ನಾಳೆ ಕಾವಲು ಯೋಜನೆಯ ಉದ್ಘಾಟನೆ
0
ಫೆಬ್ರವರಿ 13, 2019
ಕಾಸರಗೋಡು: ಕಾವಲು ಯೋಜನೆಯ ಸುಲಲಿತ ಜಾರಿಗೆ ಪ್ರಧಾನ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಸ್ಟೋಕ್ ಹೋಲ್ಡರ್ ಗಳ ಕನ್ವರ್ ಜನ್ಸ್ ಪ್ರಥಮ ಸಭೆ ನಾಳೆ(ಫೆ.15) ಮಧ್ಯಾಹ್ನ 12.30ಕ್ಕೆ ಪರವನಡ್ಕ ಚಿಲ್ಡ್ರನ್ಸ್ ಹೋಂ ನಲ್ಲಿ ನಡೆಯಲಿದೆ.
ಕಾರ್ಯಕ್ರಮದಲ್ಲಿ ಕಾವಲು ಯೋಜನೆಯ ಉದ್ಘಾಟನೆಯನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಕಾರ್ಯದರ್ಶಿ, ಉಪನ್ಯಾಯಮೂರ್ತಿ ಫಿಲಿಪ್ ಥಾಮಸ್ ನೆರವೇರಿಸುವರು. ಕಾನೂನು ವಿಚಾರಗಳಿಗೆ ಹೊಂದಿಕೆಯಾಗದೇ ಇರುವ ಮಕ್ಕಳನ್ನು ಮಾನಸಿಕವಾಗಿ, ಸಾಮಾಜಿಕವಾಗಿ ಬೆಂಬಲ ನೀಡಿ ಅವರಲ್ಲಿ ಸ್ವಾಭಾವಿಕ ಬದಲಾವಣೆ ನಡೆಯುವಂತೆ ಮಾಡಿ ಪ್ರಧಾನವಾಹಿನಿಗೆ ಕರೆತರುವ, ಅವರಿಗೆ ಪುನರ್ ವಸತಿ ಒದಗಿಸುವ, ನಿರಂತರ ಕಲಿಕೆಗೆ ಅವಕಾಶ ನೀಡುವ ಉದ್ದೇಶದಿಂದ ಕಾವಲು ಯೋಜನೆ ಜಾರಿಗೊಳ್ಳಲಿದೆ. ಮಹಿಳಾ-ಶಿಸು ಕಲ್ಯಾಣ ಅಭಿವೃದ್ಧಿ ಇಲಾಖೆ ಈ ಯೋಜನೆ ಜಾರಿಗೊಳಿಸುತ್ತಿದೆ.
ಜಿಲ್ಲೆಯಲ್ಲಿ ಹೆಲ್ಪ್ ಲೈನ್ ಎಂಬ ಸ್ವಯಂಸೇವಾ ಸಂಘಟನೆಗೆ ಯೋಜನೆ ನಿರ್ವಹಣೆಯ ಹೊಣೆ ನೀಡಲಾಗಿದೆ. ಸಂಚಾಲಕ ಮತ್ತು ಕೇಸ್ ವರ್ಕರ್ ರ್ನು ನೇಮಿಸಲಾಗಿದೆ. ಜುಯುವೆನಲ್ ಜಸ್ಟಿಸ್ ಮಂಡಳಿಯ ಮೇಲ್ನೋಟದಲ್ಲಿ ಜಾರಿಗಗೊಳಿಸುವ ಯೋಜನೆಯ್ನು ಜಿಲ್ಲಾ ಶಿಶು ಸಂರಕ್ಷಣೆ ಯೂನಿಟ್ ಏಕೀಕರಣಗೊಳಿಸಲಿದೆ. ಇದಕ್ಕೆ ಸ್ಪೆಷ್ಯಲ್ ಜ್ಯುವೆನೆಲ್ ಪೊಲೀಸ್ ಯೂನಿಟ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಪರಿಣತರು, ಶಿಕ್ಷಣ ಇಲಾಖೆ, ಅಬಕಾರಿಇಲಾಖೆ, ಪರಿಶಿಷ್ಟ ಜಾತಿ-ಪಂಗಡ ಇಲಾಖೆಗಳು, ಕಾಸರಗೋಡು ಚೈಲ್ಡ್ ಲೈನ್, ಚೈಲ್ಡ್ ವೆಲ್ ಫೇರ್ ಸಮಿತಿ ಇತ್ಯಾದಿಗಳ ಪ್ರತಿನಿಧಿಗಳು ಭಾಗವಹಿಸುವರು.

