ಕೊಂಡೆವೂರು ಯಾಗ ಭೂಮಿಗೆ ಸ್ಥಳೀಯ ಮಸೀದಿ ಪ್ರಮುಖರ ಭೇಟಿ
0
ಫೆಬ್ರವರಿ 24, 2019
ಉಪ್ಪಳ: ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯುತ್ತಿರುವ ಅರುಣ ಕೇತುಕ ಚಯನ ಪೂರ್ವಕವಾದ ಅತಿರಾತ್ರ ಸೋಮಯಾಗ ಸಂದರ್ಭ ಶನಿವಾರ ಸಂಜೆ ಸ್ಥಳೀಯ ಪತ್ವಾಡಿಯ ಬದ್ರಿಯಾ ಜಮಾಅತ್ ಸಮಿತಿಯ ಪದಾಧಿಕಾರಿಗಳು ಭೇಟಿ ನೀಡಿ ಶುಭಹಾರೈಸುವುದರ ಜೊತೆಗೆ ಸರ್ವಧರ್ಮ ಸಹಿಷ್ಣುವಿಕೆಯ ಹೊಸ ಚಿಂತನೆಗೆ ಯಾಗಭೂಮಿ ಸಾಕ್ಷಿಯಾಯಿತು.
ಶ್ರೀಕ್ಷೇತ್ರದೊಂದಿಗೆ ನಿಕಟ ಸಂಪರ್ಕವಿರುವ ಪತ್ವಾಡಿ ಮಸೀದಿಯ ಪದಾಧಿಕಾರಿಗಳು ಕಳೆದೊಂದು ವಾರದಿಂದ ನಡೆಯುತ್ತಿರುವ ಸೋಮಯಾಗದ ವಿಶೇಷತೆಗಳನ್ನು ಕೇಳಿ ಇಲ್ಲಿಗೆ ಆಗಮಿಸಿ ಸಾಮರಸ್ಯದ ಸಂದೇಶವನ್ನು ಶ್ರೀಗಳೊಂದಿಗೆ ಹಂಚಿಕೊಂಡರು. ಶ್ರೀಗಳು ಅವರನ್ನು ಅಭಿನಂದಿಸಿದರು.
ಜಗದ್ಗುರು ಶ್ರೀನಿತ್ಯಾನಂದ ಚಾರಿಟೇಬಲ್ ವಿಶ್ವಸ್ಥ ಮಂಡಳಿಯ ವಿಶ್ವಸ್ಥರಲ್ಲಿ ಓರ್ವರಾದ ಗೋಪಾಲ ಎ.ಬಂದ್ಯೋಡು, ಬದ್ರಿಯಾ ಜಮಾಅತ್ ಸಮಿತಿ ಪದಾಧಿಕಾರಿಗಳಾದ ಉಪಾಧ್ಯಕ್ಷ ಅಲಿ ಮಾಸ್ತರ್, ಕಾರ್ಯದರ್ಶಿ ಮೊೈದು ಹಾಜಿ, ಸದಸ್ಯರುಗಳಾದ ಇಬ್ರಾಹಿಂ, ಅಬ್ದುಲ್ಲ, ಅಲಿ ಮೊದಲಾದವರು ಉಪಸ್ಥಿತರಿದ್ದರು. 

