ಪುದುಕೋಳಿ ತರವಾಡಿನಲ್ಲಿ ತ್ರಿಕಾಲ ಪೂಜೆ-ವಿವಿಧ ವೈದಿಕ ಕಾರ್ಯಕ್ರಮಗಳು
0
ಮಾರ್ಚ್ 19, 2019
ಬದಿಯಡ್ಕ: ನೀರ್ಚಾಲು ಸಮೀಪದ ಪುದುಕೋಳಿ ತರವಾಡು ಮನೆಯಲ್ಲಿ ಸೋಮವಾರದಿಂದ ನಡೆಯುತ್ತಿರುವ ವಿವಿಧ ಕ್ಲೇಶ ನಿವಾರಕ ವೈದಿಕ ಕಾರ್ಯಕ್ರಮದ ಭಾಗವಾಗಿ ತ್ರಿಕಾಲ ಪೂಜಾ ವಿಧಿವಿಧಾನವು ರಾಜಾ ಭಟ್ ಕಿಳಿಂಗಾರು ಅವರ ನೇತೃತ್ವದಲ್ಲಿ ವೇದಮೂರ್ತಿ ಪಯಗೋಪಾಲಕೃಷ್ಣ ಭಟ್ ಮತ್ತು ಪಯ ಶ್ಯಾಮಕುಮಾರ್ ಅವರ ಆಚಾರ್ಯತ್ವದಲ್ಲಿ, ಪುದುಕೋಳಿ ಶ್ರೀಕೃಷ್ಣ ಭಟ್ ಅವರ ಉಪಸ್ಥಿತಿಯಲ್ಲಿ ನೆರವೇರಿತು.
ಕಾರ್ಯಕ್ರಮದ ಅಂಗವಾಗಿ ಸೋಮವಾರ ಬೆಳಿಗ್ಗೆ ದೀಪಾರಾಧನೆ, ಗಣಪತಿ ಹವನದೊಂದಿಗೆ ತ್ರಿಕಾಲ ಪೂಜೆಗೆ ಚಾಲನೆ ನೀಡಲಾಯಿತು. ಬಳಿಕ ಸರ್ವಬಾಧಾ ಸಂಪುಟೀಕೃತ ಸಪ್ತಶತಿ ಪಾರಾಯಣ ಈ ಸಂದರ್ಭ ಶಾಂತ ದುರ್ಗಾಮಂತ್ರ, ವನದುರ್ಗಾ ಮಂತ್ರ, ಮೂಲಮಂತ್ರ, ಸಂಸ್ಕøಷ್ಟಂಧನಂ, ಜಾತವೇದಸೇ, ಸರ್ವಮಂಗಳ, ಸರ್ವಬಾಧಾ ಪಾರಾಯಣ, ಆಶ್ಲೇಷಾ ಬಲಿ, ರಾತ್ರಿ ತ್ರಿಕಾಲ ಪೂಜಾ ಮಹಾಮಂಗಳಾರತಿಗಳು ನೆರವೇರಿದವು.
ಮಂಗಳವಾರ ಬೆಳಿಗ್ಗೆ ಮಹಾಮೃತ್ಯುಂಜಯ ಹೋಮ, ಮಹಾ ಸುದರ್ಶನ ಹೋಮ, ಲಘು ಸುದರ್ಶನ ಹೋಮ, ಸಂಜೆ ಅಘೋರ ಹೋಮ, ತೃಷ್ಟಂಫ್ ಹೋಮ, ನಾರಸಿಂಹ ಹೋಮ, ಪ್ರೇತಾರ್ಪಣೆ ಭಾದಾಕರ್ಷಣೆ, ಉಚ್ಚಾಟನೆಗಳು ನಡೆಯಲಿವೆ.
ಬುಧವಾರ ತಿಲಹೋಮ, 93 ಆವರ್ತಿ ವಿಷ್ಣು ಸಹಸ್ರನಾಮ ಜಪ, ದ್ವಾದಶ ಮೂರ್ತಿ ಆರಾಧನೆ, ಕೂಷ್ಮಾಂಡೀಯ ಹೋಮ, ಸುಮಂಗಲೀದಾನ, ದಂಪತಿ ದಾನಾದಿ ಕಾರ್ಯಕ್ರಮಗಳು ನಡೆಯಲಿವೆ.

