ಕಾಸರಗೋಡು: ಹಿರಿಯ ಕವಿ ಪ್ರಕಾಶನ್ ಮಡಿಕೈ ಅವರ "ಉಪ್ಪುಂ-ಮುಳಗುಂ-ಕಪರ್ಪೂರವುಂ(ಉಪ್ಪು-ಮೆಣಸು-ಕರ್ಪೂರ)" ಎಂಬ ಕಾವ್ಯ ಸಂಕಲನ ಆ.25ರಂದು ಬಿಡುಗಡೆಗೊಳ್ಳಲಿದೆ.
ಕಣ್ಣೂರು ಜನಕಲಾ ಪಾಠಶಾಲೆ ವತಿಯಿಂದ ಏರಿಪುರಂ ಕೆ.ಎಸ್.ಟಿ.ಎ.ಸಭಾಂಗಣದಲ್ಲಿ ಕಾರ್ಯಕ್ರಮ ನಡೆಯಲಿದೆ.
ಪ್ರಕಾಶನ್ ಅವರ ಕೃತಿಗಳು ಈಗಾಗಲೇ ಕನ್ನಡ ಮತ್ತು ಇಂಗ್ಲೀಷ್ ನಲ್ಲಿ ಭಾಷಾಂತರ ಗೊಂಡಿರುವ ಪ್ರಸಿದ್ಧವಾಗಿವೆ. ಕೇರಳ ಸಾಹಿತ್ಯ ಅಕಾಡೆಮಿಯ "ಕನಕಶ್ರೀ" ಪ್ರಶಸ್ತಿ ಪಡೆದ ಕಾವ್ಯಸಂಕಲನ "ಮೂನು ಕಲ್ಲುಕಳ್ಕಡಿಯಿಲ್(ಮೂರು ಕಲ್ಲುಗಳ ತಳ ಭಾಗದಲ್ಲಿ)" ನ ನಂತರ ಪ್ರಕಾಶನ್ ಮಡಿಕೈ ಹೊರತರುತ್ತಿರುವ ಕವನ ಸಂಕಲನ ಇದಾಗಿದೆ. ಇವರ "ಕೊರುವಾನತ್ತಿಲೆ ಪೂತಂ?ಳ್(ಕಾಡನ್ನು ಸಂರಕ್ಷಿಸುವ ದೈವಗಳು)" ಎಂಬ ಕಾದಂಬರಿ ರಾಜ್ಯದ ಸಾಮಾಜಿಕ ವಿದ್ಯಮಾನಗಳಿಗೆ ಹಿಡಿದ ಕನ್ನಡಿಯಾಗಿದ್ದು, ಬಹುಖ್ಯಾತಿ ಗಳಿಸಿತ್ತು.
25ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ಸಮಾರಂಭದಲ್ಲಿ ಹಿರಿಯ ಕವಿ ವೀರಾನ್ ಕುಟ್ಟಿ ಕೃತಿ ಬಿಡುಗಡೆಗೊಳಿಸುವರು. ಹಿರಿಯ ಪತ್ರಕರ್ತ ಪಿ.ಸುಧಾಕರನ್ ಮೊದಲಕೃತಿ ಪಡೆದುಕೊಳ್ಳುವರು. ವಿವಿಧ ವಲಯಗಳ ಗಣ್ಯರಾದ ಎ.ಸಿ.ಶ್ರೀಹರಿ, ದಿವಾಕರನ್ ವಿಷ್ಣುಮಂಗಲಂ, ನಾಲಪ್ಪಾಡಂ ಪದ್ಮನಾಭನ್, ಎ.ವಿ.ಪವಿತ್ರನ್, ಡಾ.ಪಿ.ಕೆ.ಭಾಗ್ಯಲಕ್ಷ್ಮಿ, ಕೆ.ಕೆ.ಆರ್.ವೆಂಗರ, ಬಿಂದು ಕಾ?ಂಗಾಡ್, ಪಿ.ಮುರಳೀಧರನ್ ಮಾಸ್ಟರ್, ರಾಜೇಶ್ ಕರಿಪ್ಪಾಲ್, ಸಿ.ಅಂಬುರಾಜ್ ಮೊದಲದವರು ಉಪಸ್ಥಿತರಿರುವರು.

