ಹಿಂದೂ ಧರ್ಮದ ಆಂತರ್ಯದ ಶಕ್ತಿ ಛತ್ರಪತಿ ಶಿವಾಜಿ
0
ಫೆಬ್ರವರಿ 12, 2019
ಮುಳ್ಳೇರಿಯ: ಛತ್ರಪತಿ ಶಿವಾಜಿ ಮಹಾರಾಜರ ಸಾಧನೆ ಅನನ್ಯ. ಆ ಸಾಧನೆಯ ಫಲವನ್ನು ನಾವು ಅನುಭವಿಸುತ್ತಿದೇವೆ. ನಾವು ಅನುಸರಿಸುತ್ತಿರುವ ಸಂಸ್ಕಾರವನ್ನು ನಮ್ಮದು ಎದೆತಟ್ಟಿ ಹೇಳಿಕೊಳ್ಳಬಹುದು ಎಂದು ಮರಾಠ ಸಮಾಜದವರು ಎದೆ ತಟ್ಟಿ ಹೇಳಿಕೊಳ್ಳ ಬಹುದು ಎಂದು ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು ಹೇಳಿದರು.
ಅವರು ಆರ್ಯ ಮರಾಠ ಸಮಾಜ ಸಂಘÀ ಮಂಗಳೂರು-ಕಾಸರಗೋಡು ಇದರ ಆಶ್ರಯದಲ್ಲಿ ಯುವ ಮರಾಠ ಸಮಿತಿಯ ನೇತೃತ್ವದಲ್ಲಿ ಕುಂಟಾರು ಎಯುಪಿ ಶಾಲಾ ಮೈದಾನದಲ್ಲಿ ಕುಂಟಾರು, ಆದೂರು ಮತ್ತು ಅಡೂರು ವಲಯಗಳ ಕ್ರೀಡಾಕೂಟ ಮತ್ತು ಸಂಗಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಭಾರತ ಸಂಸ್ಕಾರವು ಸ್ತ್ರೀಗೆ ಪ್ರಾಧಾನ್ಯತೆಯನ್ನು ನೀಡಿದೆ. ಜನ್ಮ ಕೊಟ್ಟ ಅಮ್ಮನೇ ನಮಗೆ ಶ್ರೇಷ್ಠ. ನಮ್ಮಲ್ಲಿ ಭಿನ್ನಾಭಿಪ್ರಾಯವನ್ನು ಸೃಷ್ಟಿಸುತ್ತಿರುವ ಶಕ್ತಿ, ಹಿಂದೂ ಧರ್ಮವನ್ನು ಅವಹೇಳನವನ್ನು ಗೆಯ್ಯುತ್ತಿರುವ ಸಂದರ್ಭದಲ್ಲಿ ಮಗನಿಗೆ ಕೊತ್ತಳದ ಮೇಲೆ ಭಗವತ್ ಧ್ವಜವನ್ನು ಸ್ಥಾಪಿಸಲು ಬೋಧನೆ ಮಾಡಿದವರು ತಾಯಿ ಜೀಜಾಬಾಯಿ. ಭವಿಷ್ಯತ್ತಿನಲ್ಲಿ ನಮ್ಮ ಸಮಾಜದ, ದೇಶದ, ಸಂಸ್ಕಾರದ ರಕ್ಷಣೆಯ ಒಳಿತಿಗಾಗಿ ನಾವು ಸಂಘಟಿತ ಶಕ್ತಿಯಾಗಿ ಬೆಳೆಯಬೇಕು ಎಂದು ಅವರು ಹೇಳಿದರು.
