ಫೆ.17 : ಕಾಸರಗೋಡು ವಲಯ ಬಂಟರ ಸಂಘದ ಮಹಾಸಭೆ
0
ಫೆಬ್ರವರಿ 13, 2019
ಕಾಸರಗೋಡು: ಕಾಸರಗೋಡು ವಲಯ ಬಂಟರ ಸಂಘದ ಸರ್ವಸದಸ್ಯರ ಮಹಾಸಭೆಯು ಫೆ.17 ರಂದು ಭಾನುವಾರ ಬೆಳಗ್ಗೆ 10.30 ಕ್ಕೆ ಕಾಸರಗೋಡು ಹೊಸ ಬಸ್ ನಿಲ್ದಾಣ ಸಮೀಪದ ಸರ್ವೀಸ್ ಸಹಕಾರಿ ಬ್ಯಾಂಕ್ ಸಭಾಂಗಣದಲ್ಲಿ ನಡೆಯಲಿರುವುದು.
ಸಭೆಯಲ್ಲಿ ನೂತನ ಸಾಲಿನ ಪದಾಧಿಕಾರಿಗಳು ಹಾಗು ಪ್ರತಿ ಪಂಚಾಯತ್ ಸಮಿತಿಯಿಂದ ಜಿಲ್ಲಾ ಸಂಘಕ್ಕೆ ಪ್ರತಿನಿಧಿಗಳ ಆಯ್ಕೆ ನಡೆಯಲಿರುವುದು. ಸಂಘದ ಅಧ್ಯಕ್ಷ ಸುಬ್ಬಣ್ಣ ಶೆಟ್ಟಿ ಕುಚ್ಚಿಕ್ಕಾಡು ಅಧ್ಯಕ್ಷತೆ ವಹಿಸುವರು.
ಸಂಘದ ಸದಸ್ಯರು ಸಭೆಯಲ್ಲಿ ಭಾಗವಹಿಸಿ ಕಾರ್ಯಕ್ರಮದಲ್ಲಿ ಭಾಗಿಗಳಾಗಬೇಕೆಂದು ಕಾರ್ಯದರ್ಶಿ ರಮೇಶ್ ಶೆಟ್ಟಿ ಕಾಳ್ಯಂಗಾಡು ತಿಳಿಸಿದ್ದಾರೆ.

