ನಲ್ಕ: ಉಚಿತ ನೇತ್ರ ತಪಾಸಣೆ
0
ಮಾರ್ಚ್ 20, 2019
ಪೆರ್ಲ: ಭಗವಾನ್ ಶ್ರೀ ಸತ್ಯಸಾಯಿ ಅಭಯನಿಕೇತನ್ ಕಾಸರಗೋಡು, ಭಗವಾನ್ ಶ್ರೀ ಸತ್ಯಸಾಯಿ ಭಜನಾ ಮಂಡಳಿ ಪೆರ್ಲ, ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮಂಗಳೂರು ಮತ್ತು ಡಾ.ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಚಾರಿಟೇಬಲ್ ಟ್ರಸ್ಟ್ ಸೆಂಚೂರಿ ಗ್ರೂಪ್ಸ್ ಬೆಂಗಳೂರು ಇದರ ಜಂಟಿ ಆಶ್ರಯದಲ್ಲಿ ಉಚಿತ ನೇತ್ರ ತಪಾಸಣೆ ಮತ್ತು ಚಿಕಿತ್ಸಾ ಸೌಲಭ್ಯ ಶಿಬಿರವು ನಲ್ಕ ವಾಗ್ದೇವಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇತ್ತೀಚೆಗೆ ನಡೆಯಿತು.
ಶಿಬಿರವನ್ನು ಶ್ರೀ ಸತ್ಯಸಾಯಿ ಸಾಮೂಹಿಕ ಪ್ರಾರ್ಥನೆಯೊಂದಿಗೆ ಆರಂಭಿಸಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯೆ ಪುಷ್ಪಾ ಅಮೆಕ್ಕಳ ಅವರು ಉದ್ಘಾಟಿಸಿದರು.
ಶಿಬಿರದಲ್ಲಿ 154 ಮಂದಿ ಭಾಗಿಗಳಾಗಿದ್ದರು. ಇದರಲ್ಲಿ 67 ಮಂದಿಗೆ ಉಚಿತ ಕನ್ನಡಕ ಮತ್ತು 42 ಮಂದಿಗೆ ಬಹಳ ಕಡಿಮೆ ವೆಚ್ಚದಲ್ಲಿ ಕಣ್ಣಿನ ಲೇಸರ್ ಶಸ್ತ್ರ ಕ್ರಿಯೆಯನ್ನು ನೀಡುವುದರ ನಿಟ್ಟಿನಲ್ಲಿ ಸಲಹೆ ನೀಡಲಾಯಿತು. ಇಲ್ಲಿಂದ ಶಸ್ತ್ರ ಚಿಕಿತ್ಸೆಯ ಸಲಹೆ ನೀಡಿದವರನ್ನು ವಾಹನ ಮೂಲಕ ಪ್ರಸಾದ್ ನೇತ್ರ ಚಿಕಿತ್ಸಾಲಯಕ್ಕೆ ಕೊಂಡೊಯ್ದು ಚಿಕಿತ್ಸೆ ನೀಡಲಾಯಿತು. ನಲ್ಕದಲ್ಲಿ ಮಾ.31 ರಂದು ಅಪರಾಹ್ನ 3 ಗಂಟೆಗೆ ಉಚಿತ ಕನ್ನಡಕವನ್ನು ವಿತರಿಸಲಾಗುವುದು.

