ಮೇರಾ ಭಾರತ್ ಪರಿವಾರ ಉದ್ಘಾಟನೆ
0
ಫೆಬ್ರವರಿ 13, 2019
ಪೆರ್ಲ: ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ನೇತೃತ್ವದಲ್ಲಿ ನಡೆಯುತ್ತಿರುವ ಮೇರಾ ಪರಿವಾರ ಬಿಜೆಪಿ ಪರಿವಾರ ಕಾರ್ಯಕ್ರಮ ದ ಉದ್ಘಾಟನೆ ಬಿಜೆಪಿ ಹಿರಿಯ ನೇತಾರ ಟಿಆರ್ಕೆ ಭಟ್ ಪೆರ್ಲ ಇವರ ಮನೆಯಲ್ಲಿ ಧ್ವಜ ಸ್ಥಾಪಿಸುವ ಮೂಲಕ ಮಂಡಲಾಧ್ಯಕ್ಷ ಸತೀಶ್ಚಂದ್ರ ಭಂಡಾರಿ ಕೋಳಾರು ಅವರು ಬುಧವಾರ ಉದ್ಘಾಟಿಸಿದರು.
ಮಂಡಲ ಪ್ರ.ಕಾರ್ಯದರ್ಶಿಗಳಾದ ಆದರ್ಶ್ ಬಿಎಂ, ಮುರಳೀಧರ ಯಾದವ್ ನಾಯ್ಕಾಪು, ಸವಿತಾ ಬಾಳಿಕೆ, ಪದ್ಮಶೇಖರ್, ಪ್ರಸಾದ್ ಪೆರ್ಲ ,ಚಂದ್ರ ಅಡ್ಕ, ಧನರಾಜ್, ಪ್ರಸಾದ್ ಮಣಿಯಂಪಾರೆ ಮೊದಲಾದವರು ಉಪಸ್ಥಿತರಿದ್ದರು.

