ದಿನೇಶ್ ಬೀಡಿ ಕೆಲಸಗಾರರ ಸಂಘದ 50 ನೇ ವಾರ್ಷಿಕೋತ್ಸವ
0
ಫೆಬ್ರವರಿ 24, 2019
ಮಂಜೇಶ್ವರ: ಕೇರಳ ದಿನೇಶ್ ಬೀಡಿ ಮಂಜೇಶ್ವರ ಕೆಲಸಗಾರರ ಸಂಘದ 50 ನೇ ವಾರ್ಷಿಕೋತ್ಸವದ ಆಚರಣೆಯ ಸಲುವಾಗಿ ಸಂಘದಲ್ಲಿ ಹಾಗು ಸಂಘದ ಬ್ರಾಂಚ್ಗಳಲ್ಲಿ ದಿನೇಶ್ ಬೀಡಿಯ ಲಾಂಭನವಿರುವ ಪತಾಕೆಯನ್ನು ಆರೋಹಣಗೈಯಲಾಯಿತು.
ಸಂಘದ ಮುಖ್ಯ ಬ್ರಾಂಚ್ನಲ್ಲಿ ನಡೆದ ಪತಾಕೆ ಆರೋಹಣ ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷೆ ಬೇಬಿ ಶೆಟ್ಟಿ ಮತ್ತು ಹಿರಿಯ ಸದಸ್ಯೆ ತಿಲಕ ಅವರು ಧ್ವಜಾರೋಹಣಗೈದರು.
ನಿವೃತ್ತ ಕಾರ್ಯದರ್ಶಿ ಚಂದ್ರಹಾಸ ಕೆ, ನಿವೃತ್ತ ಲೆಕ್ಕಪರಿಶೋಧಕರಾದ ಡಿ.ಅಹಮ್ಮದ್, ನಿವೃತ್ತ ಸಿಬ್ಬಂದಿಗಳಾದ ಬಿ.ಎಂ.ಚಂದ್ರಶೇಖರ, ವಿ.ಬಾವುಟ್ಟಿ, ಎಂ.ಪದ್ಮನಾಭ, ಕೆ.ಸೋಮಪ್ಪ, ಮೋಹನದಾಸ್, ಎಲಿಯಾಸ್ ಮತ್ತು ಸಂಘದ ನಿರ್ದೇಶಕರು ಉಪಸ್ಥಿತರಿದ್ದರು.
ವರ್ಕಾಡಿ ಬ್ರಾಂಚ್ನಲ್ಲಿ ಜರಗಿದ ಸಮಾರಂಭದ ಅಧ್ಯಕ್ಷತೆಯನ್ನು ಎಂ.ಸಂಜೀವ ಶೆಟ್ಟಿ ವಹಿಸಿದ್ದರು. ಹಿರಿಯ ಸದಸ್ಯೆ ಚಿತ್ರಾವತಿ ಧ್ವಜಾರೋಹಣಗೈದರು. ಪಾವೂರು ಬ್ರಾಂಚ್ನಲ್ಲಿ ಕೆ.ಆರ್.ಜಯಾನಂದ ಅಧ್ಯಕ್ಷತೆಯಲ್ಲಿ ಸದಸ್ಯೆ ಸುಮತಿ ಧ್ವಜಾರೋಹಣಗೈದರು.
ಅಬ್ದುಲ್ ಕಾದರ್, ಡಿ.ಬೂಬ, ತುಳಸಿ, ಅಂಬ್ರೋಸ್, ವಿಠಲ ಬಿ, ಗಣೇಶ್ ಪಾವೂರು, ರಾಮದಾಸ್, ಭಾರತಿ, ಪ್ರೇಮ, ಮೂಸಾ ಬ್ಯಾರಿ, ಮೊಹಮ್ಮದ್ ಮತ್ತು ಸಂಘದ ಬೀಡಿ ಕೆಲಸಗಾರರು ಹಾಗು ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ಮಂಜೇಶ್ವರ ಮುಖ್ಯ ಶಾಖೆಯ ಕಾರ್ಯಕ್ರಮದಲ್ಲಿ ಕಾರ್ಯದರ್ಶಿ ಉಷಾ ಕೆ. ಸ್ವಾಗತಿಸಿ, ವಿ.ಪಾರ್ವತಿ ವಂದಿಸಿದರು.

