ಕಾಸರಗೋಡು: ಬೆಳೆ ಕೊಯ್ಲು ಉಪಕರಣಗಳ ವಿತರಣೆ ಮತ್ತು ಇವುಗಳ ಕುರಿತು ಮಾಹಿತಿ ನೀಡುವ ಕಾರ್ಯಕ್ರಮ ಕಾಸರಗೋಡು ಸಿ.ಪಿ.ಸಿ.ಆರ್.ಐಯಲ್ಲಿ ನಡೆಯಿತು.
ಪರಿಶಿಷ್ಟ ಜನಾಂಗದ 40 ಮಂದಿ ಈ ಎರಡು ದಿನಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ಉಪಕರಣಗಳ ವಿತರಣೆ, ಮಾಹಿತಿ ನೀಡಲಾಗಿದೆ.
ಪವರ್ ಟಿಲ್ಲರ್, ಮಿನಿ ಟಿಲ್ಲರ್, ಸ್ಪ್ರೇ ಯರ್, ಕ್ಲೈಂಬಿಂಗ್ ಸಹಿತ ಉಪಕರಣಗಳ ವಿತರಣೆ ನಡೆಸಲಾಗಿದೆ. ಪರಿಶಿಷ್ಟ ಜಾತಿ ಅಭಿವೃದ್ಧಿ ಜಿಲ್ಲಾ ಅಧಿಕಾರಿ ಎಸ್.ಮೀನಾರಾಣಿ ಉಪಕರಣಗಳ ವಿತರಣೆ ನಡೆಸಿದರು. ಐ.ಸಿ.ಎ.ಆರ್-ಸಿ.ಪಿ.ಸಿ.ಆರ್.ಐ. ನಿರ್ದೇಶಕ ಡಾ.ಅನಿತಾ ಕರಣ್ ಅಧ್ಯಕ್ಷತೆ ವಹಿಸಿದ್ದರು. ಪರಿಶಿಷ್ಟ ಜಾತಿ ಸಬ್ ಪ್ಲಾನ್ ನೋಡೆಲ್ ಅಧಿಕಾರಿ ಡಾ.ಕೆ.ಮರಳೀಧರನ್, ಪ್ರಧಾನ ವಿಜ್ಞಾನಿ ಡಾ.ತಂಬಾನ್, ತರಬೇತಿ ನಿರ್ದೇಶಕಿ ಡಾ.ಸುಜಾತಾ,ಡಾ.ಆರ್. ಪಬ್ಡಿ ಸೆಲ್ವಂ ತರಗತಿ ನಡೆಸಿದರು. ಎ.ಒ.ವರ್ಗೀಸ್, ಮಧು,ಪಕ್ಕೀರನ್, ಮಾಧವನ್ ವಿವಿಧ ಗೋಷ್ಠಿಗಳಿಗೆ ನೇತೃತ್ವ ವಹಿಸಿದ್ದರು.

