ನಾಳೆ ಎಂ.ಬಿ.ಎ.ಸ್ಪಾಟ್ ಅಡ್ಮಿಷನ್
0
ಫೆಬ್ರವರಿ 24, 2019
ಕಾಸರಗೋಡು: ಕೇರಳ ಸರಕಾರದ ವ್ಯಾಪ್ತಿಯಲ್ಲಿರುವ ರಾಜ್ಯ ಸಹಕಾರಿ ಯೂನಿಯನ್ ನ ತಿರುವನಂತಪುರಂ ನಲ್ಲಿರುವ ಕೇರಳ ಇನ್ಸ್ಸ್ಟಿಟ್ಯೂಟ್ ಆಫ್ ಕೋ ಆಪರೇಟಿವ್ ಮ್ಯಾನೇಜ್ ಮೆಂಟ್ (ಕಿಕ್ ಮ) ಸಂಸ್ಥೆಯಲ್ಲಿ ಎಂ.ಬಿ.ಎ(ಪೂರ್ಣಾವಧಿ) 2019-20 ಬ್ಯಾಚ್ ನ ಸ್ಪಾಟ್ ಅಡ್ಮಿಷನ್ ಸಂಬಂಧ ನಾಳೆ(ಫೆ.26) ಕಾಞÂಂಗಾಡ್ ಕೋಟೆಚ್ಚೇರಿ ಕೋ ಆಪರೇಟಿವ್ ಬ್ಯಾಂಕ್ ಕಟ್ಟಡದ ಕೋ ಆಪರೇಟಿವ್ ಟ್ರೈನಿಂಗ್ ಕಾಲೇಜಿನಲ್ಲಿ ಬೆಳಿಗ್ಗೆ 10ರಿಂದ ಸಂದರ್ಶನ ನಡೆಸಲಿದೆ.
ಕೇರಳ ವಿವಿ, ಎ.ಐ.ಸಿ.ಟಿ.ಇ.ಯ ಅಂಗೀಕಾರದೊಂದಿಗೆ ಈ ಎರಡು ವರ್ಷ ಅವಧಿಯ ತರಬೇತಿಯಲ್ಲಿ ಫಿನಾನ್ಸ್, ಮಾರ್ಕೆಟಿಂಗ್, ಹ್ಯೂಮನ್ ಸ್ಪೆಷ್ಯಲೈಸೇಷನ್, ಸಿಸ್ಟಂ ಇತ್ಯಾದಿಗಳಲ್ಲಿ ಡ್ಯುವೆಲ್ ಸ್ಪೆಷ್ಯಲೈಸೇಶನ್ ಅವಕಾಶಗಳಿವೆ. ಸಹಕಾರಿ ವಲಯದಲ್ಲಿ ಚಟುವಟಿಕೆ ನಡೆಸುತ್ತಿರುವವರ ಆಶ್ರಿತರಿಗೆ ಪ್ರತ್ಯೇಕ ವಿದದ್ಯಾರ್ಥಿ ವೇತನ, ಪರಿಶಿಷ್ಟ ಜಾತಿ-ಪಂಗಡ ವಿದ್ಯಾರ್ಥಿಗಳಿಗೆ ಸರಕಾರಿ, ವಿವಿಗಳ ನಿಬಂಧನೆ ಪ್ರಕಾರದ ಶುಲ್ಕ ರಿಯಾಯಿತಿ ಲಭಿಸಲಿವೆ. ಕೊನೆಯ ವರ್ಷ ವಿದ್ಯಾರ್ಥಿಗಳಿಗೆ, ಈ ವರೆಗೆ ಅರ್ಜಿ ಫಾರಂ ಸಲ್ಲಿಸದೇ ಇರುವವರಿಗೆ ಸ್ಪಾಟ್ ಅಡ್ಮಿಷನ್ ನಲ್ಲಿ ಭಾಗವಹಿಸಬಹುದಾಗಿದೆ. ಮಾಹಿತಿಗೆ ದೂರವಾಣಿ ಸಂಖ್ಯೆ: 8547618290, 9995302006 ಸಂಪರ್ಕಿಸಬಹುದಾಗಿದೆ.

