ಕಾಸರಗೋಡು: ಈ ಬಾರಿಯ ಓಣಂ ಬಂಪರ್ ಲಾಟರಿಯ ಜಿಲ್ಲಾ ಮಟ್ಟದ ಉದ್ಘಾಟನೆ ಸೋಮವಾರ ಜರುಗಿತು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಮಾರಂಭದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಉದ್ಘಾಟನೆ ನಡೆಸಿದರು. ಹೆಚ್ಚುವರಿ ದಂಡನಾಧಿಕಾರಿ ಎನ್.ದೇವಿದಾಸ್ ಮೊದಲ ಮಾರಾಟ ನಡೆಸಿದರು. ಎ.ಮಧುಸೂದನನ್ ಮೊದಲ ಟಿಕೆಟ್ ಪಡೆದುಕೊಂಡರು.
ಜಿಲ್ಲಾ ಲಾಟರಿ ಅಧಿಕಾರಿ ಎಂ.ಕೃಷ್ಣರಾಜ್, ಸಹಾಯಕ ಅಧಿಕಾರಿ ಎಂ.ವಿ.ರಾಜೇಶ್ ಕುಮಾರ್, ಲಾಟರಿ ಕಾರ್ಮಿಕರ ಕಲ್ಯಾಣನಿಧಿ ಅಧಿಕಾರಿ ಕೆ.ಹರೀಶ್, ಎ.ವಿ.ಬಾಲಕೃಷ್ಣನ್, ಅಲೆನ್ ಇ.ರಾಡ್ರಿಗಸ್, ಎಂ.ಕೆ.ಕುಂ ಞÂ್ಞಂಣ್ಣಿ, ಟಿ.ವಿ.ಸತೀಶನ್, ವಿವಿಧ ಸಂಘಟನೆಗಳ ಪ್ರತಿನಿಧಿಗಳಾದ ಕೆ.ಪ್ರಭಾಕರನ್, ಎಂ.ಗಣೇಶನ್, ದಿಲೀಪ್ ಕುಮಾರ್, ಎನ್.ಕೆ.ಬಿಜುಮೋನ್, ಕೆ.ಬಾಲನ್ ಮೊದಲಾದವರು ಉಪಸ್ಥಿತರಿದ್ದರು.
ಈ ಬಾರಿ ಎರಡು ಲಕ್ಷ ಟಿಕೆಟ್ ಮಾರಾಟ ನಡೆಸುವ ಮೂಲಕ ಜಿಲ್ಲೆಯಲ್ಲಿ 50 ಕೊಟಿ ರೂ. ಸಂಗ್ರಹ ನಡೆಸುವ ಉದ್ದೇಶವನ್ನು ಲಾಟರಿ ಇಲಾಖೆ ಇರಿಸಿಕೊಂಡಿದೆ. 12 ಕೋಟಿ ರೂ. ಮೊದಲ ಬಹುಮಾನವಾಗಿದ್ದು, ಟಿಕೆಟ್ ನ ಬೆಲೆ 300 ರೂ. ಆಗಿದೆ. ಎರಡನೇ ಬಹುಮಾನ 50 ಲಕ್ಷರೂ. ತಲಾ 10 ಮಂದಿಗೆ ಲಭಿಸಲಿದೆ.


