HEALTH TIPS

ಅಮೃತಧಾರಾ ಗೋಶಾಲೆಯಲ್ಲಿ ಗಾಯತ್ರಿ ಹವನ


     ಪೆರ್ಲ: ಬಜಕೂಡ್ಲುವಿನ ಶ್ರೀ ಅಮೃತಧಾರಾ ಗೋಶಾಲೆ, ಗೋಲೋಕದ ಗೋವರ್ಧನ ಧರ್ಮ ಮಂದಿರದಲ್ಲಿ ಮುಳ್ಳೇರಿಯಾ ಮಂಡಲಾತರ್ಗತ ಎಣ್ಮಕಜೆ ಹವ್ಯಕ ವಲಯದ ವೈದಿಕ-ಸಂಸ್ಕಾರ ವಿಭಾಗ ವತಿಯಿಂದ ಪರಮಪವಿತ್ರವಾದ ಗಾಯತ್ರೀ ಪ್ರತಿಪತ್ (ಶ್ರಾವಣ ಕೃಷ್ಣ ಪ್ರತಿಪತ್) ನಂದು   ಪ್ರಾಕೃತಿಕ ವೈಪರೀತ್ಯಶಮನ, ದುರಿತನಿವಾರಣೆ, ಆರೋಗ್ಯಪ್ರಾಪ್ತಿ ಹಾಗೂ ಶ್ರದ್ಧಾ-ಮೇಧಾ-ಪ್ರಜ್ಞಾ ಪ್ರಾಪ್ತಿಯ ಉದ್ದೇಶದಿಂದ ಗಾಯತ್ರೀ ಹವನವನ್ನು ಮಹಾಮಂಡಲ ಧರ್ಮ ಕರ್ಮ ಸಹಕಾರ್ಯದರ್ಶಿ ವೇದಮೂರ್ತಿ ಕೇಶವ ಪ್ರಸಾದ ಕೂಟೇಲು ಇವರ ನೇತೃತ್ವದಲ್ಲಿ ಮುಳ್ಳೇರಿಯಾ ಮಂಡಲ ಸಂಸ್ಕಾರ ಪ್ರಮುಖ ನವನೀತಪ್ರಿಯ ಕೈಪ್ಪಂಗಳ ಇವರ ಸಹಾಯದಿಂದ ಜರಗಿತು.
     ಗಾಯತ್ರೀ ಹವನದ  ಆಹುತಿ ಸಮರ್ಪಣೆಯಲ್ಲಿ ಗೋಶಾಲೆ ಅಧ್ಯಕ್ಷ ಜಗದೀಶ ಬಿ ಜಿ, ಸಂಘಟನಾ ಕಾರ್ಯದರ್ಶಿ ವಿನಯಕೃಷ್ಣ ಕಾನದಮೂಲೆ, ಎಣ್ಮಕಜೆ ವಲಯ ಸೇವಾ ವಿಭಾಗ ಪ್ರಮುಖ ಶಂಕರನಾರಾಯಣ ಪ್ರಕಾಶ ಅಬರಾಜೆ, ಕೃಷಿ ವಿಭಾಗ ಪ್ರಮುಖ ಗಣರಾಜ ಕಡಪ್ಪು, ಸಮಾಜ ಸುಕ್ಷೇಮ ಪ್ರಮುಖ ಶಿವಪ್ರಸಾದ ಪಳನೀರು, ಶ್ರೀಕಾರ್ಯಕರ್ತರಾದ ನಿರಂಜನ ಕಡಪ್ಪು ಹಾಗು ಶಿವಶಂಕರ ಭಟ್ ಪೆರ್ಲ ಸಹಕರಿಸಿದರು. ಗೋಪೂಜೆ , ಗೋಪಾಲಕೃಷ್ಣ ಪೂಜೆಯನ್ನು ಈ ಸಂದರ್ಭದಲ್ಲಿ ನೆರವೇರಿಸಲಾಯಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Below Post Ad

Qries