ಕಣಿಪುರದಲ್ಲಿ ಪುಷ್ಕರಿಣಿ ಪುನರ್ ನಿರ್ಮಾಣ ಸಭೆ
0
ಮಾರ್ಚ್ 18, 2019
ಕುಂಬಳೆ: ಕಣಿಪುರ ಶ್ರೀಗೋಪಾಲಕೃಷ್ಣ ದೇವಸ್ಥಾನದ ಪುಷ್ಕರಿಣಿ ಪುನರ್ನಿಮಾಣಕ್ಕೆ ರಾಜ್ಯ ನೀರಾವರಿ ಇಲಾಖೆಯಿಂದ ಮಂಜೂರಾದ 32 ಲಕ್ಷ ರೂ ಗಳ ವಿನಿಯೋಗದ ಬಗ್ಗೆ ಶ್ರೀಕ್ಷೇತ್ರದಲ್ಲಿ ಭಾನುವಾರ ವಿಸ್ಕøತ ಸಭೆ ನಡೆಯಿತು.
ಸಭೆಯಲ್ಲಿ ಶ್ರೀಕ್ಷೇತ್ರದ ಪಾವಿತ್ರ್ಯತೆಯನ್ನು ಕಾಪಾಡಿಕೊಂಡು ನವೀಕರಣ ಕಾರ್ಯಗಳು ನಡೆಯಬೇಕಾದುದರಿಂದ ತಂತ್ರಿಯವರ ಮಾರ್ಗದರ್ಶನದಲ್ಲಿ ಪುಷ್ಕರಣಿಗೆ ಮಾತ್ರ ಸಂಬಂಧಪಟ್ಟ ಒಂದು ದಿನದ ಜ್ಯೋತಿಷ್ಯ ಚಿಂತನೆಯಲ್ಲಿ ಕಂಡುಬಂದಂತೆ ವಾಸ್ತು ಶಾಸ್ತ್ರಕ್ಕೆ ಅನುಗುಣವಾಗಿ ನವೀಕರಣ ಕಾರ್ಯ ನಡೆಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಶ್ರೀಕ್ಷೇತ್ರದ ಕಾರ್ಯನಿರ್ವಹಣಾಧಿಕಾರಿ ರಾಮಾನಾಥ ಶೆಟ್ಟಿ, ಕುಂಬಳೆ ಗ್ರಾಮ ಪಂಚಾಯತಿ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್., ಗ್ರಾಮ ಪಂಚಾಯತಿ ಸದಸ್ಯ ಸುಧಾಕರ ಕಾಮತ್, ಅಭಿಯಂತರ ಶಿವಶಂಕರ್ ಮತ್ತಿತರರು ಉಪಸ್ಥಿತರಿದ್ದರು.

