ಪೆರ್ಲ: ತೆಂಕುತಿಟ್ಟಿನಲ್ಲಿ ಪ್ರಸ್ತುತ ಏಕೈಕ ಯಕ್ಷಗಾನ ತರಬೇತಿ ಕೇಂದ್ರ ಎಂಬ ಹೆಗ್ಗಳಿಕೆಯ ಪಡ್ರೆ ಚಂದು ಸ್ಮಾರಕ ಯಕ್ಷಗಾನ ನಾಟ್ಯ ತರಬೇತಿ ಕೇಂದ್ರದ 14 ನೇ ವರ್ಷದ ವಾರ್ಷಿಕೋತ್ಸವ, ಪಡ್ರೆ ಚಂದು ಜನ್ಮಶತಮಾನೋತ್ಸವದ ಕಾರ್ಯಕ್ರಮ ಉದ್ಘಾಟನೆ, ಪ್ರಶಸ್ತಿ ಪ್ರದಾನ ಹಾಗು ಮಕ್ಕಳ ಯಕ್ಷಗಾನ ಬಯಲಾಟ ಶುಕ್ರವಾರ ಆರಂಭಗೊಂಡಿತು.
ಕಾರ್ಯಕ್ರಮದ ಅಂಗವಾಗಿ ಶುಕ್ರವಾರ ಬೆಳಿಗ್ಗೆ 10 ಕ್ಕೆ ಗಣಪತಿ ಹೋಮ ನಡೆಯಿತು. ಸಂಜೆ 5 ರಿಂದ ಕೇಂದ್ರದ ವಿದ್ಯಾರ್ಥಿಗಳಿಂದ ರಂಗ ಪ್ರವೇಶದ ಭಾಗವಾಗಿ ಶ್ರೀ ಕೃಷ್ಣ ವಿಜಯ' ಯಕ್ಷಗಾನ ಬಯಲಾಟ ನಡೆಯಿತು. ಬಳಿಕ 6 ರಿಂದ ಪಡ್ರೆ ಚಂದು ಜನ್ಮಶತಮಾನೋತ್ಸವ ಕಾರ್ಯಕ್ರಮ ಉದ್ಘಾಟನೆ ನೆರವೇರಿತು.
ಇಂದು(ಫೆ.23) ಬೆಳಿಗ್ಗೆ 9.50 ಕ್ಕೆ ಗಣಪತಿ ಹೋಮ, 10.30 ಕ್ಕೆ ಸತ್ಯನಾರಾಯಣ ಪೂಜೆ, 11 ಕ್ಕೆ ಭಜನೆ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, 2.30 ಕ್ಕೆ ಗಾನ ವೈಭವ, 4 ಕ್ಕೆ ಪೂರ್ವರಂಗ, 5.15 ಕ್ಕೆ ಯಕ್ಷಗಾನ ಬಯಲಾಟ, ರಾತ್ರಿ 7 ರಿಂದ ನಡೆಯುವ ಸಭಾ ಕಾರ್ಯಕ್ರಮವನ್ನು ಶಾಂತರಾಮ ಕುಡ್ವ ಉದ್ಘಾಟಿಸುವರು. ದೇವಕಾನ ಕೃಷ್ಣ ಭಟ್, ಎಂ.ಕೆ.ರಾಮಚಂದ್ರ ಭಟ್, ಶ್ರೀನಿವಾಸ ಭಟ್ ಸೇರಾಜೆ ಅಭಿನಂದನಾ ಭಾಷಣ ಮಾಡುವರು. ಪದ್ಯಾಣ ಗಣಪತಿ ಭಟ್ ಅವರಿಗೆ ಪಡ್ರೆ ಚಂದು ಪ್ರಶಸ್ತಿ, ಉಬರಡ್ಕ ಉಮೇಶ ಶೆಟ್ಟಿ ಅವರಿಗೆ ಅಡ್ಕಸ್ಥಳ ಪ್ರಶಸ್ತಿ, ರಾಧಾ ಮಾಸ್ಟರ್ ಅವರಿಗೆ ವಿಶೇಷ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ರಾಕೇಶ್ ಕುಮಾರ್ ಕಮ್ಮಾಜೆ, ಡಾ.ಎಸ್.ಎನ್.ಭಟ್, ಶಾಂತ ಕುಂಟನಿ, ಅರವಿಂದ ಮಾಸ್ಟರ್ ಮುಖ್ಯ ಅಭ್ಯಾಗತರಾಗಿ ಭಾಗವಹಿಸುವರು. ರಾತ್ರಿ 8.30 ರಿಂದ ಯಕ್ಷಗಾನ ಬಯಲಾಟ ನಡೆಯುವುದು.


