HEALTH TIPS

ಕರಾವಳಿಯಲ್ಲಿ ಬಿರುಸಿನ ಗಾಳಿ ಸಾಧ್ಯತೆ: ಕಡಲ್ಕೊರೆತ ಭೀತಿ:-ಮೀನುಗಾರಿಕೆಗೆ ತೆರಳಕೂಡದು: ತೆರಳಿದವರು ತಕ್ಷಣ ಮರಳಲು ಆದೇಶ

   
      ಕಾಸರಗೋಡು: ರಾಜ್ಯದ ಕರಾವಳಿಯಲ್ಲಿ ಕೆಲ ದಿನ ರಾತ್ರಿ ಕಾಲದಲ್ಲಿ ಬಿರುಸಿನ ಗಾಳಿ ಬೀಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ಎಚ್ಚರಿಕೆ ವಹಿಸುವಂತೆ ಹವಾಮಾನ ನಿಗಾ ಕೇಂದ್ರ ಸಲಹೆ ಮಾಡಿದೆ. ಮೀನುಗಾರಿಕೆಗೆ ಸಮುದ್ರಕ್ಕಿಳಿಯಬಾರದೆಂದೂ, ಈಗಾಗಲೇ ಸಮುದ್ರಕ್ಕೆ ತೆಳಿದ ಮಂದಿ ತಕ್ಷಣ ಮರಳುವಂತೆ ಮೀನುಗಾರಿಕೆ ಇಲಾಖೆ ಹೆಚ್ಚುವರಿ ಮಹಾ ನಿರ್ದೇಶಕರು ಮುನ್ಸೂಚನೆ ನೀಡಿದ್ದಾರೆ.
      ಮೀನುಗಾರಿಕೆ ವಲಯಗಳ ಆರಾಧನಾಲಯಗಳಲ್ಲಿ, ಇನ್ನಿತರ ಸಾರ್ವಜನಿಕ ಸಂಸ್ಥೆಗಳಲ್ಲಿ ಈ ಸಂಬಂಧ ಎಚ್ಚರಿಕೆ ಘೋಷಣೆ ಮಾಡುವಂತೆ ತಿಳಿಸಲಾಗಿದೆ. ಇತರರು ಯಾವುದೇ ಕಾರಣಕ್ಕೂ ಮೀನುಗಾರಿಕೆ ತೆರಳದಂತೆ ಖಚಿತಪಡಿಸಿಕೊಳ್ಳುವಂತೆ ಸಂಬಂಧಪಟ್ಟವರಿಗೆ ಅವರು ಆದೇಶ ನೀಡಿದರು. 1.5 ಮೀಟರ್ ನಿಂದ 2.2. ಮೀಟರ್ ವರೆಗಿನ ಎತ್ತರದಲ್ಲಿ ತೆರೆ ಅಪ್ಪಳಿಸುವ ಭೀತಿ ಸಹಿತ ಕಡಲ್ಕೊರೆತ ತಲೆದೋರುವ ಭೀತಿಯಿದೆ ಎಂದು ಸಂಸ್ಥೆ ತಿಳಿಸಿದೆ.
       ಭಾರತೀಯ ಮಹಾಸಮುದ್ರದಲ್ಲಿ ಭೂಮಧ್ಯೆ ರೇಖೆ ಪ್ರದೇಶದಲ್ಲಿ ಪೂರ್ವ, ಪಶ್ಚಿಮ ಬಂಗಾಳ ಒಳಸಮುದ್ರ, ಶ್ರೀಲಂಕಾದ ತೆಂಕಣ ಮತ್ತು ಪೂರ್ವದಲ್ಲಿ 25 ರಷ್ಟು ಶೂನ್ಯ ಒತ್ತಡ ರಚನೆಗೊಳ್ಳಲಿದೆ ಎಂದು ಕೇಂದ್ರ ಹವಾಮಾನ ಸಂಸ್ಥೆ ತಿಳಿಸಿದೆ. ಈ ಅವಧಿಯಲ್ಲಿ ಗಾಳಿಯ ಬೀಸುವಿಕೆ ತೀವ್ರವಾಗಿದ್ದು, ಗಂಟೆಗೆ 30ರಿಂದ 40 ಕಿಮೀ ವರೆಗಿರುವುದು. ಇಂದು (ಏ.26ರಂದು)ಗಾಳಿಯ ವೇಗ ಗಂಟೆಗೆ 40ರಿಂದ 50 ಕಿಮೀ ವರೆಗೆ ಹೆಚ್ಚಳಗೊಳ್ಳುವ ಸಾಧ್ಯತೆಯಿದೆ. ನಾಳೆ(ಏ.27)ಗಾಳಿಯ ತೀವ್ರತೆ ಗಂಟೆಗೆ 60ರಿಂದ 70 ಕಿಮೀ ಆಗಿ ತಲೆದೋರುವ ಸಾಧ್ಯತೆಯಿದೆ. ಏ.28ರಂದು ರಾಜ್ಯ ಕರಾವಳಿಯಲ್ಲಿಗಂಟೆಗೆ 80ರಿಂದ 90 ಕಿಮೀ, ತಮಿಳುನಾಡು ಕರಾವಳಿಯಲ್ಲಿ ಗಂಟೆಗೆ 40ರಿಂದ 50 ಕಿಮೀ ವರೆಗೆ ವೇಗವಾಗುವ ಸಾಧ್ಯತೆಯಿದೆ ಎಂದು ತಿಳಿಸಲಾಗಿದೆ.
      ಮೀನುಗಾರರು ನಾಳೆ(ಏ.27ರಿಂದ) ಯಿಂದ ಭಾರತೀಯ ಮಹಾಸಮುದ್ರದ ಭೂಮಧ್ಯೆ ರೇಖೆ ಪ್ರದೇಶ, ಅದರ ಬಳಿ ಪೂರ್ವ-ಪಶ್ಚಿಮ ಬಂಗಾಳ ಒಳಕಡಲು, ತಮಿಳುನಾಡು ಕರಾವಳಿ ಪ್ರದೇಶಗಳಲ್ಲಿ ಮೀನುಗಾರಿಕೆಗೆ ತೆರಳಬಾರದು ಎಂದು ಮುನ್ಸೂಚನೆ ನೀಡಲಾಗಿದೆ. ಕಡಲ್ಕೊರೆತ ತೀವ್ರಗೊಳ್ಳುವ ಭೀತಿಯಿರುವುದರಿಂದ, ಆಳಸಮುದ್ರಕ್ಕೆ ಈಗಾಗಲೇ ತೆರಳಿದವರು ಏ.27ರಂದುಮಧ್ಯರಾತ್ರಿ 12 ಗಂಟೆಗೆ ಸಮೀಪದ ಯಾವುದಾದರೂ ದಡ ಸೇರುವಂತೆ ಸಲಹೆ ಮಾಡಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

Below Post Ad

https://drive.google.com/file/d/1xvTBLBh0henjhvlJCaNItofEXO_RJIZu/view?usp=sharing

HOTEL

HOTEL
CENTURY
Qries