ಸಮರಸ ಚಿತ್ರ ಸುದ್ದಿ: ಬದಿಯಡ್ಕ: ಮುಂಡಿತ್ತಡ್ಕದ ಶ್ರೀಮಹಾವಿಷ್ಣು ಭಜನಾ ಸಂಘ ಮತ್ತು ಶ್ರೀವಿಷ್ಣು ಕಲಾವೃಂದ ಹಾಗೂ ಶ್ರೀವಿಷ್ಣು ಮಹಿಳಾ ವೃಂದಗಳ ಸಂಯುಕ್ತ ಆಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಪ್ರಯುಕ್ತ ಭಾನುವಾರ ಮುಂಡಿತ್ತಡ್ಕದ ಭಜನಾ ಮಂದಿರ ವಠಾರದಲ್ಲಿ ಕ್ರಿಕೆಟ್ ಪಂದ್ಯಾಟವನ್ನು ಆಯೋಜಿಸಲಾಯಿತು.
ಪಂದ್ಯಾಟವನ್ನು ಶ್ರೀವಿಷ್ಣು ಕಲಾವೃಂದದ ಅಧ್ಯಕ್ಷ ತಿಲಕ್ ಆರ್ ಪೂಜಾರಿ ಅವರು ಬಾಲ್ ಮಾಡುವ ಮೂಲಕ ಹಾಗೂ ಮಹಾವಿಷ್ಣು ಭಜನ ಸಂಘದ ಜೊತೆ ಕಾರ್ಯದರ್ಶಿ ಬಾಲಕೃಷ್ಣ ಮಾಸ್ತರ್ ಮುಜುಕೂಮೊಲೆ ಇವರು ಬ್ಯಾಟ್ ಮಾಡುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದರು. ಮಹಾವಿಷ್ಣು ಭಜನಾ ಸಂಘ ದ ಪ್ರಧಾನ ಕಾರ್ಯದರ್ಶಿ ಮೋಕ್ಷಿತ್ ಕುಮಾರ್ ಮತ್ತು ಕಲಾವೃಂದದ ಪ್ರಧಾನ ಕಾರ್ಯದರ್ಶಿ ನಿತ್ಯಪ್ರಕಾಶ್ ಇವರು ಉಪಸ್ಥಿತರಿದ್ದರು.


