ಗೋಸಾಡದಲ್ಲಿ ಒತ್ತೆಕೋಲ ಕೆಂಡಸೇವೆಯ ಪೂರ್ವಭಾವೀ ಸಭೆ
0
ಮಾರ್ಚ್ 20, 2019
ಬದಿಯಡ್ಕ: ಗೋಸಾಡ ಶ್ರೀ ಮಹಿಷಮರ್ದಿನಿ ಕ್ಷೇತ್ರದ ವಠಾರದಲ್ಲಿ ಏಪ್ರಿಲ್ 4 ಮತ್ತು 5ರಂದು ನಡೆಯಲಿರುವ ಶ್ರೀವಿಷ್ಣುಮೂರ್ತಿ ದೈವದ ಒತ್ತೆಕೋಲ ಕೆಂಡಸೇವೆ ಪೂರ್ವಭಾವಿ ಸಭೆಯು ಶ್ರೀ ಕ್ಷೇತ್ರದಲ್ಲಿ ಭಾನುವಾರ ನಡೆಯಿತು.
ಒತ್ತೆಕೋಲ ಸಮಿತಿಯ ಅಧ್ಯಕ್ಷರಾದ ಮಾಧವ ಭಟ್ ಮಠದಮೂಲೆ ಅಧ್ಯಕ್ಷತೆ ವಹಿಸಿದ್ದರು. ಕ್ಷೇತ್ರದ ಅನುವಂಶಿಕ ಮೊಕ್ತೇಸರ ಕೃಷ್ಣ ಅಮ್ಮಣ್ಣಾಯ ಪಾವೂರು, ಸೇವಾ ಸಮಿತಿ ಪ್ರಧಾನ ಕಾರ್ಯದರ್ಶಿ ಸುಧಾಮ ಗೋಸಾಡ, ಸೇವಾ ಸಮಿತಿಯ ಕೋಶಾಧಿಕಾರಿ ಪರಮೇಶ್ವರ ಭಟ್ ಗೋಸಾಡ, ಮಾತೃ ಮಂಡಳಿಯ ಪದಾಧಿಕಾರಿಗಳು, ಭಜನಾ ಸಂಘದ ಪದಾಧಿಕಾರಿಗಳು ಹಾಗೂ ಊರ ಹತ್ತು ಸಮಸ್ತರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ವಿವಿಧ ಸಮಿತಿಗಳನ್ನು ರೂಪಿಸಲಾಯಿತು. ಕೆಂಡಸೇವೆ ಸಮಿತಿಯ ಪ್ರಧಾನ ಕಾರ್ಯದರ್ಶಿ ರವೀಂದ್ರ ರೈ ಗೋಸಾಡ ಸ್ವಾಗತಿಸಿ, ಒತ್ತೆಕೋಲ ಸಮಿತಿಯ ಕೋಶಾಧಿಕಾರಿ ರಾಜೇಂದ್ರ ಮಣಿಯಾಣಿ ಮಠದ ಮೂಲೆ ವಂದಿಸಿದರು.

