ಕಾಸರಗೋಡು: ಕೇಂದ್ರ-ರಾಜ್ಯ ಸರಕಾರಗಳು ಜಂಟಿ ವತಿಯಿಂದ ಜಾರಿಗೊಳಿಸುವ ಆಯುಷ್ಮಾನ್ ಭಾರತ್-ಕಾರುಣ್ಯ ಆರೋಗ್ಯ ಸುರಕ್ಷಾ ಯೋಜನೆಯ ಕಾರ್ಡ್ ವಿತರಣೆ ಜಿಲ್ಲಾ ಮಟ್ಟದ ಕೇಂದ್ರಗಳಲ್ಲಿ ಇಂದಿನಿಂದ (ಜು.27) ಜು.31 ವರೆಗೆ ನಡೆಯಲಿದೆ.
ಈ ವರೆಗೆ ಪಂಚಾಯತ್ ಮಟ್ಟದ ಕಾರ್ಡ್ ವಿತರಣೆ ಕೇಂದ್ರಗಳಿಂ ಕಾರ್ಡ್ ಪಡೆಯದೇ ಇರುವ ಕುಟುಂಬಗಳಿಗೆ ಇದು ಕೊನೆಯ ಅವಕಾಶವಾಗಿದೆ. ಈ ಸೌಲಭ್ಯವನ್ನು ಗರಿಷ್ಠ ಮಟ್ಟದಲ್ಲಿ ಸದುಪಯೋಗ ಪಡಿಸುವಂತೆ ಚಿಯಾಕ್ ಜಿಲ್ಲಾ ಯೋಜನೆ ಪ್ರಬಂಧಕ ತಿಳಿಸಿದರು.
ಈ ಯೋಜನೆಯಲ್ಲಿ ಸದಸ್ಯತನ ಪಡೆಯುವ ಪಡೆಯುವಕುಟುಂಬಗಳಿಗೆ 5 ಲಕ್ಷ ರೂ.ನ ಉಚಿತ ಚಿಕಿತ್ಸೆ ವಿವಿಧ ಸರಕಾರಿ-ಖಾಸಗಿ ಆಸ್ಪತ್ರೆಗಳಲ್ಲಿ ಲಭಿಸಲಿದೆ. ಪಡಿತರ ಚೀಟಿ,ಆಧಾರ್ ಕಾರ್ಡ್, 2019 ಮಾ.31 ವರೆಗೆ ಕಾಲಾವಧಿ ಹೊಂದಿದ್ದ ಆರೋಗ್ಯ ವಿಮೆ ಕಾರ್ಡ್ ಯಾ ಪ್ರಧಾನಮಂತ್ರಿ ಅವರ ಪತ್ರ ಗಳ ಜೊತೆಗೆ ಈ ಕೇಂದ್ರಗಳಲ್ಲಿ ನೇರವಾಗಿ ಹಾಜರಾಗಬೇಕು. ಜಿಲ್ಲೆಯ ಯಾವ ಪಂಚಾಯತ್ ನಲ್ಲಿರುವವರೂ ಈ ಕೇಂದ್ರಗಳ ಅವಕಾಶವನ್ನು ಬಳಸಿಕೊಳ್ಳಬಹುದು.
ಕಾಸರಗೋಡು ನಗರಸಭೆ ವನಿತಾಭವನ ಕುಟುಂಬಶ್ರೀಸಭಾಂಗಣ, ಕಾ?ಂಗಾಡ್ ಪುದಿಯಕೋಟೆ ಎ.ಸಿ. ಕಣ್ಣನ್ ನಾಯರ್ ಗ್ರಂಥಾಲಯ ಸಭಾಂಗಣ, ಚೆರುವತ್ತೂರು ಪಂಚಾಯತ್,ಕುಟುಂಬಶ್ರೀ ಸಭಾಂಗಣ, ಕಾ ಞÂ ಂಗಾಡ್ ಜಿಲ್ಲಾ ಆಸ್ಪತ್ರೆ ಗಳಲ್ಲಿ ಜಿಲ್ಲಾ ಮಟ್ಟದ ಕಾರ್ಡ್ ವಿತರಣೆ ನಡೆಯಲಿದೆ. ಮಾಹಿತಿಗೆ ದೂರವಾಣಿ ಸಂಖ್ಯೆ: 9995606033.

