ಕಣ್ಣೂರು: ಕಣ್ಣೂರಿನಲ್ಲಿ ಐದು ಯುವಕರ ಪ್ರಾಣವನ್ನು ಬಲಿ ಪಡೆದ ರಸ್ತೆ ಅಪಘಾತದಿಂದ ಎಲ್ಲೆಡೆ ಆಘಾತಕ್ಕೊಳಗಾದ ಜನರು ಯುವಕರ ಸಾವಿನಿಂದ ಕಳವಳಗೊಂಡಿದ್ದಾರೆ.
ಮುಂಬದಿಯಿಂದ ಬರುತ್ತಿದ್ದ ಕಾರು ದೀಪಗಳನ್ನು ಮಂದಗೊಳಿಸದಿರುವುದೇ (ಡಿಮ್ ಗೊಳಿಸುವಿಕೆ) ಕಾರಣವಾಗಿದ್ದು, ಅದು ಮಾಡಿದ್ದರೆ, ಐದು ಯುವಕರ ಜೀವ ರಸ್ತೆಯಲ್ಲಿ ಕಳೆದುಹೋಗುತ್ತಿರಲಿಲ್ಲ ಎಂದು ಪೋಲೀಸರು ಹೇಳುತ್ತಾರೆ.
ನಿನ್ನೆ ರಾತ್ರಿ ಅಪಘಾತ ಸಂಭವಿಸಿದೆ. ಎದುರಿನಿಂದ ಬರುತ್ತಿದ್ದ ಕಾರು ದೀಪಗಳನ್ನು ಡಿಮ್ ಮಾಡಿರಲಿಲ್ಲ, ಮತ್ತು ಯುವಕರ ಕಾರನ್ನು ಚಲಾಯಿಸುತ್ತಿ ಚಾಲಕ ಗಲಿಬಿಲಿಗೊಳಗಾಗಿ ಕಣ್ಣು ಕಾಣಿಸದೆ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದಿದ್ದಾರೆ ಎಂದು ಪೋಲೀಸರು ತಿಳಿಸಿದ್ದಾರೆ.
ಅಪಘಾತಕ್ಕೆ ಕಾರಣವಾದ ಕಾರಿನ ಹುಡುಕಾಟ ಮುಂದುವರೆದಿದೆ. ಅಪಘಾತದಲ್ಲಿ ಮೃತರಾದ ಯುವಕರು ಬೆಂಗಳೂರಿನಲ್ಲಿ ಒಟ್ಟಿಗೆ ಓದುತ್ತಿದ್ದ ಸಹಪಾಠಿಗಳಾಗಿದ್ದರು.
ಕಣ್ಣೂರಿನ ಅಲವಿಲ್‍ನಲ್ಲಿರುವ ತಮ್ಮ ಸ್ನೇಹಿತ ಶಾನ್ ಸಿರಾಜ್ ಅವರ ಸಂಬಂಧಿಯ ಮದುವೆಯಲ್ಲಿ ಭಾಗವಹಿಸಲು ಅವರು ಬೆಂಗಳೂರಿನಿಂದ ಕಾರಿನಲ್ಲಿ ಕಣ್ಣೂರಿಗೆ ಹೊರಟಿದ್ದರು.
ನೀಲೇಶ್ವರ ಮಡಿಕೈಕಂಡಂ ಕುಟ್ಟಿಚ್ಚಾಲ್ ನಿವಾಸಿ ರಿಜ್ವಾನ್ (21), ಕಣ್ಣೂರು ಅಲವಿಲ್ ಕಾಲೋನಿಯ ಗೇಟ್ ಮನ್ನತ್ತಿಲ್ ನಿವಾಸಿ ಮೊಯ್ದೀನ್ ಎಂಬವರ ಪುತ್ರ ಶಾನ್ ಸಿರಾಜ್ (21), ನವದೆಹಲಿಯ ಪರಂ ಹೈಸ್ರಿ (21) ಮತ್ತು ಹೈದರಾಬಾದ್‍ನ ಹರ್ಷ್‍ಕಸ್ತೂರಿ (21) ಎಂಬವರು ಸಾವಿಗೀಡಾದವರು. ಇದೇ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ತೃಶೂರ್ ನಿವಾಸಿ ಆದಿತ್ಯ ಕೃಷ್ಣದೀಪ್ ಗಂಭೀರ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

