ಫೆ. 27ರಂದು ಕೇರಳ ತುಳು ಅಕಾಡೆಮಿಯ ತುಳುಭವನಕ್ಕೆ ಶಿಲಾನ್ಯಾಸ
0
ಫೆಬ್ರವರಿ 24, 2019
ಮಂಜೇಶ್ವರ: ಕೇರಳ ತುಳು ಅಕಾಡೆಮಿಗಾಗಿ ಮಂಜೇಶ್ವರ ಕಡಂಬಾರ್ ಗ್ರಾಮದ ದುರ್ಗಿಪಳ್ಳದಲ್ಲಿ ನಿರ್ಮಿಸಲಾಗುವ ತುಳುಭವನದ ಶಿಲಾನ್ಯಾಸ ಕಾರ್ಯಕ್ರಮ ಫೆ.27ರಂದು ನಡೆಯಲಿದೆ.
ರಾಜ್ಯ ಸರಕಾರ ಒಂದು ಸಾವಿರ ದಿನ ಪೂರೈಸಿದ ಅಂಗವಾಗಿ ನಡೆಯುವ ಸರಣಿ ಕಾರ್ಯಕ್ರಮಗಳ ಅಂಗಗವಾಗಿ ಈ ಸಮಾರಂಭ ಜರುಗಲಿದೆ. ರಾಜ್ಯ ವಿಧಾನಸಭೆ ನಾಯಕ ಪಿ.ಶ್ರೀರಾಮಕೃಷ್ಣನ್ ಶಿಲಾನ್ಯಾಸ ನಡೆಸುವರು. ಸಂಸದ ಪಿ.ಕರುಣಾಕರನ್ ಅಧ್ಯಕ್ಷತೆ ವಹಿಸುವರು. ಕರ್ನಾಟಕ ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಕರ್ನಾಟಕ ಮಾಜಿ ಮುಖ್ಯ ಮಂತ್ರಿ ಎಂ.ವೀರಪ್ಪ ಮೊಯ್ಲಿ ಅವರು ಕೇರಳ ತುಳು ಅಕಾಡೆಮಿಯ ತ್ರೈಮಾಸ ಪತ್ರಿಕೆ "ತೆಂಬೆರೆ"ಯ ನೂತನ ಆವೃತ್ತಿಯನ್ನು ಬಿಡುಗಡೆಗೊಳಿಸುವರು. ಶಾಸಕರಾದ ಎನ್.ಎ.ನೆಲ್ಲಿಕುನ್ನು, ಕೆ.ಕುಂಞÂರಾಮನ್, ಎಂ.ರಾಜಗೋಪಾಲನ್, ಜಿಲ್ಲಾ ಪಂಚಾಯತಿ ಅಧ್ಯಕ್ಷ ಎ.ಜಿ.ಸಿ.ಬಶೀರ್, ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷ ಎ.ಕೆ. ಎಂ.ಅಶ್ರಫ್, ಮಾಜಿ ಶಾಸಕ ಸಿ.ಎಚ್.ಕುಂಞÂಂಬು ಅತಿಥಿಗಳಾಗಿರುವರು. ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಅಕಾಡೆಮಿಯ ಯೋಜನೆಗಳ ಕುರಿತು ಮಾಹಿತಿ ನೀಡುವರು. ಮೀಂಜ ಗ್ರಾಮಪಂಚಾಯ ಅಧ್ಯಕ್ಷೆ ಶಂಸಾದ್ ಶುಕೂರ್, ಮಂಜೇಶ್ವರ ಗ್ರಾಮಪಂಚಾಯತು ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿ, ಪೈವಳಿಕೆ ಗ್ರಾಮಪಂಚಾಯತು ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ, ವರ್ಕಾಡಿ ಗ್ರಾಮಪಂಚಾಯತು ಅಧ್ಯಕ್ಷ ಅಬ್ದುಲ್ ಮಜೀದ್ ಬಿ.ಎ., ಕರ್ನಾಟಕ ತುಳು ಅಕಾಡೆಮಿ ಅಧ್ಯಕ್ಷ ಎ.ಸಿ.ಭಂಡಾರಿ, ಜಿಲ್ಲಾ ಪಂಚಾಯತು ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ, ಫರೀದಾ ಝಕೀರ್ ಅಹಮ್ಮದ್, ಮಂಜೇಶ್ವರ ಬ್ಲಾಕ್ ಪಂಚಾಯತಿ ಸದಸ್ಯೆ ಸಾಹಿರಾಬಾನು, ಮೀಂಜ ಗ್ರಾಮಪಂಚಾಯತಿ ಸದಸ್ಯೆ ಶೈಲಜಾ ಬಾಲಕೃಷ್ಣನ್, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ಎಂ.