ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದಲ್ಲಿ ಷಷ್ಠೀ ಮಹೋತ್ಸವ
0
ಡಿಸೆಂಬರ್ 13, 2018
ಪೆರ್ಲ:ಕಾಟುಕುಕ್ಕೆ ಶ್ರೀ ಸುಬ್ರಾಯ ದೇವಳದ ಜಾತ್ರೊತ್ಸವದ ಪ್ರಯುಕ್ತ ಗುರುವಾರ ಷಷ್ಠೀ ಮಹೋತ್ಸವ ಅಂಗವಾಗಿ ಉಷಃಪೂಜೆ, ಗಣಪತಿ ಹೋಮ, ಉತ್ಸವ, ತುಲಾಭಾರ ಸೇವೆ, ಪಲ್ಲ ಪೂಜೆ ಮಧ್ಯಾಹ್ನ ಅನ್ನ ಸಂತರ್ಪಣೆಯ ಬಳಿಕ ಮಡೆಸ್ನಾನ, ಬೀದಿ ಮಡೆಸ್ನಾನ, ಸಂಜೆ ಲಲಿತ ಕಲಾ ಸದನ, ವಿಟ್ಲ ಇದರ ನೃತ್ಯ ನಿರ್ದೇಶಕಿ ವಿದುಷಿ ನಯನ ಸತ್ಯನಾರಾಯಣ ಇವರ ಶಿಷ್ಯ ವೃಂದದವರಿಂದ ನೃತ್ಯ ವೈಭವ ರೂಪಕ, 'ಭೂಕೈಲಾಸ' ಪ್ರದರ್ಶನ, ರಾತ್ರಿ ಶ್ರೀಭೂತಬಲಿ, ಭಂಡಾರದ ಮನೆ ವನಕ್ಕೆ ಶ್ರೀ ದೇವರ ಸವಾರಿ ಬಳಿಕ ಹಿಂತಿರುಗಿ ಬಂದು ಬೆಡಿ ಉತ್ಸವ, ಶಯನ ಕಾರ್ಯಕ್ರಮಗಳು ನೆರವೇರಿತು.
ಶುಕ್ರವಾರ ಸಪ್ತಮಿ ಉತ್ಸವ ಆರಾಟು ದಿನದಂದು ಬೆಳಿಗ್ಗೆ 7ರಿಂದ ಗಣಪತಿ ಹೋಮ, ಶಯನೋತ್ಥಾನ ಮಂಗಲಾಭಿಷೇಕ, ಉಷಃಪೂಜೆ, ಗ್ರಾಮಸ್ಥರಿಂದ ಹಣ್ಣುಕಾಯಿ ಸಮರ್ಪಣೆ 10.30ಕ್ಕೆ ಅವಭೃಥ ಸ್ನಾನಕ್ಕೆ ಹೊರಡುವುದು, ಮಧ್ಯಾಹ್ನ 1ರಿಂದ ರಾಮಚಂದ್ರ ಮಣಿಯಾಣಿ ಕಾಟುಕುಕ್ಕೆ ಸಂಯೋಜನೆಯಲ್ಲಿ ಅತಿಥಿ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ 'ಶರ ಸೇತು ಬಂಧನ', ಸಂಜೆ 4ಕ್ಕೆ ದೇವರ ಆಗಮನ, ಬಟ್ಲು ಕಾಣಿಕೆ, ಪ್ರಸಾದ ವಿತರಣೆ, ಸಂಜೆ 6ರಿಂದ ಕಟ್ಟತ್ತಾಡೆ ಮಹಿಳಾ ಸಂಘದಿಂದ ಕುಣಿತ ಭಜನೆ ರಾತ್ರಿ 8ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, 9ಕ್ಕೆ ಹುಲಿಭೂತದ ನೇಮ, ರಂಗಪೂಜೆ, ಮಂತ್ರಾಕ್ಷತೆಯೊಂದಿಗೆ ಜಾತೋತ್ಸವ ಸಂಪನ್ನಗೊಳ್ಳಲಿದೆ.




