾನೆ ಮಾಲಕ ಶ್ರೀಕಾಂತ್, ಕುಂಟಾರು ಶ್ರೀ ಅಯ್ಯಪ್ಪ ಭಜನಾ ಮಂದಿರದ ಅಧ್ಯಕ್ಷ ಜನಾರ್ದನ, ರಾಘವನ್ ಗುರುಸ್ವಾಮಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸುಂದರಿ ಗಾಳಿಮುಖ ಅವರನ್ನು ಬ್ರಹ್ಮಶ್ರೀ ವಾಸುದೇವ ತಂತ್ರಿ ಗೌರವಿಸಿದರು.
ಪ್ರತಿಷ್ಠಾ ಮಹೋತ್ಸವ ಸಮಿತಿ ಕಾರ್ಯದರ್ಶಿ ಪ್ರಕಾಶ.ಯಂ ಸ್ವಾಗತಿಸಿ, ದಾಮೋದರ ಮಾಟೆ ಕಾರ್ಯಕ್ರಮ ನಿರೂಪಿಸಿದರು. ರಂಜಿತ್ ಪೊಸೊಳಿಗೆ ವಂದಿಸಿದರು.