ಯುವ ಮರಾಠ ಸಮಿತಿ ಅಧ್ಯಕ್ಷ ಪ್ರಕಾಶ್ ಮಾಸ್ಟರ್ ಅಧ್ಯಕ್ಷತೆ ವಹಿಸಿದ್ದರು. ಯತೀಶ್ ಕುಮಾರ್ ದಿ.ಮಾಟೆಡ್ಕ ಪುರುಷೋತ್ತಮ ರಾವ್ ಅವರ ಸಂಸ್ಮರಣೆ ಮಾಡಿದರು. ಮುಖ್ಯ ಅತಿಥಿಗಳಾಗಿ ಆರ್ಯ ಮರಾಠ ಸಮಾಜ ಸಂಘ ಮಂಗಳೂರು-ಕಾಸರಗೋಡು ಇದರ ಅಧ್ಯಕ್ಷ ಯತೀಂದ್ರ ಬಹುಮಾನ್, ಕಾರ್ಯದರ್ಶಿ ರಾಜೇಶ್ ಪಾಟೀಲ್, ಕೋಶಾಧಿಕಾರಿ ಕೆ. ಶ್ರೀಧರ ರಾವ್ , ಯುವ ವೇದಿಕೆ ಸಂಚಾಲಕ ಲೋಕೇಶ್ ಬಹುಮಾನ್, ಮಹಿಳಾ ಘಟಕ ಸಂಚಾಲಕಿ ಕೌಶಿಕಲಾ ಮೋಹನ್, ಪ್ರೇಮಲತಾ ವೈ ರಾವ್ ಕಾಸರಗೋಡು ಭಾಗವಹಿಸಿದ್ದರು. ಉಪಾಧ್ಯಕ್ಷ ಶ್ರೀಧರ ರಾವ್ ಆದೂರು, ನಾಗೇಶ್ವರ ರಾವ್ ಕಾಸರಗೋಡು, ಆದೂರು ವಲಯ ಸಂಚಾಲಕ ಜನಾರ್ಧನ ರಾವ್ ಕಡೆಂಗೋಡು, ಅಡೂರು ವಲಯ ಸಂಚಾಲಕ ವಿವೇಕ್ ರಾವ್ ಚೆರ್ಲಕೈ, ಕುಂಟಾರು ವಲಯ ಸಂಚಾಲಕ ಉದಯ ರಾವ್ ಕುಂಟಾರು ಉಪಸ್ಥಿತರಿದ್ದರು. ದೇವರ ಮನೆಯ ಮುಖ್ಯಸ್ಥರಾದ ಯಶೋದ ಮಾಟೆಡ್ಕ, ಯಾದವ ರಾವ್, ರಾಮೋಜಿ ರಾವ್, ಕೃಷ್ಣೋಜಿ ರಾವ್ ಕಯ್ಯಣ್ಣಿ, ಗಂಗಾಧರ ಕಾಂತಡ್ಕ, ದಾಮೋದರ ಸಂಜೆಕಡವು ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ಸಾಧಕರಾದ ನಾಗೋಜಿ ರಾವ್ ಕುಂಟಾರು, ಮಿಥಿಲಾಕ್ಷಿ ಮಾಟೆಡ್ಕ, ಭಾಸ್ಕರ ರಾವ್ ನಡುಬಯಲು, ಗಂಗೋಜಿ ರಾವ್ ಕುಂಟಾರು, ತುಕಾರಾಮ್ ರಾವ್, ಯಾಧವ ರಾವ್, ಸೇಸೋಜಿ ರಾವ್, ಸುಂದರ ರಾವ್, ದಾಕೋಜಿ ರಾವ್, ಕೃಷ್ಣೋಜಿ ರಾವ್ , ಕುಮಾರೋಜಿ ರಾವ್ ಅವರನ್ನು ಸನ್ಮಾನಿಸಲಾಯಿತು. ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ನಡೆಸಲಾಯಿತು.
ಸವಿತಾ ಸ್ವಾಗತಿಸಿದರು. ಯುವ ಮರಾಠ ಸಮಿತಿ ಕಾರ್ಯದರ್ಶಿ ಜೀವನ್ ಮಾಟೆ ಕಾರ್ಯಕ್ರಮ ನಿರೂಪಿಸಿದರು. ನಯನ್ ಕುಮಾರ್ ಎಲಿಕ್ಕಳ ವಂದಿಸಿದರು.

