ಕಾಸರಗೋಡಿನಲ್ಲಿ `ಗ್ರೇಟ್ ಬಾಂಬೆ ಸರ್ಕಸ್' ಆರಂಭ
0
ಫೆಬ್ರವರಿ 24, 2019
ಕಾಸರಗೋಡು: ವಿಶ್ವವಿಖ್ಯಾತ `ಗ್ರೇಟ್ ಬಾಂಬೆ ಸರ್ಕಸ್' ಶನಿವಾರ ರಾತ್ರಿ ಕಾಸರಗೋಡಿನಲ್ಲಿ ಆರಂಭಗೊಂಡಿತು. ಒಂದು ತಿಂಗಳ ಕಾಲ ಕಾಸರಗೋಡು ಹೊಸ ಬಸ್ ನಿಲ್ದಾಣ ಸಮೀಪದ ನುಳ್ಳಿಪ್ಪಾಡಿಯ ಮೈದಾನದಲ್ಲಿ ಪ್ರದರ್ಶಿಸಲ್ಪಡಲಿದೆ. ಇತಿಯೋಪಿಯ, ಚೀನಾ, ನೇಪಾಳ, ರಷ್ಯಾ ರಾಷ್ಟ್ರಗಳ ಹಾಗೂ ಅಸ್ಸಾಂ, ಗುಜರಾತ್, ಮಣಿಪುರ ಮುಂತಾದ ರಾಜ್ಯಗಳ ಕಲಾವಿದರು ಸರ್ಕಸ್ ಪ್ರದರ್ಶನ ನೀಡಲಿದ್ದಾರೆ.
ಸರ್ಕಸ್‍ನ್ನು ಜಿಲ್ಲಾಧಿಕಾರಿ ಡಾ.ಡಿ.ಸಜಿತ್‍ಬಾಬು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾಸರಗೋಡು ಎ.ಎಸ್.ಪಿ. ಡಿ.ಶಿಲ್ಪಾ , ನಗರಸಭೆಯ ಅಧ್ಯಕ್ಷೆ ಬಿಫಾತಿಮಾ ಇಬ್ರಾಹಿಂ, ವಿಪಕ್ಷ ನಾಯಕ ಪಿ.ರಮೇಶ್, ನಗರಸಭಾ ಸದಸ್ಯ ದಿನೇಶ್, ಅರುಣ್ ಕುಮಾರ್ ಶೆಟ್ಟಿ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.
ಪ್ರತಿದಿನ ಮಧ್ಯಾಹ್ನ 1 ಗಂಟೆಗೆ, ಅಪರಾಹ್ನ 4 ಗಂಟೆಗೆ, ಸಂಜೆ 7 ಗಂಟೆಗೆ ಹೀಗೆ ದಿನಕ್ಕೆ 3 ಶೋ ನಡೆಯಲಿದೆ. ಟಿಕೆಟ್ ಬೆಲೆಯು 100ರೂ., 200 ರೂ., 300 ರೂ. ಆಗಿದೆ.
1920 ರಲ್ಲಿ ಆರಂಭಗೊಂಡ ಈ ಸರ್ಕಸ್ ಶತಮಾನೋತ್ಸವವನ್ನು ಆಚರಿಸುತ್ತಿದೆ. ಅಪಾಯಕಾರಿ ಹಾಗು ಅತ್ಯಾಕರ್ಷಕ ಪ್ರದರ್ಶನಗಳ ಮೂಲಕ ಮನಸೂರೆಗೊಳ್ಳುತ್ತಿರುವ ಕಲಾವಿದರು ನೂತನ ಹಾಗು ವೈವಿಧ್ಯತೆಯನ್ನು ಉಣಬಡಿಸುತ್ತಿದ್ದಾರೆ.

