ಶಿಕ್ಷಕ ಹುದ್ದೆಗೆ ಅರ್ಜಿ
0
ಫೆಬ್ರವರಿ 13, 2019
ಕಾಸರಗೋಡು: ಪರಿಶಿಷ್ಟ ಜಾತಿ-ಪಂಗಡ ಅಭಿವೃದ್ಧಿ ಇಲಾಖೆ ವ್ಯಾಪ್ತಿಯಲ್ಲಿ ಚಟುವಟಿಕೆ ನಡೆಸುತ್ತಿರುವ ಬೇಡಡ್ಕ ಆಶ್ರಮ ಶಾಲೆ, ಕಾಸರಗೋಡು ಮಾದರಿ ವಸತಿ ಶಾಲೆಗಳಲ್ಲಿ ಮುಂದಿನ ಶೈಕ್ಷಣಿಕ ವರ್ಷಕ್ಕಿರುವ ಶಿಕ್ಷಕ ಹುದ್ದೆಗಳಿಗೆ ಅರ್ಜಿ ಕೋರಲಾಗಿದೆ.
ಬೇಡಡ್ಕ ಆಶ್ರಮ ಶಾಲೆಯಲ್ಲಿ ಮುಖ್ಯಶಿಕ್ಷಕಿ, ದೈಹಿಕ ಟೀಚರ್, ಬೈಲಿಂಗ್ವಲ್ ಎಕ್ಸ್‍ಫರ್ಟ್ ಹುದ್ದೆಗಳಲ್ಲಿ ನೇಮಕಾತಿ ನಡೆಯಲಿದೆ. ಕಾಸರಗೋಡು ವಸತಿ ಸಾಲೆಯಲ್ಲಿ ಹೈಯರ್ ಸೆಕೆಂಡರಿ ವಿಭಾಗದಲ್ಲಿ ಇಂಗ್ಲೀಷ್, ಬೋಟನಿ, ಕಂಪ್ಯೂಟರ್ ಅಪ್ಲಿಕೇಷನ್, ಮಲೆಯಾಳ, ಕೆಮೆಸ್ಟ್ರಿ, ಫಿಸಿಕ್ಸ್, ಗಣಿತ, ವಾಣಿಜ್ಯ, ಇಕನಾಮಿಕ್ಸ್, ಝುವಾಲಜಿ ಎಂಬ ವಿಷಯಗಳಲ್ಲಿ, ಪ್ರೌಢಶಾಲೆ ವಿಭಾಗದಲ್ಲಿ ಗಣಿತ, ಫಿಸಿಕಲ್ ಸಯನ್ಸ್, ಮಲೆಯಾಳ,ಇಂಗ್ಲೀಷ್, ಸಂಗೀತ, ಹಿಂದಿ, ಕಂಪ್ಯೂಟರ್ ಇನ್‍ಸ್ಟ್ರಕ್ಟರ್, ನ್ಯಾಚುರಲ್ ಸಯನ್ಸ್, ಸೋಷ್ಯಲ್ ಸಯನ್ಸ್, ವಿಷಯಗಳಲ್ಲಿ ಶಿಕ್ಷಕರ ಅಗತ್ಯವಿದೆ.
ಮಾದರಿ ವಸತಿ ಶಾಲೆಯಲ್ಲಿ ಎಂ.ಸಿ.ಆರ್.ಟಿ.(ಮೆನೇಜರ್ ಕಂ ರೆಸಿಡೆಂಟ್ ಟ್ಯೂಟರ್ ಹುದ್ದೆ) ಬರಿದಾಗಿದೆ. ಕರಾರು ಪ್ರಕಾರ ನೇಮಕಾತಿ ನಡೆಯಲಿದೆ. ಶಾಲೆಯಲ್ಲೇ ತಂಗಿದ್ದು, ಕಲಿಸುವ ಮನಸ್ಸಿದ್ದವರು ಮಾತ್ರ ಅರ್ಜಿ ಸಲ್ಲಿಸಿದರೆ ಸಾಕು. ಮಾ.15ರ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಮಾಹಿತಿಗೆ ದೂರವಾಣಿ ಸಂಖ್ಯೆ: 04994-255466 ಸಂಪರ್ಕಿಸಬಹುದು.

