HEALTH TIPS

ದಿ.ನವೀನ್ ಆಳ್ವ ಮುನ್ನಿಪ್ಪಾಡಿಗೆ ನುಡಿ ನಮನ

ಮಂಜೇಶ್ವರ : ವಿವೇಕ, ವ್ಯಕ್ತಿತ್ವ, ವರ್ಚಸ್ಸುಗಳು ಕೇಂದ್ರಿತವಾಗಿರುವ ತರುಣರು ಇಂದಿನ ಸಮಾಜದ ಮೂಲ ಆಸ್ತಿಯಾಗಿದ್ದಾರೆ. ಈ ಮೂರನ್ನು ಸಂಪಾದಿಸಿದ ವಿವೇಕಾನಂದರು ನಮ್ಮಿಂದ ಅಗಲಿದ್ದರೂ ಅವರ ತತ್ವಾದರ್ಶಗಳು ಎಂದಿಗೂ ಅನುಕರಣೀಯವಾಗಿದೆ. ಅಂತಯೇ ತಾರುಣ್ಯದಲ್ಲಿ ವರೇಣ್ಯನಾಗಿ ಗುರುತಿಸಿಕೊಂಡ ನವೀನ್ ಚಂದ್ರ ಆಳ್ವ ಸದ್ದಿಲ್ಲದೇ ಸರ್ವರಂಗದೆಡೆಗೆ ಕೈ ಚಾಚಿದ ಸಾಧಕ. ಸಮಾಜ ಸೇವೆ, ಸಾಂಸ್ಕøತಿಕ ಪ್ರೀತಿ, ಧಾರ್ಮಿಕ ಒಲವು, ಸಾಹಿತ್ಯದ ಅಭಿರುಚಿ ಇಂತಹ ಯುವ ಮನಸ್ಸಿನೊಳಗೆ ಎಷ್ಟೊಂದು ಗಾಢವಾಗಿ ಅಂತರ್ಗತವಾಗಿತ್ತು ಎಂಬುದು ಆದರ್ಶನೀಯ. ಕಾರ್ಯದಲ್ಲಿ ಅಳಿದರೂ ಕೀರ್ತಿಯನ್ನು ಉಳಿಸಿಕೊಂಡ ಇಂತಹ ಅಪರೂಪದ ವ್ಯಕ್ತಿತ್ವ ಎಂದೂ ಆರಾಧನೀಯವೆಂದು ಮೀಯಪದವು ಶ್ರೀ ಅಯ್ಯಪ್ಪ ಮಂದಿರದ ಗುರುಸ್ವಾಮಿ ರಂಜಿತ್‍ರವರು ನುಡಿದರು. ಅವರು ಮಂಗಳವಾರ ಸಂಜೆ ಹೊಸಂಗಡಿ ಹಿಲ್‍ಸೈಡ್ ಸಭಾಂಗಣದಲ್ಲಿ ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆಯ ವತಿಯಿಂದ ನಡೆದ ಸಂಸ್ಥೆಯ ಕೋಶಾಧಿಕಾರಿ, ಸಮಾಜ ಸೇವಕ ದಿ. ನವೀನ್ ಆಳ್ವ ಬಾನಬೆಟ್ಟು ಮುನ್ನಿಪ್ಪಾಡಿಯವರ ಸಂತಾಪ ಸೂಚಕ ಸಭೆ ಹಾಗೂ ನುಡಿನಮನ ಕಾರ್ಯಕ್ರಮದಲ್ಲಿ ನವೀನ್ ಆಳ್ವರ ಭಾವಚಿಕತ್ರ್ಕಕೆ ಪುಷ್ಪರ್ಚನೆ ಸಲ್ಲಿಸಿ ಬಳಿಕ ಮಾತನಾಡಿದರು. ಸಭೆಯ ಅಧ್ಯಕ್ಷತೆಯನ್ನು ಸಂಸ್ಥೆಯ ಗೌರವ ಸಲಹೆಗಾರರಾದ ನ್ಯಾಯವಾದಿ ನವೀನ್ ರಾಜ್. ಕೆ.ಜೆ. ವಹಿಸಿದರು. ಮದಂಗಲ್ಲು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಶಂಕರ ನಾರಾಯಣ ಭಟ್ ಮುಂದಿಲ,ಬ್ರದರ್ಸ್ ಫ್ರೇಂಡ್ಸ್ ಬಾನಬೆಟ್ಟು ಮುನ್ನಿಪ್ಪಾಡಿ, ಅಧ್ಯಕ್ಷ ಗಿರೀಶ್ ಮುನ್ನಿಪ್ಪಾಡಿ, ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆಯ ಸ್ಥಾಪಕ ಪ್ರದೀಪ್ ಮೊರತ್ತಣೆ ಉಪಸ್ಥಿತರಿದ್ದು ನುಡಿನಮನಗೈದರು. ಈ ವೇಳೆ ಸಂಸ್ಥೆಯ ಪಧಾಧಿಕಾರಿಗಳು, ಸದಸ್ಯರು, ನವೀನ್ ಚಂದ್ರ ಆಳ್ವರ ಭಾವಚಿತ್ರಕ್ಕೆ ಪುಷ್ಪರ್ಚನೆಗೈದರು, ಮೌನ ಪ್ರಾರ್ಥನೆ ಸಲ್ಲಿಸಿ ಸಂತಾಪ ಸೂಚಿಸಿದರು. ಜೈ ಶ್ರೀ ರಾಮ್ ಸಮಾಜ ಸೇವಾ ಸಂಸ್ಥೆಯ ಗೌರವ ಸಲಹೆಗಾರರಾದ ಜಯ ಮಣಿಂಪಾರೆ ಕಾರ್ಯಕ್ರಮ ನಿರೂಪಿಸಿ, ಜಗದೀಶ್ ಪ್ರತಾಪನಗರ ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿ ಸಂಸ್ಥೆಯ ಅಧ್ಯಕ್ಷ ರತನ್ ಕುಮಾರ್ ಹೊಂಸಗಡಿ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries