ಕಾಸರಗೋಡು: ಬಿರುಸಿನ ಮಳೆ ಮತ್ತು ನೆರೆ ಹಾವಳಿಯಿಂದ ತತ್ತರಿಸಿದ ಸಂತ್ರಸ್ತರಿಗೆ ಸಹಾಯೊದಗಿಸುವ ನಿಟ್ಟಿನಲ್ಲಿ ಹರಿತ ಕೇರಳಂ ಮಿಷನ್ ಮತ್ತು ನೈಪುಣ್ಯ ಕ್ರಿಯಾ ಸೇನೆ ಕ್ರಿಯಾತ್ಮಕವಾಗಿ ರಂಗಕ್ಕಿಳಿದಿವೆ.
ಕಾಸರಗೋಡು ಜಿಲ್ಲೆ ಸಹಿತ ಕೆರಳದ 7 ಜಿಲ್ಲೆಗಳಲ್ಲಿ ಮನೆಗಳ ಶುಚೀಕರಣ ಸಹಿತ ದುರಸ್ತಿ ಕಾರ್ಯಗಳಿಗೆ ಹರತ ಕೇರಳಂ ಮಿಷನ್ ಮತ್ತು ಉದ್ಯಮ ಇಲಾಖೆ ವ್ಯಾಪ್ತಿಯ ನೈಪುಣ್ಯ ಕ್ರಿಯಾ ಸೇನೆಗಳು ತೊಡಗಿಕೊಂಡಿವೆ.
ವಿವಿಧ ಐ.ಟಿ.ಐ.ಗಳ ಶಿಕ್ಷಕರನ್ನೂ, ವಿದ್ಯಾರ್ಥಿಗಳನ್ನು ಬಳಸಿಕೊಂಡು, ಅವರಿಗೆ ಸೂಕ್ತ ತರಬೇತಿ ನೀಡಿ ನೈಪುಣ್ಯ ಕ್ರಿಯಾ ಸೇನೆ ಎಂಬ ಶಾಶ್ವತ ವ್ಯವಸ್ಥೆಯನ್ನು ರಚಿಸಲಾಗಿದೆ. ವಯರ್ ಮ್ಯಾನ್, ಪ್ಲಂಬಿಂಗ್, ಇಲೆಕ್ಟ್ರೀಶಿಯನ್, ವೆಲ್ಡಿಂಗ್, ಕಾರ್ಪೆಂಟರಿ ಟ್ರೇಡ್ ಟ್ರೈನಿಗಳು, ಇನ್‍ಸ್ಟ್ರಕ್ಟರ್ ಸಂತ್ರಸ್ತ ಪ್ರದೇಶಗಳ ಬಾ„ತ ಮನೆಗಳಿಗೆ ತೆರಳಿ ಅಲ್ಲಿ ಅಗತ್ಯವಿರುವ ದುರಸ್ತಿ ಸಹಿತ ಕಾಯಕ ನಡೆಸುತ್ತಾರೆ.
2018 ರಲ್ಲಿ ತಲೆದೋರಿದ್ದ ಭೀಕರ ನೆರೆ ಹಾವಳಿಯ ನಂತರ ನಡೆದ ಸಂರಕ್ಷಣೆ ಸಹಿತ ಜನೋಪಯೋಗಿ ಚಟುವಟಿಕೆಗಳಲ್ಲಿ ರಾಜ್ಯ ವಿವಿಧೆಡೆ ಈ ಸಂಘಟನೆಗಳು ನಡೆಸಿದ್ದ ಕೊಡುಗೆ ಸಣ್ಣದಾಗಿರಲಿಲ್ಲ. ಈ ಬಾರಿ ಕಾಸರಗೋಡು, ಕಣ್ಣೂರು, ಮಲಪ್ಪುರಂ ಜಿಲ್ಲೆಗಳಲ್ಲಿ ಈ ಎರಡೂ ತಂಡಗಳು ಈಗಾಗಲೇ ಚಟುವಟಿಕೆ ಆರಂಭಿಸಿವೆ. ಹರಿತ ಕೇರಳಂ ಮಿಷನ್‍ನ ಆಯಾ ಜಿಲ್ಲೆಗಳ ಸಂಚಾಲಕರು, ಐ.ಟಿ.ಐ.ಗಳಿಂದ ಈ ಕಾಯಕಕ್ಕಾಗಿ ಹೊಣೆ ನೀಡಲಾದ ನೋಡೆಲ್ ಅಧಿಕಾರಿ ಇದಕ್ಕೆ ನೇತೃತ್ವ ಒದಗಿಲಿದ್ದಾರೆ. ವಿದ್ಯುದೀಕರಣ, ಸ್ವಿಚ್, ಡಿಸ್ಟ್ರಿ ಬ್ಯೂಷನ್ ಬೋರ್ಡ್ ಇತ್ಯಾದಿ ಬದಲಿಸಿ ಲಗತ್ತಿಸುವುದು, ಪಂಪ್‍ಸೆಟ್ ಚಟುವಟಿಕೆಗಳನ್ನು ಸಿದ್ಧಪಡಿಸುವುದು, ಕಾರ್ಪೆಂಟರಿ ಕಾಯಕಗಳು ಇತ್ಯಾದಿಗಳು ಇವುಗಳ ಸೇವಾ ರೂಪದಲ್ಲಿ ನಡೆಯುತ್ತಿವೆ. ಪುನರ್ವಸತಿ ಶಿಬಿರಗಳಲ್ಲಿ ಆಸರೆ ಪಡೆದಿರುವ ಮಂದಿ ತಮ್ಮ ನಿವಾಸಗಳಿಗೆ ತೆರಳುವ ಮುನ್ನವೇ ಈ ತಂಡಗಳು ಅಲ್ಲಿಗೆ ತಲುಪಿ ದುರಸ್ಥಿ ಕಾಯಕ ನಡೆಸುತ್ತಿವೆ.
ಹರಿತ ಕೇರಳಂ ಮಿಷನ್ ರಾಜ್ಯ ಕಚೇರಿಯ ಕಾರ್ಯಕಾರಿ ಅಧ್ಯಕ್ಷೆ ಡಾ.ಟಿ.ಎನ್.ಸೀಮಾ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆ ಕೈಗೊಂಡ ತೀರ್ಮಾನದ ಹಿನ್ನೆಲೆಯಲ್ಲಿ ಈ ಚಟುವಟಿಕೆಗಳು ನಡೆÉಯುತ್ತಿವೆ. ಉದ್ಯಮ ತರಬೇತಿ ಸಹಾಯಕ ನಿರ್ದೇಶಕ ಪಿ.ಕೆ.ಮಾಧವನ್ ಸಹಿತ ಹಿರಿಯ ಅ„ಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.


