ಅತಿರಾತ್ರ ಸೋಮಯಾಗದ ಇಂದಿನ ಕಾರ್ಯಕ್ರಮ
0
ಫೆಬ್ರವರಿ 21, 2019
ಉಪ್ಪಳ: ಕೊಂಡೆವೂರು ಶ್ರೀನಿತ್ಯಾನಂದ ಯೋಗಾಶ್ರಮದಲ್ಲಿ ನಡೆಯುತ್ತಿರುವ ಅತಿರಾತ್ರ ಸೋಮಯಾಗದ ಅಂಗವಾಗಿ ನಡೆಯುವ ಇಂದಿನ ಕಾರ್ಯಕ್ರಮ ವಿವರ
ಫೆ. 21 ರಂದು ಗುರುವಾರ ಶ್ರೀ ಗಾಯತ್ರೀ ದೇವಿಯ ಸನ್ನಿಧಾನದಲ್ಲಿ ಬೆಳಿಗ್ಗೆ 5. ರಿಂದ 11.ರ ತನಕ: ಪುಣ್ಯಾಹ, ಗಣಯಾಗ. 7.50ಕ್ಕೆ ಕುಂಭಲಗ್ನದಲ್ಲಿ ಪುನ:ಪ್ರತಿಷ್ಠಾ ಅಷ್ಠಬಂಧ, ತತ್ವಹೋಮ. ಬೆಳಿಗ್ಗೆ10.ಕ್ಕೆ: ಯತಿವರ್ಯರಿಗೆ -ಪೂರ್ಣಕುಂಭಸ್ವಾಗತ. ಬೆಳಿಗ್ಗೆ10.30ಕ್ಕೆ: ಅನುಗ್ರಹ ಸಂದೇಶ: ಪರಮ ಪೂಜ್ಯ ಶ್ರೀ ವಿಖ್ಯಾತಾನಂದ ಸ್ವಾಮೀಜಿ, ಬಲ್ಯೋಟ್ಟು ಕಾರ್ಕಳ, ಪರಮ ಪೂಜ್ಯ ಶ್ರೀ ಶ್ರೀ ಶಶಿಕಾಂತಮಣಿ ಸ್ವಾಮೀಜಿ, ಬಾಳೆಕೋಡಿ. ಮಧ್ಯಾಹ್ನ 12.30ಕ್ಕೆ: ಪ್ರಸನ್ನ ಮಹಾಪೂಜೆ, ಅನ್ನ ಸಂತರ್ಪಣೆ. ಸಾಯಂಕಾಲ ಗಂಟೆ 5.00ರಿಂದ 7.30ರ ವರೆಗೆ : 108 ಕಲಶಾಧಿವಾಸ, ಅಧಿವಾಸ ಹೋಮ, ದುರ್ಗಾನಮಸ್ಕಾರ ಪೂಜೆ ನಡೆಯಲಿದೆ.
ಯಾಗಶಾಲೆಯಲ್ಲಿ ಬೆಳಿಗ್ಗೆ9.00ಕ್ಕೆ : ಪ್ರವಗ್ರ್ಯ, ಉಪಸತ್, ಸುಬ್ರಹ್ಮಣ್ಯಾಹ್ವಾನ, ವೇದಿನಿರ್ಮಾಣ, ಯೂಪಕರ್ಮ, ಚಯನಕರ್ಮ.ಅಪರಾಹ್ಣ :ಅಪರಾಹ್ಣ ಪ್ರವಗ್ರ್ಯ, ಉಪಸತ್, ಸುಬ್ರಹ್ಮಣ್ಯಾಹ್ವಾನ, ಪಯೋವ್ರತ ವಿಧಿವಿಧಾನಗಳು ನಡೆಯಲಿದೆ.
