ಮಧೂರು: ಮಧೂರು ಶ್ರೀ ಕಾಳಿಕಾಂಬಾ ಮಠ ವಿಶ್ವಕರ್ಮ ಬ್ರಾಹ್ಮಣ ಸಂಘದ ವಾರ್ಷಿಕ ಮಹಾಸಭೆಯು ಜು.28 ರಂದು ಬೆಳಿಗ್ಗೆ 10.30ಕ್ಕೆ ಸಂಘದ ಅಧ್ಯಕ್ಷ ಎನ್.ಪರಮೇಶ್ವರ ಆಚಾರ್ಯ ನೀರ್ಚಾಲು ಅವರ ಅಧ್ಯಕ್ಷತೆಯಲ್ಲಿ ಶ್ರೀ ಮಠದ ಪರಿಸರದಲ್ಲಿ ಜರಗಲಿದೆ.
ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀ ಪೀಠಾಧೀಶ ಜಗದ್ಗುರು ಅನಂತಶ್ರೀ ವಿಭೂತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳವರು ಮುಂದಿನ ವರ್ಷ ತಮ್ಮ ಚಾತುರ್ಮಾಸ್ಯ ವ್ರತಾಚರಣೆಯನ್ನು ಮಧೂರು ಶ್ರೀ ಮಠದಲ್ಲಿ ಕೈಗೊಳ್ಳಲಿರುವ ಪ್ರಯುಕ್ತ ಮಹಾಸಭೆಯಲ್ಲಿ `ಚಾತುರ್ಮಾಸ್ಯ ವ್ರತ ನಿರ್ವಹಣ ಸಮಿತಿ'ಯನ್ನು ರೂಪೀಕರಿಸಲಾಗುವುದು.
ಜೊತೆಗೆ ನೂತನ ಆಡಳಿತ ಸಮಿತಿಯ ರೂಪೀಕರಣವೂ ನಡೆಯಲಿದೆ. ಗುರುವರ್ಯರ ಚಾತುರ್ಮಾಸ್ಯದ ಪೂರ್ವಭಾವಿ ಕಾರ್ಯಗಳು ಮತ್ತು ಶ್ರೀ ಮಠ ಅಭಿವೃದ್ಧಿಯ ಬಗ್ಗೆ ವಿವಿಧ ನಿರ್ಣಯಗಳನ್ನು ಸ್ವೀಕರಿಸಬೇಕಾಗಿದೆ. ಸಂಘದ ಎಲ್ಲಾ ಸದಸ್ಯರು ಮಹಾಸಭೆಯಲ್ಲಿ ಕ್ಲಪ್ತ ಸಮಯಕ್ಕೆ ಹಾಜರಿದ್ದು ಸಲಹೆ ಸೂಚನೆಯನ್ನು ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಶ್ರೀ ಮಠದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

