ಕಾಸರಗೋಡು: ಬಿರುಸಿನ ಮಳೆಯ ಹಿನ್ನೆಲೆಯಲ್ಲಿ ವಿವಿಧ ರೀತಿಯ ಅಂಟುರೋಗಗಳು ಹರಡುವ ಸಾಧ್ಯತೆಯಿಂದ ಜನ ಜಾಗರೂಕತೆ ಪಾಲಿಸುವಂತೆ ಜಿಲ್ಲಾ ವೈದ್ಯಾಧಿಕಾರಿ ತಿಳಿಸಿರುವರು.
ಜಲೋದರ, ಕಾಲರಾ, ಆನೆಕಾಲು,ಹಳದಿಜ್ವರ ಇತ್ಯಾದಿ ಹರಡದಂತೆ ಜಾಗ್ರತೆ ವಹಿಸಬೇಕು. ಕುದಿಸಿದ ನೀರನ್ನೇ ಸೇವಿಸಬೇಕು. ಬಾವಿ,ಕೊಳವೆ ಬಾವಿನೀರನ್ನು ಶುದ್ಧಗೊಳಿಸಿ ಬಳಸಬೇಕು. ಬ್ಲೀಚಿಂಗ್ ಪೌಡರ್ ಬಳಸಿ ಕ್ಲೊರಿನೆಟ್ ನಡೆಸಬೇಕು. ಹಣ್ಣು,ತರಕಾರಿಗಳನ್ನು ಚೆನ್ನಾಗಿತೊಳೆದ ನಂತರವೇ ಸೇವಿಸಬೇಕು. ಮಳೆನೀರಿನಿಮದ ಒದ್ದೆಯಾದ ಆಹಾರವನ್ನು ಸೇವಿಸಬಾರದು.ಆಹಾರ ಸಿದ್ಧತೆಗೆ ಮುನ್ನ ಚೆನ್ನಾಗಿಕೈಕಾಲುಗಳನ್ನು ತೊಳೆಯಬೇಕು. ಮಲಮೂತ್ರ ವಿಸರ್ಜನೆಯ ನಂತರವೂ ಶುಚೀಕರಣ ನಡೆಸಬೇಕು. ಸೇವಿಸುವ ಆಹಾರದ ಗುಣಮಟ್ಟ ತಿಳಿದುಕೊಳ್ಳಬೇಕು. ಇಲಿಜ್ವರ ಇತ್ಯಾದಿ ರೋಗಗಳನಿಯಂತ್ರಣನಿಟ್ಟಿನಲ್ಲಿ ಮಲಿನನೀರಿನಲ್ಲಿ ಸಂಚಾರ ನಡೆಸಕೂಡದು. ಇಂಥಾ ಪರಿಸ್ಥಿತಿ ಇದ್ದಲ್ಲಿ ಪ್ರತಿರೋಧ ಗುಳಿಗೆಗಳನ್ನು ಕಡ್ಡಾಯವಾಗಿ ಸೇವಿಸುವಂತೆ ಜಿಲ್ಲಾ ವೈದ್ಯಾಧಿಕಾರಿ ಸಲಹೆಮಾಡಿದ್ದಾರೆ.


