ಕುಂಜತ್ತೂರು : ಭೂತಬಲಿ ಉತ್ಸವ
0
ಡಿಸೆಂಬರ್ 13, 2018
ಮಂಜೇಶ್ವರ: ಕುಂಜತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಸನ್ನಿಧಿಯಲ್ಲಿ ವರ್ಷಂಪ್ರತಿಯ ಭೂತಬಲಿ ಉತ್ಸವವು ಡಿ.15 ರಿಂದ 17 ರ ವರೆಗೆ ಜರಗಲಿದೆ.
ಡಿ.15 ರಂದು ಶ್ರೀ ಕ್ಷೇತ್ರದಲ್ಲಿ ಸಂಜೆ 6 ಕ್ಕೆ ಪ್ರಾರ್ಥನೆ, 7 ಕ್ಕೆ ನಿತ್ಯ ಪೂಜೆ ಮತ್ತು ಶ್ರೀ ಮಹಾಗಣಪತಿ ದೇವರಿಗೆ ರಂಗಪೂಜೆ ನಡೆಯಲಿರುವುದು. ಇದರ ಪ್ರಯುಕ್ತ ನಡೆಯಲಿರುವ ಸಾಂಸ್ಕøತಿಕ ಕಾರ್ಯಕ್ರಮ ಸ್ಥಳೀಯ ಪ್ರತಿ`Éಗಳಿಂದ ಸಂಜೆ 6 ಕ್ಕೆ ಸಾಂಸ್ಕøತಿಕ ಸಂಗಮ, 7.30ಕ್ಕೆ ಸ`Á ಕಾರ್ಯಕ್ರಮ ನಡೆಯಲಿದೆ.
ಡಿ.16 ರಂದು ಬೆಳಗ್ಗೆ 6 ಕ್ಕೆ ಪ್ರಾತ: ಕಾಲ ಪೂಜೆ, 6.30ಕ್ಕೆ ಪಂಚಾಮೃತಾಭಿಷೇಕ, ಸೀಯಾಳಾಭಿಷೇಕ, 7 ಕ್ಕೆ ಶತರುದ್ರಾಭಿಷೇಕ, 9.30ಕ್ಕೆ ಅಭಿಷೇಕ ಪೂಜೆ, 10 ಕ್ಕೆ ನವಕ ಕಲಶಾಭಿಷೇಕ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅಪರಾಹ್ನ 1 ಕ್ಕೆ ನಿತ್ಯ ಬಲಿ, 1.30ಕ್ಕೆ ಅನ್ನಸಂತರ್ಪಣೆ, ರಾತ್ರಿ ಗಂಟೆ 8 ಕ್ಕೆ ಶ್ರೀ ದೇವರ ಬಯ್ಯನ ಬಲಿ ಹೊರಡುವುದು. 9 ಕ್ಕೆ ಉದ್ಯಾವರ ಶ್ರೀ ಭಗವತಿ ಅಮ್ಮನವರ ಭೇಟಿ ಉತ್ಸವ, 10.30ಕ್ಕೆ ವಸಂತ ಕಟ್ಟೆ ಪೂಜೆ, 12 ಕ್ಕೆ ಶ್ರೀ ದೇವರಿಗೆ ರಂಗ ಪೂಜೆ, ಪ್ರಸಾದ ವಿತರಣೆ ನಡೆಯಲಿರುವುದು.
ಸಾಂಸ್ಕøತಿಕ ಕಾರ್ಯಕ್ರಮದಂಗವಾಗಿ ಮಧ್ಯಾಹ್ನ 1.30ಕ್ಕೆ ಯಕ್ಷಗಾನ ತಾಳಮದ್ದಳೆ, ಸಂಜೆ 6 ಕ್ಕೆ ಹರಿಕಥೆ ನಡೆಯುವುದು.
ಡಿ.17 ರಂದು ಬೆಳಿಗ್ಗೆ ಗಂಟೆ 8.30 ಕ್ಕೆ ಬೆಳಗ್ಗಿನ ಬಲಿ ಹೊರಡುವುದು, 10.30ಕ್ಕೆ ದರ್ಶನ ಬಲಿ ಹಾಗೂ ಉದ್ಯಾವರ ಶ್ರೀ ದೈವಗಳ ಭೇಟಿ ಮತ್ತು ಬಟ್ಲು ಕಾಣಿಕೆ, ಮಹಾಪ್ರಸಾದ, ಮಧ್ಯಾಹ್ನ 12 ಕ್ಕೆ ಮಹಾ ಮಂತಾಕ್ಷತೆ, ಶ್ರೀ ನಾಗದೇವರಿಗೆ ಮತ್ತು ಶ್ರೀ ರಕ್ತೇಶ್ವರಿ ಅಮ್ಮನವರಿಗೆ ತಂಬಿಲ ಸೇವೆ, 12.30ಕ್ಕೆ ಮಹಾ ಪೂಜೆ ಮತ್ತು ಪ್ರಸಾದ ವಿತರಣೆ, 1 ಕ್ಕೆ ಅನ್ನಸಂತರ್ಪಣೆ ಜರಗಲಿರುವುದು.


