ದೈವ ಆರಾಧನೆಯಿಂದ ಜೀವನ ಸಾರ್ಥಕ : ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ
0
ಫೆಬ್ರವರಿ 13, 2019
ಮಧೂರು: ದೈವ ಆರಾಧನೆಯಿಂದ ಜೀವನ ಸಾರ್ಥಕವೆಂದು ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಅವರು ಅಭಿಪ್ರಾಯಪಟ್ಟರು.
ಮಾಂಗಾಲಮೂಲೆ ರಕ್ತೇಶ್ವರಿ, ನಾಗ, ಗುಳಿಗ ದೈವಗಳ ಬ್ರಹ್ಮಕಲಶೋತ್ಸವವನ್ನು ದೀಪ ಪ್ರಜ್ವಲಿಸಿ ಅವರು ಆಶೀರ್ವಚನ ನೀಡಿದರು.
ಬ್ರಹ್ಮಕಲಶ ಸಮಿತಿಯ ಅಧ್ಯಕ್ಷ ತಾರಾನಾಥ ಮಧೂರು ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವೇದಮೂರ್ತಿ ಮೇಲಿನ ಮನೆ ವೆಂಕಟಕೃಷ್ಣ ಕಲ್ಲೂರಾಯ, ಬ್ರಹ್ಮಶ್ರೀ ಕೇಶವ ಪುರೋಹಿತ, ಕೆ.ಜಿ.ಶ್ಯಾನುಭೋಗ್, ಮಧೂರು ಪಂಚಾಯತ್ ಅಧ್ಯಕ್ಷೆ ಮಾಲತಿ ಸುರೇಶ್, ರವೀಂದ್ರ ರೈ, ಶಶಿಧರ, ರಾಧಾಕೃಷ್ಣ ಕೆ.ಉಳಿಯತ್ತಡ್ಕ ಶುಭಹಾರೈಸಿದರು. ಬಿ.ಬಾಲಕೃಷ್ಣ ಅಗ್ಗಿತ್ತಾಯ, ಮಧೂರು ಪಂಚಾಯತ್ ಉಪಾಧ್ಯಕ್ಷ ದಿವಾಕರ ಆಚಾರ್ಯ, ಚಂದ್ರಶೇಖರ ಕೆ.ಆರ್, ಜನಾರ್ಧನ, ಕೆ.ಜಿ.ಮೋಹನದಾಸ್, ಶಂಕರ ಕೆ, ವಿಠಲ ಗಟ್ಟಿ, ಉಮೇಶ ಗಟ್ಟಿ, ಪುಷ್ಪ, ಸುರೇಶ್ ವಿ.ಆರ್, ಮಮತ ಕೆ.ಪಿ, ಸುಕುಮಾರ ಕುದ್ರೆಪ್ಪಾಡಿ, ರಾಧಾ ತುಳಸೀಧರ್, ಗೀತಾ ಚಂದ್ರಶೇಖರನ್ ಮೊದಲಾದವರು ಉಪಸ್ಥಿತರಿದ್ದರು. ಸಪ್ತಗಿರಿ ಭಜನಾ ಸಂಘ ಕಾಸರಗೋಡು, ಶ್ರೀ ಗುರು ಕೃಪಾ ಭಜನಾ ಸಂಘ ಇವರಿಂದ ಭಜನಾ ಸಂಕೀರ್ತನಾ ಕಾರ್ಯಕ್ರಮ ನಡೆಯಿತು. ಕ್ಷೇತ್ರ ಮಹಿಳಾ ಸಮಿತಿಯ ನೇತೃತ್ವದಲ್ಲಿ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.