ಶ್ರೀ ಗಾಯತ್ರೀ ಸಭಾ ಮಂಟಪದಲ್ಲಿ ರಾತ್ರಿ 7.30ರಿಂದ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ಪರಮಪೂಜ್ಯ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿ, ಶ್ರೀಧಾಮ ಮಾಣಿಲ., ಪರಮಪೂಜ್ಯ ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ, ಕೊಂಡೆವೂರು ಆಶೀರ್ವಚನನ ನೀಡುವರು. ಬ್ರಹ್ಮಶ್ರೀ ಹರಿನಾರಾಯಣದಾಸ ಆಸ್ರಣ್ಣ, ಆನುವಂಶಿಕ ಪ್ರಧಾನ ಅರ್ಚಕರು, ಶ್ರೀ ಕ್ಷೇತ್ರ ಕಟೀಲು ಉಪಸ್ಥಿತರಿರುವರು. ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಪ್ರತಿಪಕ್ಷ ನಾಯಕರು ಹಾಗೂ ಮಾಜಿ ಸಚಿವರು ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಅಶ್ವಿನಿ ಕುಮಾರ್ ಚೌಭೆ, ರಾಜ್ಯ ಸಚಿವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಭಾರತ ಸರಕಾರ. ರಮೇಶ್ ಚೆನ್ನಿತ್ತಲ, ಪ್ರತಿಪಕ್ಷ ನಾಯಕರು,ಕೇರಳ ಸರಕಾರ. ಕು.| ಶೋಭಾ ಕರಂದ್ಲಾಜೆ, ಲೋಕಸಭಾ ಸದಸ್ಯೆ, ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರ. ವಿ. ಮುರಳೀಧರನ್, ರಾಜ್ಯಸಭಾ ಸದಸ್ಯರು, ಭಾರತ ಸರಕಾರ. ರಾಜೇಶ್ ನಾೈಕ್, ಶಾಸಕರು, ಬಂಟ್ವಾಳ. ಕೆ. ಪಿ. ನಂಜುಂಡಿ, ವಿಧಾನಪರಿಷತ್ ಸದಸ್ಯರು, ಕರ್ನಾಟಕ ಸರಕಾರ. ಯನ್. ರವಿಕುಮಾರ್, ವಿಧಾನಪರಿಷತ್ ಸದಸ್ಯರು, ಕರ್ನಾಟಕ ಸರಕಾರ. ಹರೀಶ್ ಕುಮಾರ್, ಸದಸ್ಯರು, ವಿಧಾನಪರಿಷತ್, ಕರ್ನಾಟಕ ಸರಕಾರ. ಬೊಳ್ಯ ವಿವೇಕ್ ಶೆಟ್ಟಿ, ಉದ್ಯಮಿ, ಮುಂಬಯಿ., ಗೋಪಾಲ್ ಚೆಟ್ಟಿಯಾರ್, ಸಂಘಚಾಲಕರು, ರಾ.ಸ್ವ.ಸಂ, ಮಂಗಳೂರು ವಿಭಾಗ. ಹರೀಶ್ ಸೇರಿಗಾರ್, ಉದ್ಯಮಿ, ದುಬಾಯಿ., ರಮಾನಾಥ ಹೆಗ್ಡೆ, ಆಡಳಿತ ಮೊಕ್ತೇಸರರು, ಶ್ರೀ ಮಂಗಳಾದೇವಿ ದೇವಸ್ಥಾನ, ಮಂಗಳೂರು. ಪುಷ್ಪರಾಜ್ ಜೈನ್, ಅಭಿಷ್ ಬಿಲ್ಡರ್ಸ್, ಮಂಗಳೂರು. ಸಂತೋಷ್ ಕುಮಾರ್ ಶೆಟ್ಟಿ - ದುರ್ಗಾಂಬಾ ಬಿಲ್ಡರ್ಸ್, ಮಂಗಳೂರು., ರೋಹಿದಾಸ್ ಬಂಗೇರ, ಉದ್ಯಮಿ, ಮುಂಬಯಿ., ಪುಂಡರಿಕಾಕ್ಷ ಅಧ್ಯಕ್ಷರು, ಕುಂಬಳೆ ಗ್ರಾಮ ಪಂಚಾಯತ್, ಡಾ. ಮಂಜುನಾಥ್, ಯುನೈಟೆಡ್ ಆಸ್ಪತ್ರೆ, ಕಾಸರಗೋಡು. ಸುರೇಶ್, ಉದ್ಯಮಿ, ಕಾಸರಗೋಡು., ಡಾ. ಸ್ವಪ್ನಾ ಜಯಗೋವಿಂದ, ಉಕ್ಕಿನಡ್ಕ ಆಯುರ್ವೇದ ಆಸ್ಪತ್ರೆ ಉಪಸ್ಥಿತರಿರುವರು. ಸಮಾರಂಭದಲ್ಲಿ ವಿ. ಸುಬ್ರಹ್ಮಣ್ಯ, ಆಡಳಿತ ಪಾಲುದಾರರು, ತೇಜೂ ಮಸಾಲಾ, ಬೆಂಗಳೂರು , ಜಯರಾಮ, ಶಾಸಕರು, ತುರುವೇಕೆರೆ ಅವರನ್ನು ಸನ್ಮಾನಿಸಲಾಗುವುದು.