ವಿ.ಬಾಲಕೃಷ್ಣನ್ ಮಾಸ್ತರ್, ಹಕೀಂ ಕುನ್ನಿಲ್, ಎಂ.ಸಿ.ಖಮರುದ್ದೀನ್, ಬಿ.ವಿ.ರಾಜನ್, ಕೆ.ಶ್ರೀಕಾಂತ್, ಕುರಿಯಾಕೋಸ್ ಪ್ಲಾಪರಂಬಿಲ್, ಎಂ.ಕುಂಞÂರಾಮನ್ ನಾಯರ್, ಕೈಪ್ರತ್ ಕೃಷ್ಣನ್ ನಂಬ್ಯಾರ್, ಸಿ.ವಿ.ದಾಮೋದರನ್, ಪಿ.ಕೆ.ಮಹಮ್ಮದ್, ಅಬ್ರಾಹಂ ಎಸ್.ತೊಣಕ್ಕರ, ಪಿ.ಕೆ.ರಮೇಶನ್, ಮಂಜೇಶ್ವರ ಗೋವಿಂದ ಪೈ ಸ್ಮಾರಕ ಸಮಿತಿ ಕಾರ್ಯದರ್ಶಿ ಕೆ.ಆರ್.ಜಯಾಂದ, ಕಾಸರಗೋಡು ತುಳು ಕೂಟ ನೇತಾರ ಅಡೂರು ಉಮೇಶ್ ನಾಯಕ್, ಕುಂಬಳೆ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಜಯರಾಮ ಮಂಜತ್ತಾಯ ಎಡನೀರು, ಕೇರಳ ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಸುಬ್ಬಯ್ಯ ರೈ, ಮಂಜೇಶ್ವರ ತಹಶೀಲ್ದಾರ್ ಜೋನ್ ವರ್ಗೀಸ್ ಪಿ., ಕರ್ನಾಟಕ ಯಕ್ಷಗಾನಕಾಡೆಮಿ ಸದಸ್ಯ ದಾಮೋದರ ಶೆಟ್ಟಿ, ಕನ್ನಡ ಸಾಹಿತ್ಯ ಪರಿಷತ್ತು ಕೇರಳ ಗಡಿನಾಡ ಘಟಕ ಅಧ್ಯಕ್ಷ ಎಸ್.ವಿ.ಭಟ್, ಭಾರತ್ ಭವನ್ ಕಾರ್ಯಕಾರಿ ಸದಸ್ಯ ಎಂ.ಶಂಕರ ರೈ ಮಾಸ್ತರ್, ಮಂಜೇಶ್ವರ ಸಿ.ಡಿ.ಎಸ್.ಅಧ್ಯಕ್ಷೆ ಜ್ಯೋತಿಪ್ರಭ ಪಿ., ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೋಜನಾಧಿಕಾರಿ ಚೇತನ ಎಂ. ಉಪಸ್ಥಿತರಿರುವರು.
ಸಮಾರಂಭದಲ್ಲಿ ಹಿರಿಯ ಪತ್ರಕರ್ತ ಮಲಾರ್ ಜಯರಾಮ ರೈ, ತುಳು-ಮಲೆಯಾಳಂ ನಿಘಂಟು ಕರ್ತೃ ಡಾ.ಎ.ಎಂ.ಶ್ರೀಧರನ್, ತುಳು ಬಾಷಾ ಸಂಶೋಧಕಿ ಲಕ್ಷ್ಮಿ ಜಿ.ಪ್ರಸಾದ್ ಅವರಿಗೆ ಅಭಿನಂದನೆ ನಡೆಯಲಿದೆ.
ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಕೇರಳ ತುಳು ಅಕಾಡೆಮಿ ಕಾರ್ಯದರ್ಶಿ ವಿಜಯಕುಮಾರ್ ಪಾವಳ ಮೊದಲಾದವರು ಉಪಸ್ಥಿತರಿರುವರು. ಸಮಾರಂಭ ಅಂಗವಾಗಿ ತುಳು ಸಾಹಿತ್ಯ ಕೃತಿಗ ಪ್ರದರ್ಶನ-ಮಾರಾಟ, ತುಳುನಾಡ ಕರುಶಲ ವಸ್ತುಗಳ ಪ್ರದರ್ಶನ, ಕಲಾ-ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

