ಆರಿಕ್ಕಾಡಿ : ಅಷ್ಟಬಂಧ ಬ್ರಹ್ಮಕಲಶೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ
0
ಮಾರ್ಚ್ 25, 2019
ಕುಂಬಳೆ: ಇತಿಹಾಸ ಪ್ರಸಿದ್ಧ ಆರಿಕ್ಕಾಡಿ ಶ್ರೀ ಮಲ್ಲಿಕಾರ್ಜುನ ಮತ್ತು ಕೋಟೆ ಶ್ರೀ ವೀರಾಂಜನೇಯ ದೇವಸ್ಥಾನದ ದೇವರ ಅಷ್ಟಬಂಧ ಬ್ರಹ್ಮಕಲಶೋತ್ಸವ ಎ.19 ರಿಂದ 25 ರ ವರೆಗೆ ವಿವಿಧ ಕಾರ್ಯಕ್ರಮಳೊಂದಿಗೆ ನಡೆಯಲಿದ್ದು, ಆಮಂತ್ರಣ ಪತ್ರಿಕೆಯನ್ನು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಕೆ.ಸುಧಾಕರ ಕುಲಶೇಖರ ಅವರು ಭಾನುವಾರ ಬಿಡುಗಡೆಗೊಳಿಸಿದರು.
ಕಾರ್ಯಕ್ರಮದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಕಾರ್ಯಾಧ್ಯಕ್ಷ ಕೆ.ರಮಾಕಾಂತ ಕುಂಬಳೆ ಅಧ್ಯಕ್ಷತೆ ವಹಿಸಿದರು. ಸಂಘಟನಾ ಕಾರ್ಯದರ್ಶಿ ಶಿವರಾಮ ಕಾಸರಗೋಡು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸೇವಾ ಸಮಿತಿ ಗೌರವಾಧ್ಯಕ್ಷ ಕೆ.ಬಾಲಕೃಷ್ಣ ಕುಂಬಳೆ, ಕೋಶಾಧಿಕಾರಿ ಕೆ.ದಿನಕರ ರಾವ್ ಪೈವಳಿಕೆ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎ.ಲಿಂಗಪ್ಪಯ್ಯ ಜಾಲುಮನೆ, ಸೇವಾ ಸಮಿತಿಯ ನಿಕಟಪೂರ್ವ ಅಧ್ಯಕ್ಷ ಕುಂಬಳೆ ಉಮೇಶ್ ರಾವ್ ಅತ್ತಾವರ ಶುಭಹಾರೈಸಿದರು. ಪ್ರಧಾನ ಅರ್ಚಕ ಶ್ರೀನಾಥ ಮಂಜುನಾಥ ಭಟ್, ಅರ್ಚಕ ವೆಂಕಟ್ರಮಣ ವಿಶ್ವೇಶ್ವರ ಭಟ್ ಪ್ರಾರ್ಥನೆಗೈದರು.
ರಾಮರಾಜ ಕ್ಷತ್ರಿಯ ಯಾನೆ ಕೋಟೆಯಾರ್ ಸೇವಾ ಸಂಘ ಉಪಸಂಘ ಕುಂಬಳೆ ಇದರ ಅಧ್ಯಕ್ಷ ಕೆ.ರಮೇಶ ಕುದ್ರೆಕ್ಕೋಡು, ಸೇವಾ ಸಮಿತಿ ಜೊತೆ ಕಾರ್ಯದರ್ಶಿ ಪಿ.ಸುನಿಲ್ ಕುಮಾರ್ ಪುಜೂರು, ಜಯಪ್ರಕಾಶ್ ಕೆ.ವಿ, ಎ.ರಾಧಾಕೃಷ್ಣ ಜಾಲುಮನೆ, ಗುರುಪ್ರಸಾದ್, ಕೃಷ್ಣಮೂರ್ತಿ ಕೋಟೆಮನೆ, ರಾಮಮೂರ್ತಿ ಸಿ.ಎಚ್, ಪ್ರಶಾಂತ್ ಕುಮಾರ್ ಕುಂಬಳೆ, ರಾಮಕೃಷ್ಣ ಕುಂಬಳೆ, ಸತೀಶ ಕಾರ್ಲೆ, ಕೃಷ್ಣಮೂರ್ತಿ ಪುಜೂರು, ಕೆ.ಜಗದೀಶ್ ಕೂಡ್ಲು, ಕಿಶೋರ್ ಕುಮಾರ್ ಕೋಟೆಮನೆ, ಉಮೇಶ ಆರಿಕ್ಕಾಡಿ, ಜಗದೀಶ ಕಾರ್ಲೆ ಮುಂತಾದವರು ಉಪಸ್ಥಿತರಿದ್ದರು.
ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಎ.ಲಿಂಗಪ್ಪಯ್ಯ ಜಾಲುಮನೆ ಸ್ವಾಗತಿಸಿ, ಸೇವಾ ಸಮಿತಿ ಉಪಾಧ್ಯಕ್ಷ ಪಿ.ಸುನಿಲ್ ಕುಮಾರ್ ಪುಜೂರು ವಂದಿಸಿದರು.

