ಜೈವಿಕ ಕೃಷಿ ಕಾರ್ಯಾಗಾರ
0
ಫೆಬ್ರವರಿ 13, 2019
ಕಾಸರಗೋಡು: ಕೃಷಿ ಅಭಿವೃದ್ಧಿ ಕೃಷಿ ಕಲ್ಯಾಣ ಇಲಾಖೆ ನೇತೃತ್ವದಲ್ಲಿ "ಜೈವಿಕ ಜೀವನ-ಕಾಸರಗೋಡು ಜೈವಿಕ ಜಿಲ್ಲೆ-ಸಾಧನಾ ಪಥ" ಎಂಬವಿಷಯದಲ್ಲಿ ಜಿಲ್ಲಾ ಮಟ್ಟದ ಜೈವಿಕ ಕೃಷಿ ಕಾರ್ಯಾಗಾರ ಜರುಗಿತು.
ಸಿ.ಪಿ.ಸಿ.ಆರ್.ಐ. ವಜ್ರ ಮಹೋತ್ಸವ ಸಭಾಂಗಣದಲ್ಲಿ ಬುಧವಾರ ನಡೆದ ಸಮಾರಂಭವನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷ ಎ.ಜಿ.ಸಿ.ಬಶೀರ್ ಉದ್ಘಾಟಿಸಿದರು. ಸಿ.ಪಿ.ಸಿ.ಆರ್.ಐ. ಪ್ರಭಾರ ನಿರ್ದೇಶಕಿ ಡಾ.ಅನಿತಾ ಕರುಣ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭ ಅಂಗವಾಗಿ ಸಂವಾದ ಜರುಗಿತು. ಡಾ.ಕೆ.ಎಂ.ಶ್ರೀಕುಮಾರ್, ಡಾ.ಪಿ.ಸುಬ್ರಹ್ಮಣ್ಯನ್, ಟಿಸಮ್ಮ ಥಾಮಸ್, ಲೌಲಿ ಆಗಸ್ಟಿನ್, ಡಾ.ಡಿ.ಸಿ.ಚೌಟ, ಸನ್ನಿ ಪೈಕಡ ಭಾಗವಹಿಸಿದರು. ಪಿ.ಎ.ಒ.ಡೆಪ್ಯೂಟಿ ಡೈರೆಕ್ಟರ್ ಕೆ.ಸಜಿನಿ ಮೋಳ್ ಸಮನ್ವಯಕಾರರಾಗಿದ್ದರು. ಹರಿತ ಕೇರಳಂ ಮಿಷನ್ ಜಿಲ್ಲಾ ಸಂಚಾಲಕ ಎಂ.ಪಿ.ಸುಬ್ರಹ್ಮಣ್ಯನ್ ಸ್ವಾಗತಿಸಿದರು. ಸಿ.ಪಿ.ಸಿ.ಆರ್.ಐ.ಸಹಾಯಕ ವಿಜ್ಞಾನಿ ಡಾ.ಪಿ.ಸುಬ್ರಹ್ಮಣ್ಯನ್ ವಂದಿಸಿದರು.

